ಇಲ್ಲ. ಇಂಟರ್ನೆಟ್ ಇಲ್ಲದ ಪ್ರಪಂಚ ಊಹಿಸಲು ಸಾಧ್ಯವಿಲ್ಲ.
- ಇಂಟರ್ನೆಟ್ ಕಾರಣದಿಂದಾಗಿ ಈಗ ಇಡೀ ಪ್ರಪಂಚ ನಮ್ಮ ಮುಷ್ಟಿಯಲ್ಲಿದೆ.
2. ಸೂಪರ್ ಸ್ಪೀಡಿನಿಂದಾಗಿ ಇಡೀ ಭೂಮಿಯೇ ಒಂದು ಹಳ್ಳಿಯಾಗಿದ್ದರೂ ಅದಕ್ಕೆ ವ್ಯತಿರಿಕ್ತವಾಗಿ ಮನೆಯಲ್ಲಿ ಕುಳಿತೇ ಪ್ರಪಂಚದ ಇನ್ನೊಂದು ಮೂಲೆಯ ಕೆಲಸವನ್ನೂ ಮಾಡಲು ಸಾಧ್ಯವಾಗಿದೆ.
3. ರಾಕೆಟ್ ಮೂಲಕ ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣಕ್ಕೆ ಹಾರುವುದನ್ನೂ ಈಗ ಲೈವ್ ನೋಡಬಹುದು. ಅಲ್ಲಿರುವ ತ್ರಿಶಂಕು ಜನರು ಹೇಗೆ ವಾಸಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಕಾಣಿಸಲು ಸಾಧ್ಯ.
4. ಪ್ರಪಂಚದ ಬೇರೆ ಬೇರೆ ಮೂಲೆಗಳಲ್ಲಿ ಸ್ಥಾಪಿತವಾಗಿರುವ ಟೆಲಿಸ್ಕೋಪುಗಳಿಂದ ಒಟ್ಟಿಗೇ ನೋಡಿ ಬ್ಲ್ಯಾಕ್ ಹೋಲ್ಗಳ ಪತ್ತೆ ಹಚ್ಚಬಹುದು.
5. ಬರೇ ಕಂಪ್ಯೂಟರ್ ಅಥವಾ ಮೊಬೈಲುಗಳಲ್ಲದೆ ಈಗ ಯಾವ ವಸ್ತುಗಳನ್ನು ಬೇಕಾದರೂ ಇಂಟರ್ನೆಟ್ ಗೆ ಜೋಡಿಸಬಹುದು. ಹಾಗಾಗಿ ಕಾರು ಸ್ಮಾರ್ಟ್, ಮನೆ ಸ್ಮಾರ್ಟ್, ಸಿಟಿ ಸ್ಮಾರ್ಟ್, ವಿದ್ಯುತ್ ಗ್ರಿಡ್ ಸ್ಮಾರ್ಟ್, ತೋಟ ಸ್ಮಾರ್ಟ್ - ಹೀಗೆ ಎಲ್ಲವೂ ಸ್ಮಾರ್ಟ್ ಆಗುತ್ತಿವೆ.
6. ಸರ್ಕಾರ, ಉದ್ಯಮ, ವಿದ್ಯಾಭ್ಯಾಸ, ವ್ಯಾಪಾರ, ಪ್ರಯಾಣ, ಮನರಂಜನೆ, ಉದ್ಯೋಗ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳನ್ನು ಇಂಟರ್ನೆಟ್ ಆವರಿಸಿಕೊಂಡಿದೆ.
7. ಗಾಳಿ, ಬೆಳಕು, ನೀರು, ಆಹಾರ, ಬಟ್ಟೆ, ಮನೆ - ಈ ರೀತಿಯ ಮೂಲಭೂತ ಅವಶ್ಯಕತೆ ಆಗಿಬಿಟ್ಟಿದೆ ಈ ಇಂಟರ್ನೆಟ್.
8. ಸಂಸ್ಕೃತಿಯ ಮೇಲೆ ಇಂಟರ್ನೆಟ್ ಪ್ರಭಾವ ಕಡಿಮೆಯೇನಲ್ಲ. ಈಗ ಎಲ್ಲರೂ ತಮ್ಮ ಕಲಾಚಾತುರ್ಯವನ್ನು, ಪ್ರತಿಭೆಯನ್ನು ಇಡೀ ಜಗತ್ತಿಗೆ ತೋರಿಸಬಹುದು.
9. ಪ್ರತಿಯೊಂದು ಕ್ಷೇತ್ರದಲ್ಲಿ ಏನಾದರೂ ಹೊಸತು ಮಾಡಬೇಕು ಎನ್ನುವವರಿಗೆ ಇಂಟರ್ನೆಟ್ ಅನಂತ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ.
10. ಅಂತರ್ಮುಖಿ ಮನುಷ್ಯನೂ ತನಗೆ ಇಷ್ಟವಾದ ರೀತಿಯಲ್ಲಿ ತನ್ನನ್ನು ತಾನು ಜಗತ್ತಿಗೆ ತೋರಿಸಿಕೊಳ್ಳಬಹುದಾಗಿದೆ.