Tuesday, December 31, 2024

ಸುಜಾತಾ

    



 ಸುಜಾತಾ ಅವರು ಸಂತಸ, ದುಃಖ, ಪ್ರೀತಿ, ಭಾವುಕತೆ, ಇತ್ಯಾದಿಗಳನ್ನು ತಮ್ಮ ಕಣ್ಗಳಲ್ಲಿ, ಮುಖಚರ್ಯೆಯಲ್ಲಿ, ಆಡಂಬರವಿಲ್ಲದ ಸುಸಂಸ್ಕೃತ ಸಂಯಮದ ಹಾವಭಾವಗಳಲ್ಲಿ ಅಭಿವ್ಯಕ್ತಿಸುತ್ತಿದ್ದ ಕಲಾವಿದೆ ಈಕೆ.


    ಸುಜಾತಾ 1952ರ ಡಿಸೆಂಬರ್ 10ರಂದು ಶ್ರೀಲಂಕಾದಲ್ಲಿದ್ದ ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಶ್ರೀಲಂಕಾದಲ್ಲಿ ಬಾಲ್ಯ ಕಳೆದು 15ನೇ ವಯಸ್ಸಲ್ಲಿ ಕೇರಳಕ್ಕೆ ವಲಸೆ ಬಂದರು. ಶಾಲೆಯಲ್ಲಿದ್ದಾಗಲೇ ನಟನೆ ಇವರಿಗೆ ಇಷ್ಟವಾಗಿತ್ತು. ಕೇರಳಕ್ಕೆ ಬಂದ ಹೊಸತರಲ್ಲೇ 'ಎರ್ನಾಕುಲಂ ಜಂಕ್ಷನ್' ಎಂಬ ಮಲಯಾಳದ ಚಿತ್ರದಲ್ಲಿ ನಟಿಸಿದರು.

    ಮುಂದೆ ಸುಜಾತಾ ಮಲಯಾಳದ 'ತಪಸ್ವಿನಿ' ಚಿತ್ರದಲ್ಲಿ ನಟಿಸಿದರು. ತಮಿಳಿನಲ್ಲಿ ಕೆ. ಬಾಲಚಂದರ್ ಅವರ ಪ್ರಸಿದ್ಧ 'ಅವಳ್ ಒರು ತೊಡರ್ ಕಥೈ' ಅವರ ಪ್ರಥಮ ತಮಿಳು ಚಿತ್ರ. ಮುಂದೆ ಬಾಲಚಂದರ್ ಅವರ ಮತ್ತೊಂದು ಪ್ರಸಿದ್ಧ 'ಅವರ್ಗಳ್' ಚಿತ್ರದಲ್ಲಿ ಆಕೆ ರಜನೀಕಾಂತ್ ಮತ್ತು ಕಮಲಹಾಸನ್ ಜೊತೆಗೆ ನಟಿಸಿದರು. ಇದಲ್ಲದೆ ಅಣ್ಣಕ್ಕಿಳಿ, ವಿಧಿ, ಮಯಂಗುಗಿರಾಳ್ ಒರು ಮಾದು, ಸೆಂತಮಿಯ್ ಪಾಟ್ಟು, ಅವಳ್ ವರುವಾಳಾ, ಗುಪ್ಪೇದು ಮನಸು ಮುಂತಾದವು ಅವರ ಪ್ರತಿಭೆಯನ್ನು ಬೆಳಗಿದ ಇನ್ನಿತರ ಚಿತ್ರಗಳು.

    ಸುಜಾತಾ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದರು. ಅವರು ಗ್ಲಾಮರ್ ಪಾತ್ರಗಳಿಗೆ ಹೆಚ್ಚು ಗಮನಹರಿಸದೆ ಉತ್ತಮ ಅಭಿನಯಕ್ಕೆ ಆಸ್ಪದವಿದ್ದ ಪಾತ್ರಗಳಿಗೇ ಗಮನವಿತ್ತರು. ಮುಂದೆ ಅವರು ಹಿರಿಯ ಪಾತ್ರಗಳಲ್ಲಿ ನಟಿಸಿದರು. ಕನ್ನಡದಲ್ಲಿ 'ನನ್ನ ದೇವರು', 'ತುತ್ತಾ ಮುತ್ತಾ', 'ಕಿಚ್ಚ', 'ನೀಲಕಂಠ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

    ಸುಜಾತಾ ಅವರಿಗೆ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯದ ಹಲವು ಪ್ರಶಸ್ತಿಗಳು ಮತ್ತು ಅನೇಕ ಫಿಲಂಫೇರ್ ಪ್ರಶಸ್ತಿಗಳು ಸಂದಿದ್ದವು.

    ಹೃದಯ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸುಜಾತಾ 2011ರ ಏಪ್ರಿಲ್ 6ರಂದು ಅನಿರೀಕ್ಷಿತ ರೀತಿಯಲ್ಲಿ ನಿಧನರಾದರು. ಸಂಯಮದ ಪಾತ್ರಗಳನ್ನೇ ಆಯ್ದುಕೊಂಡರೂ ಬೇಡಿಕೆ ಮತ್ತು ಜನಪ್ರಿಯತೆಗಳನ್ನು ನಿರಂತರವಾಗಿ ಕಾಯ್ದುಕೊಂಡ ಸುಜಾತ ನೆನಪಲ್ಲುಳಿಯುವ ಆಪ್ತ ಪ್ರತಿಭೆ.

ಮಾಹಿತಿ ಕೃಪೆ : ಕನ್ನಡ ಸಂಪದ ಫೇಸ್ಬುಕ್ ಲೇಖನ

ದಿನನಿತ್ಯದ ಪ್ರಾರ್ಥನೆಗಳು

 ಪ್ರಾತ: ಕಾಲದಲ್ಲಿ ಹೇಳಬೇಕಾದ ಮಂತ್ರಗಳು

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತೀ |
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ||

ಸ್ನಾನ ಕಾಲದಲ್ಲಿ ಹೇಳಬೇಕಾದ ಮಂತ್ರಗಳು

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಽಸ್ಮಿನ್ ಸನ್ನಿಧಿಂ ಕುರು ||

ತೀರ್ಥ ಪ್ರಾಶನೆ ಮಾಡುವಾಗ

ಅಕಾಲಮೃತ್ಯುಹರಣಂ ಸರ್ವವ್ಯಾಧಿನಿವಾರಣಮ್ |
ಸಮಸ್ತ ಪಾಪಶಮನಂ ವಿಷ್ಣು ಪಾದೋದಕಂ ಶುಭಮ್ ||

ಪ್ರದಕ್ಷಿಣೆ ಹಾಕುವಾಗ

ಪ್ರದಕ್ಷಿಣತ್ರಯಂ ಕೃತ್ವಾ ನಮಸ್ಕಾರಾಂಶ್ಚ ಪಂಚ ಚ |
ಪುನಃ ಪ್ರದಕ್ಷಿಣಂ ಕೃತ್ವಾ ಪುನರ್ಜನ್ಮ ನ ವಿದ್ಯತೇ ||

ಭೋಜನವನ್ನು(ಊಟ)ಮಾಡುವಾಗ

ಅನ್ನಪೂರ್ಣೆ ಸದಾಪೂರ್ಣೆ ಶಂಕರಪ್ರಾಣವಲ್ಲ ಭೇ |
ಜ್ಞಾನವೈರಾಗ್ಯಸಿದ್ಧರ್ಥ೦ ಭಿಕ್ಷಾಂ ದೇಹಿ ಚ ಪಾರ್ವತಿ ॥
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನ೦ ಚತುರ್ವಿಧಂ |

ಸಂಕಷ್ಟಗಳ ನಿವಾರಣೆಯನ್ನು ಪರಿಹರಿಸಲು

ದರಿದ್ರ ವಿಪ್ರ ಗೇಹೇಯಃ ಶಾಕಂ ಭುಕೊಲ್ವುತ್ತ ಮಾಂ ಪ್ರಿಯಮ್ |
ದದೌ ಶ್ರೀ ದತ್ತ ದೇವಃ ಸಃ ದಾರಿದ್ರಾ ಚ್ಛೀ ಪ್ರದೋಭವತು ||

ದು:ಸ್ವಪ್ನ ನಿವಾರಣೆಗೆ(ಕೆಟ್ಟ ಕನಸುಗಳು ಬಂದರೆ)

ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್ |
ಶಯನೇ ಯಃಸ್ಮರೇನ್ನಿತ್ಯಂ ದುಃಸ್ವಪ್ನ೦ತಸ್ಯ ನಶ್ಯತಿ ||

ದೀಪವನ್ನು ಪ್ರಜ್ವಾಲನೆ ಮಾಡುವಾಗ

ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ |
ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋSಸ್ತುತೇ ||
ದೀಪಜ್ಯೋತಿಃ ಪರಂಬ್ರಹ್ಮ ದೀಪಜ್ಯೋತಿರ್ಜನಾರ್ದನ: |
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನೋSಸ್ತು ತೇ ||

ಅಶ್ವತ್ಥ ವೃಕ್ಷಕ್ಕೆ ವಂದಿಸುವಾಗ

ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣು ರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ ||

ಕಾರ್ಮಿಕರ ಕಾಯ್ದೆಗಳು




☘ 1926:- ಟ್ರೇಡ್ ಯೂನಿಯನ್ ಕಾಯ್ದೆ

☘ 1947:- ಕೈಗಾರಿಕಾ ವಿವಾದಗಳ ಕಾಯ್ದೆ

☘1948:- ಕಾರ್ಖಾನೆ ಕಾಯ್ದೆ

☘ 1948:- ಕನಿಷ್ಠ ಕೂಲಿ ಕಾಯ್ದೆ

☘ 1952:- ಗಣಿ ಕಾಯ್ದೆ

☘ 1956:- ಕಂಪನಿ ಅಧಿನಿಯಮಗಳ ಕಾಯ್ದೆ

☘ 1961:- ಭೂ ಸುಧಾರಣಾ ಕಾಯ್ದೆ
             :- ಆದಾಯ ತೆರಿಗೆ ಕಾಯ್ದೆ
             :- ವರದಕ್ಷಣೆ ಕಾಯ್ದೆ

☘ 1976:- ಜೀತಗಾರಿಕೆ ನಿರ್ಮೂಲನಾ ಕಾಯ್ದೆ

☘ 1976:- ಸಮಾನ ವೇತನ ಕಾಯ್ದೆ

☘ 1986:- ಬಾಲಕಾರ್ಮಿಕ ನಿಷೇಧ ಕಾಯ್ದೆ

☘ 2005:- ಕೌಟುಂಬಿಕ ದೌರ್ಜನ್ಯ ಕಾಯ್ದೆ

☘ 2005:- ಮಾಹಿತಿ ಹಕ್ಕು ಅಧಿನಿಯಮ

☘ 2008:- ಅಸಂಘಟಿತ ಕಾರ್ಮಿಕರ ಭದ್ರತಾ ಕಾಯ್ದೆ

☘ 2010:- ಪ್ಲಾಂಟೇಶನ್ ಲೇಬರ್ ಕಾಯ್ದೆ

Monday, December 30, 2024

ನಮ್ಮಮ್ಮ ಶಾರದೆ ಉಮಾಮಹೇಶ್ವರಿ

 



ನಮ್ಮಮ್ಮ ಶಾರದೆ ಉಮಾಮಹೇಶ್ವರಿ

ನಿಮ್ಮೊಳಗಿಹನ್ಯಾರಮ್ಮ
ಕಮ್ಮಗೋಲನವೈರಿಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ ಅಮ್ಮಯ್ಯ
ಮೋರೆ ಕಪ್ಪಿನಭಾವ ಮೊರದಗಲದ ಕಿವಿ
ಕೋರೆದಾಡೆಯನ್ಯಾರಮ್ಮ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೇ ಅಮ್ಮಯ್ಯ
ಉಟ್ಟ ದಟ್ಟಿಯು ಬಿಗಿದುಟ್ಟ ಚಲ್ಲಣವು
ಧಿಟ್ಟ ತಾನಿವನ್ಯಾರಮ್ಮ
ಪಟ್ಟದರಾಣಿ ಪಾರ್ವತಿಯ ಕುಮಾರ
ಹೊಟ್ಟೆಯ ಗಣನಾಥನೆ ಅಮ್ಮಯ್ಯ
ರಾಶಿವಿದ್ಯೆಯ ಬಲ್ಲ ರಮಣಿಹಂಬಲನೊಲ್ಲ
ಬಾಷಿಗನಿವನ್ಯಾರಮ್ಮ
ಲೇಸಾಗಿ ಸುಜನರ ಸಲಹುವ ನೆಲೆಯಾದಿ
ಕೇಶವನ ದಾಸ ಕಾಣೇ ಅಮ್ಮಯ್ಯ

ನಮ್ಮ ಶರೀರದ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು

 


*ನಮ್ಮ ದೇಹಕ್ಕೆ ಯಾವ್ದು ಸರಿ? ಚಳಿ ಇದ್ರೆ ಒಳ್ಳೆದಾ? ಬಿಸಿಲಾದ್ರೆ ಒಳ್ಳೆದಾ? ಯಾವ್ದು ಶೀತ ಯಾವ್ದು ಉಷ್ಣ, ಏನು ತಿಂದ್ರೆ ಒಳ್ಳೇದು ಏನು ಮಾಡಿದ್ರೆ ಒಳ್ಳೇದು... ಈ ಎಲ್ಲಾ ವಿಷಯಗಳು ನಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ನಮ್ಮ ದೇಹದ ಬಗ್ಗೆ ತಿಳ್ಕೊಳಕ್ಕೆ ಬ್ರಹ್ಮಾಂಡದಷ್ಟಿದೆ. ಅದರಲ್ಲಿ ನೀವು ಪ್ರಾಯಶಃ ಕೇಳಿಲ್ಲದಿರೋ 42 ವಿಷಯಗಳ್ನ ಹೇಳ್ತೀವಿ ಕೇಳಿ… ಮೊದಲು ಕೇಳಿದಾಗ ನಮಗೆ ಬಹಳ ಆಶ್ಚರ್ಯ ಆಯಿತು. ನಿಮಗೂ ಆಗೋದ್ರಲ್ಲಿ ಸಂದೇಹ ಇಲ್ಲ, ಓದ್ತಾ ಹೋಗಿ…*


*1. ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ - ಬೆರಳಚ್ಚು ಹೇಗೋ ಹಾಗೆ ಸೈನ್ ಹಾಕಕ್ಕೆ ಬರದೆ ಇರೋರು ಹೆಬ್ಬೆಟ್ಟು ಯಾಕೆ ಒತ್ತುತ್ತಾರೆ ಹೇಳಿ? ಯಾಕಂದ್ರೆ ಬೆರಳಚ್ಚು ಒಬ್ಬೊಬ್ಬರಿಗೂ ಬೇರ್ಬೇರೆ. ಹಾಗೇ ನಿಮ್ಮ ನಾಲಿಗೆ ಅಚ್ಚು ಕೂಡ ಬೇರೆಯೋರ ತರಹ ಇರಲ್ಲ.*

*2. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತೆ ಅದಕ್ಕೆ.*

*3. ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಲ್ಲೂ ಇರುತ್ವೆ. ಆದ್ರೆ ಅವು ತೊಂದ್ರೆ ಮಾಡಲ್ಲ ಬಿಡಿ.*

*4. ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಅಂತರ್ಥ.*

*5. ನಿಮ್ಮ ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚೆಲಿಸುತ್ತೆ.*

*6. ಮನುಷ್ಯನ ರಕ್ತದಲ್ಲಿ 29 ಬಗೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತೆ.*

*7. ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.*

*8. ನಮ್ಮ ದೇಹದ ನರಗಳನ್ನೆಲ್ಲ ಒಟ್ತುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.*

*9. ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡ್ತೀವಿ.*

*10. ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.*

*11. ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ - ವರ್ಷಕ್ಕೆ 0.25 mm ನಷ್ಟು*

*12. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.*

*13. ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕ 2 ಕಿಲೋ ಗೊತ್ತಾ!*

*14. ನಮ್ಮ ಚರ್ಮದ 1 sq.cm ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.*

*15. ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.*

*16. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.*

*17. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡ್ತಾರೆ*

*18. ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ವೆ.*

*19. ನೀವು ಶೀತ ಆದಾಗ ಸೀನ್ತೀರಲ್ಲ ಅದರ ವೇಗ ಗಂಟೆಗೆ 160 ಕಿ. ಮೀ ಇರುತ್ತೆ.*

*20. ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ… ಅತ್ತಾಗ 43... ಅಂದ್ರೆ ಅಳಕ್ಕೆ ಕೆಲಸ ಜಾಸ್ತಿ ಮಾಡಬೇಕು*

*21. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ*

*22. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದಸಿಗಲ್ಲ*

*23. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ*

*24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ*

*25. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.*

*26. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.*

*27. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.*

*28. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ*

*29. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!*

*30. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...*

*31. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ*

*32. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ*

*33. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.*

*34. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ*

*35. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ*

*36. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ*

*37. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.*

*38. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.*

*39. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ*

*40. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ*

*41. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ*

*42. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.*

World's Top 10 longest road tunnels



 1 – Lærdal, Norway, between Lærdal and Aurland: measuring 24.51 kilometres in length, built in 2000.

2 – Yamate Tunnel, Japan, in Tokyo: measuring 18.2 kilometres in length, built in 2015.

3 – Zhongnanshan Tunnel, China, in Shaanxi: measuring 18.04 kilometres in length, built in 2017.

4 – Jinpingshan Tunnel, Sichuan, China: measuring 17.54 kilometres in length, built in 2011.

5 – St. Gotthard, Switzerland, between Göschenen and Airolo: measuring 16.84 kilometres in length, built in 1980.

6 – Tiantaishan Tunnel, China, in Shaanxi: measuring 15.56 kilometres in length, built in 2021.

7 – Ryfylke Tunnel, Norway, between Stavanger and Ryfylke: measuring 14.46 kilometres in length, built in 2019.

8 – Mount Ovit Tunnel, in Turkey, between Ikizdere and İspir: measuring 14.346 kilometres in length, built in 2018.

9 – Arlberg, Austria, between Vorarlberg and Tyrol: measuring 13.972 kilometres in length, built in 1978.

10 – Micangshan Tunnel, Sichuan, China: measuring 13.8 kilometres in length, built in 2018.

Interestingly, the oldest tunnels on the list of the world’s ten longest road tunnels are along the Alpine arc, in Switzerland and Austria. The top ten is largely dominated by China, which has built many long tunnels over the last decade, two in Sichuan alone.

 

Sunday, December 29, 2024

ವಿಶ್ವದ 10 ಅತೀ ಉದ್ದದ ರಸ್ತೆಗಳು







ಈ ದಿನಗಳಲ್ಲಿ, ನಮ್ಮ ರಸ್ತೆಗಳು ಹೆಚ್ಚು ಉದ್ದವಾಗಿವೆ, ಅವುಗಳಲ್ಲಿ ಕೆಲವು ಸಾವಿರಾರು ಮೈಲುಗಳಷ್ಟು ಭೂಪ್ರದೇಶವನ್ನು ಹಾದುಹೋಗುತ್ತವೆ, ಅದು ಅವುಗಳಿಲ್ಲದೆ ಬಹುತೇಕ ದಾಟಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಮಾನವರು ನಿರ್ಮಿಸಿದ ಒಂಬತ್ತು ಉದ್ದದ ರಸ್ತೆಗಳು ಇಲ್ಲಿವೆ.

1. ಪ್ಯಾನ್-ಅಮೆರಿಕನ್ ಹೆದ್ದಾರಿ

ಉದ್ದದ ರಸ್ತೆಗಳು
ಪೆರುವಿನಲ್ಲಿರುವ ನಾಜ್ಕಾ ಪ್ರಸ್ಥಭೂಮಿಯ ಮೂಲಕ ಹಾದು ಹೋಗುವಾಗ ಪ್ಯಾನ್-ಅಮೆರಿಕನ್ ಹೆದ್ದಾರಿಯು ಕಣ್ಮರೆಯಾಗುತ್ತದೆ. ಟೆರೆಖೋವ್ ಇಗೊರ್/ಶಟರ್‌ಸ್ಟಾಕ್

ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಪ್ಯಾನ್-ಅಮೆರಿಕನ್ ಹೆದ್ದಾರಿಯು ವಿಶ್ವದ ಅತಿ ಉದ್ದದ ಮೋಟಾರು ಮಾರ್ಗವಾಗಿದೆ . ಆರ್ಕ್ಟಿಕ್ ಮಹಾಸಾಗರದಿಂದ ಅಲಾಸ್ಕಾದ ಪ್ರುಧೋ ಕೊಲ್ಲಿಯಲ್ಲಿ ದಕ್ಷಿಣ ಅಮೆರಿಕಾದ ದಕ್ಷಿಣ ತುದಿಯವರೆಗೆ ಸುಮಾರು 19,000 ಮೈಲುಗಳು (30,000 ಕಿಲೋಮೀಟರ್) ಆವರಿಸುತ್ತದೆ, ಇದು ಆರ್ಕ್ಟಿಕ್ ಟಂಡ್ರಾದಿಂದ ಉಷ್ಣವಲಯದ ಮಳೆಕಾಡುಗಳವರೆಗೆ 14 ದೇಶಗಳು ಮತ್ತು ವಿವಿಧ ಭೂದೃಶ್ಯಗಳು ಮತ್ತು ಭೂಪ್ರದೇಶಗಳ ಮೂಲಕ ಸುತ್ತುತ್ತದೆ. ಪ್ಯಾನ್-ಅಮೆರಿಕನ್ ಹೆದ್ದಾರಿಯ ಪ್ರಯಾಣಿಕರು ಕೋಸ್ಟರಿಕಾದಲ್ಲಿ 11,322-ಅಡಿ (3,450-ಮೀಟರ್) ಪರ್ವತ ಶಿಖರವನ್ನು Cerro de la Muerte - ಅಥವಾ Summit of Death - ಅನ್ನು ಓಡಿಸಲು ಸಿದ್ಧರಾಗಿರಬೇಕು ಮತ್ತು ನಂತರ ಡೇರಿಯನ್ ಗ್ಯಾಪ್ ಅನ್ನು ಸುಮಾರು 60 ಮೈಲುಗಳಷ್ಟು ಧೈರ್ಯಶಾಲಿಯಾಗಿರಬೇಕು ( 97 ಕಿಲೋಮೀಟರ್) ಪನಾಮ ಮತ್ತು ಕೊಲಂಬಿಯಾ ನಡುವೆ, ಇದು ಸುಸಜ್ಜಿತವಾಗಿ ಉಳಿದಿಲ್ಲ.

2. ಆಸ್ಟ್ರೇಲಿಯಾ ಹೆದ್ದಾರಿ ಒಂದು

ಉದ್ದದ ರಸ್ತೆಗಳು
ಆಸ್ಟ್ರೇಲಿಯಾ ಹೆದ್ದಾರಿ ಒಂದು ದಕ್ಷಿಣ ಆಸ್ಟ್ರೇಲಿಯಾದ ಸ್ಪೆನ್ಸರ್ ಗಲ್ಫ್‌ನ ಪೂರ್ವ ಕರಾವಳಿಯಲ್ಲಿರುವ ಪೋರ್ಟ್ ಪಿರಿ ಎಂಬ ಸಣ್ಣ ನಗರದಿಂದ ಹಾದುಹೋಗುತ್ತದೆ. ಮೈಕೆಲ್ ಕೋಗ್ಲಾನ್ / ಫ್ಲಿಕರ್ (CC BY SA 2.0)

ಆಸ್ಟ್ರೇಲಿಯಾದಲ್ಲಿ, ಅವರು 9,000-ಮೈಲಿ (14,500-ಕಿಲೋಮೀಟರ್) ಹೆದ್ದಾರಿಯನ್ನು "ದ ಬಿಗ್ ಲ್ಯಾಪ್" ಎಂದು ಕರೆಯುತ್ತಾರೆ ಏಕೆಂದರೆ ಇದು ಇಡೀ ಖಂಡದ ಕರಾವಳಿಯನ್ನು ಅಪ್ಪಿಕೊಳ್ಳುತ್ತದೆ. ಇದು ಆಸ್ಟ್ರೇಲಿಯಾದ ಪ್ರತಿಯೊಂದು ರಾಜ್ಯದ ಮೂಲಕ ಹಾದುಹೋಗುತ್ತದೆ ಮತ್ತು ಅದರ ಎಂಟು ರಾಜಧಾನಿಗಳಲ್ಲಿ ಏಳನ್ನು ಸಂಪರ್ಕಿಸುತ್ತದೆ, ಬಾಸ್ ಜಲಸಂಧಿಯ ಮೇಲೆ ಟ್ಯಾಸ್ಮೆನಿಯಾಗೆ ಸಹ ಪಾಪಿಂಗ್ ಮಾಡುತ್ತದೆ.

ಹೈವೇ ಒನ್‌ನ ನಿರ್ಮಾಣವು 1955 ರಲ್ಲಿ ಪ್ರಾರಂಭವಾಯಿತು, ಮತ್ತು ಇದು ಈಗ ವಿಶ್ವದ ಅತಿ ಉದ್ದದ ನಿರಂತರ ರಸ್ತೆಯಾಗಿದೆ , ಪ್ರತಿದಿನ ಒಂದು ಮಿಲಿಯನ್ ಆಸ್ಟ್ರೇಲಿಯನ್ನರು ಅದರಲ್ಲಿ ಪ್ರಯಾಣಿಸುತ್ತಾರೆ.

3. ಟ್ರಾನ್ಸ್-ಸೈಬೀರಿಯನ್ ಹೆದ್ದಾರಿ

ಉದ್ದದ ರಸ್ತೆಗಳು
ಈ ವೈಮಾನಿಕ ನೋಟವು ರಷ್ಯಾದ ಕುಲ್ಟುಕ್, ಸ್ಲ್ಯುಡಿಯಾಂಕಾದಲ್ಲಿನ ಪರ್ವತ ಕಣಿವೆಯನ್ನು ತೋರಿಸುತ್ತದೆ, ಇದು ಸರ್ಪ ಟ್ರಾನ್ಸ್-ಸೈಬೀರಿಯನ್ ಹೆದ್ದಾರಿಯಿಂದ ಹಾದುಹೋಗುತ್ತದೆ. ಕ್ವಾಟ್ರಾಕ್ಸ್ ಉತ್ಪಾದನೆ/ಶಟರ್‌ಸ್ಟಾಕ್

ಟ್ರಾನ್ಸ್-ಸೈಬೀರಿಯನ್ ಹೆದ್ದಾರಿಯು ರಷ್ಯಾದಾದ್ಯಂತ ಸೇಂಟ್ ಪೀಟರ್ಸ್‌ಬರ್ಗ್‌ನಿಂದ ವ್ಲಾಡಿವೋಸ್ಟಾಕ್‌ಗೆ 6,800-ಮೈಲಿ (11,000-ಕಿಲೋಮೀಟರ್) ಮಾರ್ಗವಾಗಿದೆ. ಟ್ರಾನ್ಸ್-ಸೈಬೀರಿಯನ್ ನಿರ್ಮಾಣವು 1949 ರಲ್ಲಿ ಪ್ರಾರಂಭವಾಯಿತು, ಆದರೆ ಫೆಡರಲ್ ಹೆದ್ದಾರಿಗಳ ಹೆಚ್ಚಿನ ಪ್ಯಾಚ್‌ವರ್ಕ್ ತುಲನಾತ್ಮಕವಾಗಿ ಹೊಸದು, 2015 ರಲ್ಲಿ ಮಾತ್ರ ಸಂಪೂರ್ಣವಾಗಿ ಸುಸಜ್ಜಿತವಾಯಿತು . ಇದು ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಮಹಾಸಾಗರಗಳೆರಡನ್ನೂ ಮುಟ್ಟುತ್ತದೆ ಮತ್ತು ನಡುವೆ ವಿಶಾಲವಾದ ದೂರದ ಪ್ರದೇಶವನ್ನು ವ್ಯಾಪಿಸುತ್ತದೆ - ಕೆಲವು ಸ್ಥಳಗಳಲ್ಲಿ, ಗ್ಯಾಸೋಲಿನ್ ಸಹ ಲಭ್ಯವಿರುವುದಿಲ್ಲ .

4.ಪಶ್ಚಿಮ ಯುರೋಪ್ - ಪಶ್ಚಿಮ ಚೀನಾ ಹೆದ್ದಾರಿ : ವಿಶ್ವದ ಅತಿ ಉದ್ದದ ರಸ್ತೆಗಳಲ್ಲಿ ಒಂದಾದ ಚೀನಾದಿಂದ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಹೋಗಲು 8.445 ಕಿಮೀ ತೆಗೆದುಕೊಳ್ಳುತ್ತದೆ. ಪಶ್ಚಿಮ ಯುರೋಪ್-ಪಶ್ಚಿಮ ಚೀನಾ ಹೆದ್ದಾರಿ ಯುರೋಪ್ ಮತ್ತು ಏಷ್ಯಾದ ನಡುವೆ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ, ಹೆದ್ದಾರಿಯು ಎರಡು ಪ್ರದೇಶಗಳ ನಡುವಿನ ಜನರು ಮತ್ತು ಸರಕುಗಳಿಗೆ ಪ್ರಮುಖ ಸಾರಿಗೆ ಮಾರ್ಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಹೆಚ್ಚು ಹೆಚ್ಚು ಜನರು ಮತ್ತು ವ್ಯವಹಾರಗಳು ಅನುಕೂಲಕರ ಮತ್ತು ವೆಚ್ಚ-ಪರಿಣಾಮಕಾರಿ ಮಾರ್ಗದ ಲಾಭವನ್ನು ಪಡೆದುಕೊಳ್ಳುವುದರಿಂದ ರಸ್ತೆಯ ದಟ್ಟಣೆಯು ಗಮನಾರ್ಹವಾಗಿ ಹೆಚ್ಚಾಗಿದೆ. ಪಶ್ಚಿಮ ಯುರೋಪ್ - ಪಶ್ಚಿಮ ಚೀನಾ ಮೋಟಾರು ಮಾರ್ಗವು ಜಾಗತಿಕ ಸಾರಿಗೆ ಜಾಲದಲ್ಲಿ ಅತ್ಯಗತ್ಯ ಲಿಂಕ್ ಆಗಿದೆ. ವಿಶ್ವಾದ್ಯಂತ ಆರ್ಥಿಕತೆಯ ಭವಿಷ್ಯದ ಬೆಳವಣಿಗೆಯಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುವುದು ಖಚಿತ. 

5. ಟ್ರಾನ್ಸ್-ಕೆನಡಾ ಹೆದ್ದಾರಿ

ಉದ್ದದ ರಸ್ತೆಗಳು
ಟ್ರಾನ್ಸ್-ಕೆನಡಾ ಹೆದ್ದಾರಿಯು ಕೆನಡಾದ ಬ್ಯಾನ್ಫ್ ರಾಷ್ಟ್ರೀಯ ಉದ್ಯಾನವನದ ಬಳಿ ಸಾಗುತ್ತದೆ, ಬೃಹತ್ ಮೌಂಟ್ ಬೂರ್ಗೋ ಹಿನ್ನೆಲೆಯಲ್ಲಿ ಭವ್ಯವಾಗಿ ನಿಂತಿದೆ. ಸೀನ್ ಕ್ಸು/ಶಟರ್‌ಸ್ಟಾಕ್

ಟ್ರಾನ್ಸ್-ಕೆನಡಾ ಹೆದ್ದಾರಿಯು ವಿಶ್ವದ ಎರಡನೇ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಯಾಗಿದೆ, ಇದು ದೇಶದ 4,645 ಮೈಲುಗಳು (7,476 ಕಿಲೋಮೀಟರ್) ವ್ಯಾಪಿಸಿದೆ ಮತ್ತು ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳ ನಡುವೆ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತದೆ. ಇದು ಎಲ್ಲಾ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ ಮತ್ತು ಪ್ರತಿ ಕೆನಡಾದ ಪ್ರಾಂತ್ಯದ ಮೂಲಕ ಹಾದುಹೋಗುತ್ತದೆ. 1971 ರಲ್ಲಿ ಪೂರ್ಣಗೊಂಡ ನಂತರ, ಇದು ವಿಶ್ವದ ಅತಿ ಉದ್ದದ ನಿರಂತರ ಹೆದ್ದಾರಿಯಾಗಿದೆ .

ದೇಶದ ಒರಟಾದ ಭೂಪ್ರದೇಶದಿಂದಾಗಿ ಕೆನಡಾದಾದ್ಯಂತ ಹೆದ್ದಾರಿಯನ್ನು ನಿರ್ಮಿಸುವುದು ಸುಲಭದ ಸಾಧನೆಯಾಗಿರಲಿಲ್ಲ. 1912 ರಲ್ಲಿ , ಆಟೋಮೊಬೈಲ್ ಬಫ್‌ಗಳ ಗುಂಪು ಹ್ಯಾಲಿಫ್ಯಾಕ್ಸ್‌ನಿಂದ ವ್ಯಾಂಕೋವರ್‌ಗೆ ಕಾರನ್ನು ಓಡಿಸುವ ಯಾರಿಗಾದರೂ ಚಿನ್ನದ ಪದಕವನ್ನು ನೀಡಿತು. ಸವಾಲನ್ನು ಪೂರ್ಣಗೊಳಿಸಿದ ಮೊದಲ ವ್ಯಕ್ತಿ ಇದನ್ನು ಎರಡು ತಿಂಗಳಲ್ಲಿ ಮಾಡಿದರು, ಆದರೆ ಅವರು ಪದಕವನ್ನು ಗೆಲ್ಲಲಿಲ್ಲ ಏಕೆಂದರೆ ಪ್ರಯಾಣದ ಹೆಚ್ಚಿನ ಭಾಗಗಳು ಅವನ ಕಾರನ್ನು ರೈಲ್‌ಕಾರ್‌ಗೆ ಅಥವಾ ಹಡಗಿನ ಡೆಕ್‌ಗೆ ಕಟ್ಟಿದವು. ಇಂದು ಟ್ರಾನ್ಸ್-ಕೆನಡಾ ಹೆದ್ದಾರಿಯನ್ನು 57 ಗಂಟೆಗಳಲ್ಲಿ ಓಡಿಸಬಹುದು .

6. ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಹೈವೇ ನೆಟ್ವರ್ಕ್

ಅಸಾಧಾರಣವಾಗಿ ಹೆಸರಿಸಲಾದ ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಹೈವೇ ನೆಟ್‌ವರ್ಕ್ , ಹೆಸರೇ ಸೂಚಿಸುವಂತೆ, 3,633-ಮೈಲಿ (5,846-ಕಿಲೋಮೀಟರ್) ಹೆದ್ದಾರಿಗಳ ಜಾಲವು ನಾಲ್ಕು-ಬದಿಯ ಬಹುಭುಜಾಕೃತಿಯನ್ನು ರೂಪಿಸುತ್ತದೆ ಮತ್ತು ನಾಲ್ಕು ಪ್ರಮುಖ ಭಾರತೀಯ ನಗರಗಳಾದ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈಗಳನ್ನು ಸಂಪರ್ಕಿಸುತ್ತದೆ. ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿತಗೊಳಿಸಲು ಮತ್ತು ದೇಶದ ಹೆಚ್ಚಿನ ಗ್ರಾಮೀಣ ಭಾಗಗಳ ಜನರಿಗೆ ಕೃಷಿ ವಸ್ತುಗಳನ್ನು ಮಾರುಕಟ್ಟೆಗೆ ತರಲು ಒಂದು ಮಾರ್ಗವನ್ನು ಒದಗಿಸಲು ಇದನ್ನು ನಿರ್ಮಿಸಲಾಗಿದೆ. 2012 ರಲ್ಲಿ ಪೂರ್ಣಗೊಂಡ ಈ ತುಲನಾತ್ಮಕವಾಗಿ ಹೊಸ ಹೆದ್ದಾರಿ ವ್ಯವಸ್ಥೆಯು ಯಾವುದೇ ಹೆದ್ದಾರಿಯ ಮಾನದಂಡಗಳಿಂದ ದೊಡ್ಡದಾಗಿದೆ - ಅದರಲ್ಲಿ ಹೆಚ್ಚಿನವು ನಾಲ್ಕು ಮತ್ತು ಆರು ಲೇನ್‌ಗಳ ನಡುವೆ ವೈಶಿಷ್ಟ್ಯಗಳನ್ನು ಹೊಂದಿದೆ.

7. ಚೀನಾ ರಾಷ್ಟ್ರೀಯ ಹೆದ್ದಾರಿ 318

ಚೀನಾವು ವಿಶಾಲವಾದ ಹೆದ್ದಾರಿಗಳ ಜಾಲವನ್ನು ಹೊಂದಿದೆ, ಅದನ್ನು ನಿಜವಾಗಿಯೂ ಒಂದೇ ಹೆದ್ದಾರಿ ಎಂದು ಪರಿಗಣಿಸಲಾಗುವುದಿಲ್ಲ, ಆದರೆ ಅದು ಸಾಧ್ಯವಾದರೆ, ಅದು ಇತರ ಎಲ್ಲವನ್ನು ನೀರಿನಿಂದ ಹೊರಹಾಕುತ್ತದೆ. ಆದರೆ ಚೀನಾ ರಾಷ್ಟ್ರೀಯ ಹೆದ್ದಾರಿ 318 - ಇದನ್ನು ಶಾಂಘೈ ಟಿಬೆಟ್ ಹೆದ್ದಾರಿ ಎಂದೂ ಕರೆಯುತ್ತಾರೆ - ಇದು ನೆಟ್‌ವರ್ಕ್‌ನ ಉದ್ದವಾದ ನಿರಂತರ ಕಾಲು, ಮತ್ತು ಇದು ದೇಶವನ್ನು ಪೂರ್ವದಿಂದ ಪಶ್ಚಿಮಕ್ಕೆ ವಿಭಜಿಸುತ್ತದೆ, ಶಾಂಘೈನಿಂದ ನೇಪಾಳದ ಚೀನಾದ ಗಡಿಯವರೆಗೆ 3,403 ಮೈಲುಗಳು (5,476 ಕಿಲೋಮೀಟರ್) ಚಲಿಸುತ್ತದೆ.

8. US ಮಾರ್ಗ 20

ಉದ್ದದ ರಸ್ತೆಗಳುUS ಮಾರ್ಗ 20 ನ್ಯೂಯಾರ್ಕ್ ಸೇರಿದಂತೆ ಒಂಬತ್ತು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಡೌಗ್ ಕೆರ್ / ಫ್ಲಿಕರ್ (CC BY SA 2.0)
US ಮಾರ್ಗ 20 ದೇಶದ ಅತಿ ಉದ್ದದ ರಸ್ತೆಯಾಗಿದೆ. ಈ 3,365-ಮೈಲಿ (5,415-ಕಿಲೋಮೀಟರ್) ರಸ್ತೆಯು ಪೆಸಿಫಿಕ್ ವಾಯುವ್ಯ ಮತ್ತು ನ್ಯೂ ಇಂಗ್ಲೆಂಡ್ ನಡುವೆ ಪೂರ್ವದಿಂದ ಪಶ್ಚಿಮಕ್ಕೆ ಸಾಗುತ್ತದೆ. ಚಿಕಾಗೋ, ಬೋಸ್ಟನ್ ಮತ್ತು ಕ್ಲೀವ್‌ಲ್ಯಾಂಡ್‌ನಂತಹ ದೊಡ್ಡ ನಗರಗಳ ಮೂಲಕ ಹಾದುಹೋದಾಗ ಅದು ವಿಸ್ತರಣೆಯಾಗಿದ್ದರೂ ಹೆಚ್ಚಿನ ರೀತಿಯಲ್ಲಿ, ಇದು ಕೇವಲ ಎರಡು-ಪಥದ ರಸ್ತೆಯಾಗಿದೆ. ಮಾರ್ಗ 20 ಒಂಬತ್ತು ರಾಜ್ಯಗಳ ಮೂಲಕ ಹಾದುಹೋಗುತ್ತದೆ ಮತ್ತು ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದಿಂದ ಸಂಕ್ಷಿಪ್ತವಾಗಿ ಅಡ್ಡಿಪಡಿಸುತ್ತದೆ.

9. US ಮಾರ್ಗ 6

ದಿ ಗ್ರ್ಯಾಂಡ್ ಆರ್ಮಿ ಆಫ್ ದಿ ರಿಪಬ್ಲಿಕ್ ಹೈವೇ ಎಂದೂ ಕರೆಯಲ್ಪಡುವ US ಮಾರ್ಗ 6, 3,199 ಮೈಲುಗಳು (5,148 ಕಿಲೋಮೀಟರ್) ಪೂರ್ವದಿಂದ ಪಶ್ಚಿಮಕ್ಕೆ 14 ರಾಜ್ಯಗಳ ಮೂಲಕ, ಕ್ಯಾಲಿಫೋರ್ನಿಯಾದ ಬಿಷಪ್‌ನಿಂದ ಪ್ರಾವಿನ್ಸ್‌ಟೌನ್, ಮ್ಯಾಸಚೂಸೆಟ್ಸ್‌ವರೆಗೆ ಸಾಗುತ್ತದೆ. 1953 ರಲ್ಲಿ, ಹೆದ್ದಾರಿಯನ್ನು ಅಂತರ್ಯುದ್ಧದ ಅನುಭವಿಗಳಿಗೆ ಸಮರ್ಪಿಸಲಾಯಿತು, ಅದು ಅದರ ಔಪಚಾರಿಕ ಅಡ್ಡಹೆಸರನ್ನು ಪಡೆಯಿತು.

10. ಅಂತರರಾಜ್ಯ 90 (I-90)

I-90 US ನಲ್ಲಿ 3,021 ಮೈಲುಗಳಷ್ಟು (4,862 ಕಿಲೋಮೀಟರ್) ಉದ್ದದ ಅಂತರರಾಜ್ಯ ಹೆದ್ದಾರಿಯಾಗಿದೆ. ಇದು US ಮಾರ್ಗ 20 ಕ್ಕೆ ಸರಿಸುಮಾರು ಸಮಾನಾಂತರವಾಗಿ ಉತ್ತರ US ಮೂಲಕ, ಬೋಸ್ಟನ್‌ನಿಂದ ಸಿಯಾಟಲ್‌ಗೆ 13 ರಾಜ್ಯಗಳ ಮೂಲಕ ಹಾದುಹೋಗುತ್ತದೆ.