Thursday, March 16, 2023

ಕರ್ನಾಟಕ ರತ್ನ ಪ್ರಸಸ್ತಿಯನ್ನು ಯಾವ ವರ್ಷ ದಿಂದ ಪ್ರಾರಂಭವಾಯಿತು ಮತ್ತು ಮೊದಲ ಪ್ರಸಸ್ತಿ ಯಾರಿಗೆ ಕೊಡಲಾಗಿತು?

 ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿದೆ.

50 ಗ್ರಾಂ ಚಿನ್ನದ ಪದಕ , ನೆನಪಿನ ಕಾಣಿಕೆ ಶಾಲು ಹೊದಿಸಿ ಸನ್ಮಾನಿಸಲಾಗುತ್ತದೆ.

,ಸಾಹಿತ್ಯ, ವೈಜ್ಞಾನಿಕ, ಸಾಮಾಜಿಕ, ಸಾಂಸ್ಕತಿಕ, ಮುಂತಾದ ಜೀವಮಾನ ಸಾಧನೆ ಮತ್ತು ನಾಡು ನುಡಿಗಾಗಿ ಶ್ರಮಿಸಿದವರನ್ನು ಪರಿಗಣಿಸಿ ಕೊಡ ಮಾಡಲಾಗುತ್ತದೆ .

ಇಲ್ಲೀವರೆಗೆ 1991 - ರಿಂದ 2021 ರ ವರೆಗೆ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ಹತ್ತು ಜನರಿಗೆ ನೀಡಲಾಗಿದೆ.

ಮೊದಲಿಗೆ 1991 - 92ರ ಸಾಲಿನಲ್ಲಿ ಮೊದಲಿಗೆ ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪುರವರಿಗೆ ಅವರ ಮಗಳು ತಾರಿಣಿ ಸಮ್ಮುಖದಲ್ಲಿ ಅವರ ಮನೆಯಲ್ಲಿಯೇ ನೀಡಿ ಗೌರವಿಸಲಾಯಿತು. ಅಷ್ಟರ ವೇಳೆಗೆ ಕುವೆಂಪುರವರು ಇಳಿವಯಸ್ಸಿನಲ್ಲಿ ದ್ದರು.1991ರ ನವೆಂಬರ್ ಒಂದ- ರಂದು ಕನ್ನಡ ರಾಜ್ಯೋತ್ಸವ ದಿನದಂದು ನೀಡಲಾಯಿತು.

ನಂತರ ಡಾ.ರಾಜ್ ಕುಮಾರ್ , ಶ್ರೀ ನಿಜಲಿಂಗಪ್ಪನವರು , ಸಿ.ಎನ್.ಆರ್.ರಾವ್, ದೇವಿಪ್ರಸಾದ್ ಶೆಟ್ಟಿ , ಪ್ರೋ.ದೇ.ಜವರೇಗೌಡರಿಗೆ , ಶ್ರೀವೀರೇಂದ್ರಹೆಗ್ಗಡೆ , ಭೀಮ್ ಸೇನ್ ಜೋಷಿ ,ಡಾ.ಶ್ರೀಶಿವಕುಮಾರ ಸ್ವಾಮಿಗಳು , 2021-22 ನೇ ಸಾಲಿಗೆ ಮರಣೋತ್ತರವಾಗಿ ಶ್ರೀ ಪುನೀತ್ ರಾಜ್ ಕುಮಾರ್ ರವರಿಗೆ ನೀಡಲಾಗಿದೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...