ಹಿಂದಿನ ಕಾಲದಲ್ಲಿ ಅಂದರೂ ಆಧುನಿಕ ಯುಗದ ಬದಲಾದ ಕೆಲ ನೋಟಗಳು ಹೀಗಿವೆ.ಅಂದರೆ ಕಳೆದ ಶತಮಾನ ಮತ್ತು ಈ ಶತಮಾನದ ನಡುವಿನ ಬೆಳವಣಿಗೆ ಈ ಬದಲಾವಣೆ ಎನ್ನಬಹುದೇನೋ…
ಆಣೆ ಎಂದಾಗ ನೆನಪಾಗುತ್ತೆ, ರಾಜಕಾರಣ. ರಾಜಕಾರಣಿಗಳ ಕ್ಲೀಷೆಯ ಪದವಾಗಿದೆ ಆಣೆ, ಮಂಜುನಾಥ…ಇದು ಅದಲ್ಲ ನಾವು ಕಂಡ ಆಣೆ ಪಾವಲಿಗಳ ಚಿಕ್ಕದೊಂದು ಸಂಗ್ರಹ.
ಭಾವಗೀತೆ, ಭಕ್ತಿ ಗೀತೆ, ಚಿತ್ರಗೀತೆ ಹೀಗೆ ನನ್ನ ಮನಸ್ಸಿಗೆ ಹಿತ ಎನಿಸಿದ್ದನ್ನು ಕೇಳಿಸಿದ ಆಡಿಯೋ, ವಿಡಿಯೋ ಪ್ಲೇಯರ್. ಇಂದಿಗೂ ಇದೆ.ಜೋಪಾನವಾಗಿ.ಆದರೆ ಸಿ. ಡಿ, ಕ್ಯಾಸೆಟ್ ಮರೆಯಾಗಿ ಹೋಗಿದೆ.
ಚಾರಣದ ಹವ್ಯಾಸದಲ್ಲಿ ಅಂದು ಕೊಂಡದ್ದು ಹಾಟ್ ಶಾಟ್, ಯಾಶೀಕಾ ಕ್ಯಾಮರಾಗಳನ್ನು. ಮುಂದಿನದು ಇವು. ಸಂದರ್ಶನ, ಪ್ರವಾಸ ಸಮಯದಲ್ಲಿ ಉಪಯೋಗಕ್ಕಾಗಿ. ಕ್ಯಾಮರಾ ಈಗಲೂ ಇದೆ. ಆದರೆ ಫಿಲಂ ರೋಲ್ /ನೆಗೆಟಿವ್ ಜಮಾನಾ ಮುಗಿದಿದೆ.
ರೇಡಿಯೋ ಒಂದಕ್ಕೇ ಅವಲಂಬಿತವಾಗಿದ್ದ ಗಾನಾಬಜಾನಾ ಎಂಭತ್ತರ ದಶಕದಲ್ಲಿ ಕ್ಯಾಸೆಟ್ ಪ್ಲೇಯರ್, ರೆಕಾರ್ಡರ್ ಯುಗಕ್ಕೆ ಕಾಲಿಟ್ಟಾಗ ಉಂಟಾದ ಬದಲಾವಣೆ ದೊಡ್ಡದು. ಈ ಡಿಜಿಟಲ್ ಯುಗ ಇದನೀಗ ಮರೆಯಾಗಿಸಿದೆ. ಪ್ಲೇಯರ್ ತನ್ನ ಗತ ವೈಭವ ಹೇಳಿದರೂ ಕ್ಯಾಸೆಟ್ ಸಂಪೂರ್ಣ ಮರೆಯಾಯಿತು.