Thursday, March 16, 2023

ಸತಿ ಸಹಗಮನ ಪದ್ಧತಿಯನ್ನು ಭಾರತದಲ್ಲಿ ಅನುಸರಿಸುವುದು ಯಾವಾಗ ಶುರುವಾಯಿತು? ಇದನ್ನು ಯಾವ ವರ್ಗದ ಜನ ಅನುಸರಿಸುತ್ತಿದ್ದರು?

 

  1. ಸುಮಾರು 17ನೇ ಶತಮಾನದಿಂದ 19ನೇ ಶತಮಾನದ ಆದಿಯಲ್ಲಿ ಭಾರತದಲ್ಲಿ ಅತ್ಯಲ್ಪವಾಗಿ ಅಲ್ಲೋ-ಇಲ್ಲೊ ಎಂಬಂತೆ ಆಚರಿಸಲಾಗುತ್ತಿದ್ದ ಪದ್ದತಿ.
  2. ಇದನ್ನು ಇದೆ ವರ್ಗದವರು ಎನ್ನದೆ, ಬ್ರಾಹ್ಮಣರು ಮೊದಲಾಗಿ ಶೂದ್ರರು ಸಹ ಮಾಡುತ್ತಿದ್ದರು.

ಸತಿ ಮೊದಲಿಂದಲೂ ಇತ್ತೇ..?

ಇಲ್ಲ,

  1. ದಶರಥ ಸಾವಿನ ಬಳಿಕ ಮೂವರು ಪತ್ನಿಯರು ಚಿತೆಗೆ ಏರಿದರೆ? (ಕ್ಷತ್ರಿಯ ಕುಲ).
  2. ಶಂಕರಾಚಾರ್ಯರ ತಾಯಿ ಏರಿದರೆ? (ಬ್ರಾಹ್ಮಣ ವರ್ಣ).
  3. ಮಹಾಭಾರತದಲ್ಲಿ 3 ಕಡೆ ಉಲ್ಲೇಖ ಸಿಗುತ್ತದೆ. ಮಾದ್ರಿ, ವಸುದೇವನ ಸತಿಯರು ಮತ್ತು ಕೃಷ್ಣನ ಸತಿಯರು ಸಹಗಮನ ಮಾಡಿದರೆಂದು..!!.
  4. ಡೆಕ್ಕಬ್ಬೆ ಈಕೆ ಶೂದ್ರ ಸ್ತ್ರಿ, ಚೋಳ ಸಾಮ್ರಾಜ್ಯದಲ್ಲಿ ಸತಿ ಪದ್ದತಿ ಆಚರಿಸಿದವಳು.

ಇದು ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಆದ " ಜೋಹಾರ " ಪದ್ದತಿ ತರಹ. ರಾಣಿ ಪದ್ಮಾವತಿ ಚಲನಚಿತ್ರ ನೋಡಿರುತ್ತೀರಿ.

ಬ್ರಾಹ್ಮಣರ ಗ್ರಂಥಗಳು ಕಾರಣ..?

ಮನುಸ್ಮೃತಿ : 9ನೇ ಅಧ್ಯಾಯ ಶ್ಲೋಕ 3 ಮತ್ತು 4 ನೋಡೋಣ.

ಇಂದಿಗೂ ಚರ್ಚೆಯಾಗಿರುವ ಮನುಸ್ಮೃತಿ ಹೆಣ್ಣಿನ ರಕ್ಷಣೆಗೆ ನಿಂತಿದೆ ಅಂದರೆ. (ಮುಂದಿನ ಶ್ಲೋಕಗಳನ್ನು ಓದುವುದು)

ವೇದಗಳು : ಋಗ್ವೇದದಲ್ಲಿ( 10:18:7-8 ) ಗಂಡನೋಡನೆ ಸಾಯುವ ಆಲೋಚನೆ ಮಾಡಿದ ಹೆಂಡತಿಯನ್ನು ಚಿತೆಯಿಂದ ಮೇಲೆಬ್ಬಿಸುವ ಮಂತ್ರ ಇದೆ..!!. " ಶ್ರೀ ಗುರು ರಾಘವೇಂದ್ರ ವೈಭವ "ಧಾರಾವಾಹಿ ನೋಡಿರುತ್ತೀರಿ.

ಅರ್ಥ: ಏಳು ಎದ್ದೇಳು ಮೃತನ ಪತ್ನಿಯೇ, ಇಲ್ಲಿಂದ ಗೃಹಕ್ಕೆ ಹೊರಡು. ಕಳೆದುಹೋದ ಈ ಪತಿಯ ಬಳಿ ನೀನು ಮಲಗಿರುವೆ, ಮನೆಗೆ ಬಾ. ನಿನ್ನ ಕೈ ಹಿಡಿದವನು , ನಿನ್ನ ಗರ್ಭಕಾರನು ಆದ ಪತಿಯ ಪತೀತ್ವ ಗೌರವಿಸಿ ಅವನೊಡನೆ ಸಾಯಲು ನಿಶ್ಚಯಿಸಿರುವೆ. ಬಿಟ್ಟು ಬಿಡು ಈ ಕಾರ್ಯ, ಮನೆಗೆ ಬಾ..!!

ಸತಿ ಇರಲಿಲ್ಲವೇ..?

ಇತ್ತು.

  1. ಅತ್ಯಲ್ಪ ಪ್ರಮಾಣದಲ್ಲಿ, ಬಂಗಾಳದ ರಾಜ್ಯ ಶಾಸ್ತ್ರ ಪುಸ್ತಕ "ಜಿಮೂತ" ಅಲ್ಲಿ ಸತ್ತ ಗಂಡನ ಆಸ್ತಿ ಹೆಂಡತಿಗೆ ಸಂಪೂರ್ಣವೆಂದು ಇರಲು, ಆಕೆಯನ್ನು ಮಾನಸಿಕವಾಗಿಯೂ, ದೈಹಿಕವಾಗಿಯೂ ಹಿಂಸಿಸಿ ಚಿತೆ ಏರುವಂತೆ ಮಾಡುತ್ತಿದ್ದರು. ಅದನ್ನು ದೈವ ಪ್ರೇರಣೆಯಂದು, ಆಕೆ ಸಾಕ್ಷಾತ್ ದುರ್ಗೆಯಂದು ಪುಕಾರು ಎಬ್ಬಿಸಿದರು. ಪ್ರಾಯಶಃ ಇದೇ ಕಾರಣ ರಾಜ ರಾಮ್ ಮೋಹನ್ ರಾಯ್ ಸಹಯೋಗ ಬೇಕಿತ್ತು.
  2. ಜೋಹಾರ ಪದ್ದತಿ ಬೇರೆ, ಅದು ನಮ್ಮ ಮಾಸ್ತಿಗಲ್ಲುಗಳ ಕಥೆಯಂತೆ. ಸತಿಗೂ ಅದಕ್ಕೂ ಸಂಬಂಧವಿಲ್ಲ.

ಬ್ರಿಟಿಷರ ಕೈವಾಡ..

William ward - 10500 ಮಂದಿ ವಾರ್ಷಿಕ ಸತಿ ಪದ್ದತಿ ಆಚರಿಸುತ್ತಿದ್ದರು..!!

(ಒಂದೊಂದು ಪುಟದಲ್ಲಿ ಒಂದೊಂದು ಸಂಖ್ಯೆ ಬರಿತಾನೆ)

David brown - 50,000 ಮಂದಿ ವಾರ್ಷಿಕ

Charles grant - 33,000 ಮಂದಿ ವಾರ್ಷಿಕ

1815 ರಿಂದ 1828 ವರೆಗೆ 5,997 ಮಂದಿ ಸತಿ ಪದ್ದತಿ ಆಚರಿಸಿದರೆಂದು british parliment archives ಹೇಳುತ್ತದೆ..!! ಅವುಗಳಲ್ಲಿ 99% ಬಂಗಾಳದಲ್ಲೇ..!!.

ಯಾರಿಗೆ ಅನುಕೂಲ ಈ ಮೇಲಿನ ಬ್ರಿಟಿಷರ ಮಾಹಿತಿ..?

ಕ್ರಿಶ್ಚಿಯನ್ ಮಿಷಿ-ನರಿಗಳಿಗೆ…!!

  1. 1819 friend of India ಪತ್ರಿಕೆ (ಮಿಷನರಿಗಳದ್ದು) 1 ಲಕ್ಷ ಜನ ಸತಿ ಆಚರಿಸಿದರೆಂದು ಹೇಳುತ್ತದೆ..!! ತಮಾಷೆ.
  2. ಮಲಬಾರ್, ತಿರುಚಿನಪಳ್ಳಿ ಪ್ರಾಂತ್ಯದ ನ್ಯಾಯಮೂರ್ತಿ " ಈ ತರ ಯಾವುದು ನಾನು ನೋಡೇ ಇಲ್ಲ " ಎಂದು ಆಗಲೇ ವರದಿಗಳನ್ನು ನೀಡಿರುತ್ತಾರೆ..!!.
  3. ನಿಮ್ಮಲ್ಲಿ ಹೀಗಿತ್ತು, ಹೀಗಾಗ್ತಿದೆ.. ಬನ್ನಿ ನಿಮ್ಮ ದೇವರ ಬಿಡಿ ಎನ್ನಲೂ ಇದು ಒಂದು ಕುಂಟು ನೆಪ.!!!

ಒಂದು ಸಾರಿ ಯೋಚಿಸಿ,

  1. ಪ್ಲೇಗ್, ಕಾಲರಾ, ಮಲೇರಿಯಾ, ಅದು ಇದು ಅಂತ ಅನೇಕ ರೋಗ ಇರುವ ಕಾಲದಲ್ಲಿ ಅನೇಕರು ಸಾವನ್ನಪ್ಪಿದ್ದಾರೆ, ಅವರವರ ಹೆಂಡತಿಯರು ಸತಿ ಪದ್ದತಿ ಅನುಸರಿಸಲಿಲ್ಲ..!!
  2. ಬಾಲ್ಯ ವಿವಾಹಗಳಿದ್ದ ಕಾಲದಲ್ಲೂ ಹೆಂಗಸರೂ ಸತಿ ಪದ್ದತಿ ಆಚರಿಸಲಿಲ್ಲ..!!
  3. ನಮ್ಮ ಪೂರ್ವಿಕರೆ ಇರುತ್ತೀರಲಿಲ್ಲ, ಕಡೆಗೆ ನಮಗೂ ಅಸ್ತಿತ್ವ ಇರುತ್ತೀರಲಿಲ್ಲ ಅಲ್ಲವೇ..?!!.
  4. ಮುಸಲ್ಮಾನರ ದಾಳಿಯಿಂದಾಗಿ ಭಾರತದ ಸಮಾಜ ರಚನೆ ಏರುಪೇರಾಯಿತು. ಸತಿ, ಬಾಲ್ಯವಿವಾಹ.. ಆಗಲೇ ಬಂದದ್ದು.
  5. ಕಡೆಗೆ 1829 ಡಿಸೆಂಬರ್ ತಿಂಗಳಲ್ಲಿ ಸತಿ ಪದ್ದತಿ ರಾಜ ರಾಮ್ ಮೋಹನ್ ರಾಯ್ ಸಹಯೋಗದಲ್ಲಿ ನಿರ್ಬಂಧಿಸಲಾಯಿತು.
  6. ತಮಾಷೆ ಅಂದರೆ, ಇದಾದ ಒಂದೇ ತಿಂಗಳಲ್ಲಿ ಯಾವುದೇ ಪ್ರಕರಣ ಬಂಗಾಳದಲ್ಲಿ ದಾಖಲಾಗಿಲ್ಲವಂತೆ..!! ಆ ಕಾಲದಲ್ಲಿ ಸರ್ಕಾರ ಇಷ್ಟು ಚುರುಕಾಗಿತ್ತ?!..

ಧನ್ಯವಾದಗಳು.

ಹೆಚ್ಚಿನ ಮಾಹಿತಿಗೆ ಓದಿ

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...