Thursday, March 16, 2023

ಜಗತ್ತಿನ ಹತ್ತು ಅತೀ ಎತ್ತರದ ಪರ್ವತಗಳು

 ಜಗತ್ತಿನ ಅತಿ ಎತ್ತರದ ಪರ್ವತವೆಂದೇ ತಕ್ಷಣ ನಮಗೆ ಮೌಂಟ್ ಎವರೆಸ್ಟ್ ನೆನಪಿಗೆ ಬರುತ್ತದೆ. ಏಷ್ಯಾ ಖಂಡದಲ್ಲೇ ಇರುವ ಮೌಂಟ್ ಎವರೆಸ್ಟ್ ಬಗ್ಗೆ ನಮಗೆ ತಿಳಿದಿದೆ. ಆದರೆ ಏಷ್ಯಾ ಖಂಡದಲ್ಲಿ ಜಗತ್ತಿನ ಹತ್ತು ಎತ್ತರದ ಪರ್ವತಗಳು ಇದೆ ಎಂಬುದು ನಿಮಗೆ ತಿಳಿದಿದೆಯೇ? ವಿಶೇಷವಾಗಿ ಆ ಪರ್ವತಗಳೆಲ್ಲ ಹಿಮಾಲಯನ್ ವ್ಯಾಪ್ತಿಯಲ್ಲಿ ಬರುತ್ತದೆ. ನಾವು ಇಲ್ಲಿ ತಿಳಿಸುವ 10 ಪರ್ವತಗಳಲ್ಲಿ 8000 ಮೀಟರ್‌ಗೂ ಹೆಚ್ಚು ಎತ್ತರವಿರುವ 8 ಪರ್ವತಗಳು ನೇಪಾಳದ ಹಿಮಾಲಯದಲ್ಲಿದೆ.

10. ಮೌಂಟ್ ಅನ್ನಪೂರ್ಣ, ನೇಪಾಳ್.



Mt. Annapurna

ಅನ್ನಪೂರ್ಣ ಪರ್ವತವು ಜಗತ್ತಿನ 10ನೇ ಅತಿ ಎತ್ತರದ ಪರ್ವತವಾಗಿದೆ. ಅನ್ನಪೂರ್ಣ ಶಿಖರಗಳು ಸರಣಿಯಾಗಿದ್ದು, ಅದರಲ್ಲಿ 8,091 ಮೀಟರ್ನಷ್ಟು ಎತ್ತರದೊಂದಿಗೆ ಅನ್ನಪೂರ್ಣ 1 ಎತ್ತರದ ಶಿಖರವಾಗಿದೆ. ಈ ಪರ್ವತಗಳ ಶ್ರೇಣಿಯಲ್ಲಿನ ಶಿಖರಗಳನ್ನು ಏರುವುದು ಅತ್ಯಂತ ಅಪಾಯಕಾರಿಯಾಗಿದೆ. ಇಲ್ಲಿ ಸಾವಿನ ಪ್ರಮಾಣವೂ 40%ನಷ್ಟು ಇದೆ. ಅನ್ನಪೂರ್ಣ ಪರ್ವತವು ಆರು ಪ್ರಮುಖ ಶಿಖರಗಳನ್ನು ಒಳಗೊಂಡಿದೆ. ಅವುಗಳೆಂದರೆ ಅನ್ನಪೂರ್ಣ 1, ಅನ್ನಪೂರ್ಣ 2, ಅನ್ನಪೂರ್ಣ 3, ಅನ್ನಪೂರ್ಣ 4, ಗಂಗಪೂರ್ಣ ಮತ್ತು ದಕ್ಷಿಣ ಅನ್ನಪೂರ್ಣ. ಮಾರಿಸ್ ಹರ್ಜೋಗ್ ಮತ್ತು ಲೂಯಿಸ್ ಲಾಚೆನಾಲ್ 3 ಜೂನ್ 1950ರಲ್ಲಿ ಮೊದಲ ಬಾರಿಗೆ ಈ ಪರ್ವತಗಳನ್ನು ಏರಿದ್ದರು.

9. ನಂಗಾ ಪರ್ಬತ್.




Mt. Nanga Parbat

ಜಗತ್ತಿನ 9ನೇ ಅತಿ ಎತ್ತರದ ಪರ್ವತವಾದ ನಂಗಾ ಪರ್ಬತ್ 8,126 ಮೀಟರ್ನಷ್ಟು ಎತ್ತರವಿದೆ. 20ನೇ ಶತಮಾನದ ಮೊದಲಾರ್ಧದವರೆಗೆ ಈ ಪರ್ವತವನ್ನು "ಕಿಲ್ಲರ್ ಮೌಂಟನ್" ಎಂದು ಕರೆಯಲಾಗುತ್ತಿತ್ತು. ಈಗ ಅದು ಏರಲು ಕಡಿಮೆ ಅಪಾಯಕಾರಿ, ಆದರೆ ಇನ್ನೂ ತುಂಬಾ ಕಷ್ಟ. ಈ ಪರ್ವತವು ಗಿಲ್ಗಿಟ್ ಬಾಲ್ಟಿಸ್ತಾನದ ಸಿಂಧೂ ನದಿಯ ದಕ್ಷಿಣ ಭಾಗದಲ್ಲಿದೆ. ಆಸ್ಟ್ರೇಲಿಯಾದಅರ್ಮಾನ್ ಬಾಲ್ಸ್ ಹರ್ಮನ್ ಬಹ್ಲ್ 1953ರಲ್ಲಿ ಈ ಪರ್ವತವನ್ನು ಏರಿದ ಮೊದಲ ವ್ಯಕ್ತಿಯಾಗಿದ್ದಾರೆ.

8. ಮೌಂಟ್ ಮನಸ್ಲು, ನೇಪಾಳ್.




ಮನಸ್ಲು ಪರ್ವತವು ಜಗತ್ತಿನ 8ನೇ ಅತಿ ಎತ್ತರದ ಪರ್ವತವಾಗಿದ್ದು, 8,164 ಮೀಟರ್ನಷ್ಟು ಎತ್ತರವಿದೆ. ಇದು ನೇಪಾಳದ ಪಶ್ಚಿಮ ಮಧ್ಯ ಭಾಗದಲ್ಲಿರುವ ಮನ್ಸಿರಿ ಹಿಮಾಲ್ನಲ್ಲಿದೆ. ಈ ಪರ್ವತದ ಹೆಸರಿನ ಅರ್ಥ "ಆತ್ಮದ ಪರ್ವತ" ಆಗಿದ್ದು, ಅದು "ಬುದ್ಧಿ" ಅಥವಾ "ಆತ್ಮ" ಎಂಬ ಅರ್ಥವಿರುವ "ಮಾನಸ" ಎಂಬ ಸಂಸ್ಕೃತ ಪದದಿಂದ ಬಂದಿದೆ. ಮನಸ್ಲು ಪರ್ವತವನ್ನು ಮೊದಲ ಬಾರಿಗೆ 9 ಮೇ 1956ರಂದು ಜಪಾನಿನ ದಂಡಯಾತ್ರೆಯ ಸದಸ್ಯರಾದ ತೋಶಿಯೋ ಇಮಾನಿಶಿ ಮತ್ತು ಗಯಾಲ್ಜೆನ್ ನಾರ್ಬು ಅವರು ಏರಿದರು. 8,000 ಮೀಟರ್ ಶಿಖರವನ್ನು ಏರಲು ನೋಡುತ್ತಿರುವವರು ಸಾಮಾನ್ಯವಾಗಿ ಆರಿಸಿಕೊಳ್ಳುವ ಮೊದಲ ಆಯ್ಕೆಗೆ ಪರ್ವತವಾಗಿದೆ.

7. ಮೌಂಟ್ ಧೌಲಗಿರಿ, ನೇಪಾಳ್.




Mt. Dhaulagiri

ಮೌಂಟ್ ಧೌಲಗಿರಿ ಜಗತ್ತಿನ 7ನೇ ಅತಿ ಎತ್ತರದ ಪರ್ವತವಾಗಿದ್ದು, 8,167 ಮೀಟರ್ನಷ್ಟು ಎತ್ತರವಿದೆ. ಇದು ಮಧ್ಯ ನೇಪಾಳದ ಉತ್ತರಕ್ಕೆ ಇದೆ. "ಧೌಲಗಿರಿ" ಎಂಬ ಹೆಸರು ಸಂಸ್ಕೃತ ಪದದಿಂದ ಬಂದಿದೆ. ಇಲ್ಲಿ "ಧೌಲ" ಎಂದರೆ "ಬೆರಗುಗೊಳಿಸುವ", "ಗಿರಿ" ಎಂದರೆ "ಪರ್ವತ" ಎಂಬ ಅರ್ಥ ಬರುತ್ತದೆ. ಈ ಪರ್ವತವನ್ನು ಆಸ್ಟ್ರಿಯ ಸ್ವಿಸ್ ಮತ್ತು ನೇಪಾಳಿ ದಂಡಯಾತ್ರಿ 13 ಮೇ 1960ರಂದು ಏರಿದರು.

6. ಮೌಂಟ್ ಚೋ ಒಯು.




ಮೌಂಟ್ ಚೋ ಒಯು ಜಗತ್ತಿನ 6ನೇ ಅತಿ ಎತ್ತರದ ಪರ್ವತವಾಗಿದ್ದು, 8,201 ಮೀಟರ್ನಷ್ಟು ಎತ್ತರವಿದೆ. ಈ ಪರ್ವತವು ನೇಪಾಳ ಚೀನಾ ಗಡಿಯಲ್ಲಿದೆ. ಚೋ ಒಯು ಎಂದರೆ ಟಿಬೇಟಿಯನ್ ಭಾಷೆಯಲ್ಲಿ "ವೈಢೂರ್ಯ ದೇವತೆ" ಎಂಬ ಅರ್ಥವಾಗಿದೆ. ಚೋ ಒಯು ಅದರ ಸ್ಟೈಟ್ ಫಾರ್ವರ್ಡ್ ಮತ್ತು ಅಪಾಯ ಕಡಿಮೆ ಇರುವ ಕಾರಣ 8000 ಮೀಟರ್ ಶಿಖರಗಳಲ್ಲಿ ಹತ್ತಲು ಸುಲಭವಾದ ಶಿಖರವಾಗಿದೆ. ಈ ಪರ್ವತವನ್ನು 19 ಅಕ್ಟೋಬರ್ 1954ರಂದು ಆಸ್ಟ್ರೇಲಿಯಾದ ಜೋಸೆಫ್ ಜೋಚ್ಲರ್, ಇಟಲಿಯ ಹರ್ಬರ್ಟ್ ಟಿಚಿ ಮತ್ತು ನೇಪಾಳದ ಪಸಾಂಗ್ ದಾವಾ ಲಾಮ ಏರಿದರು.

5. ಮೌಂಟ್ ಮಕಾಲು, ನೇಪಾಳ್.

mountain makalu in kannada
Mt. Makalu

8,481 ಮೀಟರ್ ಎತ್ತರವನ್ನು ಹೊಂದಿರುವ ಮಕಾಲು ಪರ್ವತವು ಜಗತ್ತಿನ 5ನೇ ಅತಿ ಎತ್ತರದ ಪರ್ವತವಾಗಿದೆ. ಇದು ನೇಪಾಳ ಮತ್ತು ಚೀನಾ ನಡುವಿನ ಗಡಿಯಲ್ಲಿ' ಎವರೆಸ್ಟ್ ಪರ್ವತದ ಸೌತ್ ಇಸ್ಟ್ ಕಡೆಗೆ 19 ಕಿಲೋಮೀಟರ್ ದೂರದಲ್ಲಿದೆ. ಮೌಂಟ್ ಮಕಾಲುವನ್ನು ಮೊದಲ ಸಲ 1954ರಲ್ಲಿ ಅಮೆರಿಕದ ವಿಲಿಯಮ್ ಸಿರಿ ತಂಡ ಏರಿತು.

4. ಮೌಂಟ್ ಲೋಟ್ಸೆ, ನೇಪಾಳ್.

mountain lhotse in kannada
Mt. Lhotse

ಲೋಟ್ಸೆ ಪರ್ವತವು ಜಗತ್ತಿನ 4ನೇ ಅತಿ ಎತ್ತರದ ಪರ್ವತವಾಗಿದೆ. ಸಮುದ್ರ ಮಟ್ಟದಿಂದ 8,516 ಮೀಟರ್ ಎತ್ತರದಲ್ಲಿರುವ ಮುಖ್ಯ ಮೌಂಟ್ ಲೋಟ್ಸೆ ಪರ್ವತದ ಜೊತೆಗೆa ಲೋಟ್ಸೆ ಮಿಡಲ್(8,414ಮೀ), ಲೋಟ್ಸೆ ಶಾರ್(8,383ಮೀ) ಇದ್ದು, ಟಿಬೇಟ್ ಮತ್ತು ನೇಪಾಳದ ಖುಂಬು ಪ್ರದೇಶದ ಗಡಿಯಲ್ಲಿದೆ. ಈ ಪರ್ವತವನ್ನು ಮೊದಲ ಬಾರಿಗೆ 18 ಮೇ 1956ರಂದು ಮಿಸ್ಟರ್ ಫ್ರಿಟ್ಜ್ ಲುಚ್ಸಿಂಗರ್ ಮತ್ತು ಸ್ವಿಜರ್ಲೆಂಡ್ನ ಅರ್ನ್ಸ್ಟ್ ರೀಸ್ ಏರಿದರು. ಲೋಟ್ಸೆ ಪರ್ವತವು ಅತ್ಯಂತ ಕಷ್ಟಕರವಾದ ಏರಿಕೆಯಲ್ಲಿ ಒಂದಾದ ಪರ್ವತವಾಗಿದ್ದು, ಇದನ್ನು ವಿರಳವಾಗಿ ಪ್ರಯತ್ನಿಸಲಾಗಿದೆ.

3. ಮೌಂಟ್ ಕಾಂಗ್ಚೆಂಜುಂಗಾ.

8,586 ಮೀಟರ್ನಷ್ಟು ಎತ್ತರವಿರುವ ಕಾಂಗ್ಚೆಂಜುಂಗಾ ಪರ್ವತ ಜಗತ್ತಿನ 3ನೇ ಅತಿ ಎತ್ತರದ ಪರ್ವತವಾಗಿದೆ. ಇದು ನೇಪಾಳ ಮತ್ತು ಭಾರತದ ಗಡಿಯಲ್ಲಿ ನಿಂತಿದ್ದು, ಭಾರತದ ಅತ್ಯುನ್ನತ ಶಿಖರವಾಗಿದೆ. ಕಾಂಗ್ಚೆಂಜುಂಗಾ ಭೂಮಿಯ ಪೂರ್ವದ ಅತ್ಯಂತ ಎತ್ತರದ ಶಿಖರವಾಗಿದೆ. 25 ಮೇ 1955ರಂದು ಬ್ರಿಟಿಷ್ ದಂಡಯಾತ್ರೆಯ ತಂಡದ ಮಿಸ್ಟರ್ ಜೋ ಬ್ರೌನ್ ಮತ್ತು ಜಾರ್ಜ್ ಬ್ಯಾಂಡ್ ಈ ಶಿಖರವನ್ನು ಮೊದಲ ಬಾರಿಗೆ ಏರಿದರು.

2. ಮೌಂಟ್ ಕೆ2, ಪಾಕಿಸ್ತಾನ್.

mountain k2 in kannada
Mt. K2

ಮೌಂಟ್ ಕೆ2 8,611 ಮೀಟರ್‌ಗಳಷ್ಟು ಎತ್ತರವಿದ್ದು, ಜಗತ್ತಿನ 2ನೇ ಅತಿ ಎತ್ತರದ ಪರ್ವತವಾಗಿದೆ. ಮೌಂಟ್ ಕೆ2 ಹಿಮಾಲಯದ ಕರಕೋರಂ ಶ್ರೇಣಿಯಲ್ಲಿದೆ. ಈ ಪರ್ವತವನ್ನು "ಸ್ಯಾವೇಜ್ ಮೌಂಟೇನ್" ಎಂದು ಕರೆಯಲಾಗುತ್ತದೆ. ಏಕೆಂದರೆ, ಶಿಖರವನ್ನು ಏರುವ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಸಾಯುತ್ತಾರೆ. ಕೆ2 ಪರ್ವತವನ್ನು ಮೊದಲಿಗೆ ಇಟಲಿಯವರು ಏರಿದರು. ಇದನ್ನು ಮಿ. ಆರ್ಡಿಟೋ ದೇಸಿಯಫಿನಲ್ಲಿ ಅವರ ತಂಡದ ಮಿ. ಲಿನೋ ಲ್ಯಾಸೆಡೆಲ್ಲಿ ಮತ್ತು ಮಿ. ಅಚಿಲ್ಲೆ ಕಂಪಾಗ್ನೊನಿಯವರು, 31 ಜುಲೈ 1954ರಂದು Abruzzi Spur ಕ್ಲೈಂಬಿಂಗ್ ಮಾರ್ಗದ ಮೂಲಕ ಶಿಖರಕ್ಕೆ ಯಶಸ್ವಿಯಾಗಿ ಏರಿದರು.

1. ಮೌಂಟ್ ಎವರೆಸ್ಟ್, ನೇಪಾಳ್.

mount everest in kannada
Mt. Everest

ಎವರೆಸ್ಟ್ ಪರ್ವತವು ಜಗತ್ತಿನ ಅತಿ ಎತ್ತರದ ಪರ್ವತವಾಗಿದೆ. ಇದು ನೇಪಾಳ ಮತ್ತು ಚೀನಾ ಗಡಿಯಲ್ಲಿ ನಿಂತಿದ್ದು, ಸಮುದ್ರ ಮಟ್ಟಕ್ಕಿಂತ 8,848 ಮೀಟರ್‌ನಷ್ಟು ಎತ್ತರವನ್ನು ಹೊಂದಿದೆ. ಎವರೆಸ್ಟನ್ನು ನೇಪಾಳದಲ್ಲಿ "ಸಾಗರಮಾಥ" ಮತ್ತು ಟಿಬೆಟ್ನಲ್ಲಿ "ಚಾಮೊಲಂಗ್ ಮಾ" ಎಂದು ಕರೆಯಲಾಗುತ್ತದೆ. ಈ ಪರ್ವತವು ತುಂಬಾ ಜನರನ್ನು ಆಕರ್ಷಿಸುತ್ತದೆ ಮತ್ತು ಏರಲು ಸುಲಭವಾದ ಪರ್ವತಗಳಲ್ಲಿ ಒಂದಾಗಿದೆ. ಮೌಂಟ್ ಎವರೆಸ್ಟ್ ಅನ್ನು ಮೊದಲ ಬಾರಿಗೆ ನೇಪಾಳಿ ಶೆರ್ಪಾ ಟೆನ್ಜಿಂಗ್ ನಾರ್ಗೆ ಮತ್ತು ನ್ಯೂಜಿಲೆಂಡ್‌ನ ಮಿ. ಎಡ್ಮಂಡ್ ಹಿಲರಿ, 1953ರಲ್ಲಿ ಸೌತ್ ಕೋಲ್ ಮಾರ್ಗದಿಂದ ಏರಿದರು. ಮೌಂಟ್ ಎವರೆಸ್ಟ್ ಪರ್ವತವನ್ನು ಏರುವುದು ಅನೇಕ ಜನರ ಜೀವನದ ಗುರಿಯಾಗಿದೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...