Thursday, March 16, 2023

ಸೂರ್ಯನ ವರ್ಷ ಎಷ್ಟು?

 ಭೂಮಿಗಿಂತ ಸುಮಾರು 109 ಪಟ್ಟು ದೊಡ್ಡದಾದ ಸೂರ್ಯನೆಂಬ ಉರಿಯುವ ಗೋಳವು ಸರಿ ಸುಮಾರು ಅರ್ಧ ವಯೋಮಾನವನ್ನು ದಾಟಿದೆ. 

  • ಸುಮಾರು 450 ಕೋಟಿ ವರ್ಷ ವಯೋಮಾನದ ಸೂರ್ಯನು ಈಗ ಮಧ್ಯ ವಯಸ್ಕ.
  • ಅಂದರೆ , ಇನ್ನು ಸೂರ್ಯ ಬದುಕುವುದು ಕೇವಲ 450 ರಿಂದ 550 ಕೋಟಿ ವರ್ಷಗಳು ಮಾತ್ರ.
  • ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಸೂರ್ಯನ ವಯಸ್ಸು 800 ಕೋಟಿಗೆ ತಲುಪುತ್ತಿದ್ದಂತೆ ಸೂರ್ಯನ ಅಂತಿಮ ದಿನಗಳು ಆರಂಭವಾಗುತ್ತವೆ.
  • ಅಂದರೆ , ಸೂರ್ಯನ ಅಂತ್ಯಕಾಲದ ವಯೋಮಾನವೇ 200 ಕೋಟಿ ವರ್ಷಗಳು. ಅದೆಷ್ಟು ಭಯಾನಿಕವಾಗಿರಬಹುದು ಸೂರ್ಯನ ಅಂತ್ಯ??

ಸೂರ್ಯನಲ್ಲಿ ಏನಿದೆ?

ಸೂರ್ಯ ಎಷ್ಟು ಶಕ್ತಿಶಾಲಿ?

ಸೂರ್ಯನ ವಯಸ್ಸು ನಮಗೆ ತಿಳಿದದ್ದು ಹೇಗೆ?

ಸೂರ್ಯ ಹೇಗೆ ತನ್ನ ಅಂತ್ಯ ಕಾಣುತ್ತಾನೆ?

ಸೂರ್ಯನಲ್ಲಿ ಏನಿದೆ? ಸೂರ್ಯ ಎಷ್ಟು ಶಕ್ತಿಶಾಲಿ?

  • ಸೂರ್ಯ ನಿರಂತರವಾಗಿ ಉರಿಯುತ್ತಿರುವ ಒಂದು ಶಕ್ತಿ. ಆ ಉರಿಯುವಿಕೆಯಿಂದ ಉತ್ಪತ್ತಿಯಾಗುವ ಶಾಖ ಮತ್ತು ಬೆಳಕುಗಳೇ ಸೂರ್ಯ ಮತ್ತು ಸೌರಮಂಡಲದ ಅಸ್ತಿತ್ವಕ್ಕೆ ಅಗತ್ಯವಾದ ಶಕ್ತಿಯನ್ನು ಕೊಡುತ್ತಿವೆ.
  • 14 ಲಕ್ಷ ಕಿ.ಮಿ. ವ್ಯಾಸದ (ಭೂಮಿಯ ತ್ರಿಜ್ಯದ ಸುಮಾರು 109 ಪಟ್ಟು) ಈ ಸೂರ್ಯನೆಂಬ ಕುಬ್ಜ ನಕ್ಷತ್ರದಲ್ಲಿ ಸುಮಾರು 73% ಜಲಜನಕ ಮತ್ತು 25% ಹೀಲಿಯಂ ಜೊತೆಗೆ 2% ಇತರೆ ಧಾತುಗಳಿವೆ.
  • ಪ್ರತಿ ಸೆಕೆಂಡಿಗೆ ಸುಮಾರು 60 ಕೋಟಿ ಟನ್ ಗಳಷ್ಟು ಹೈಡ್ರೋಜನ್ ಪರಮಾಣುವನ್ನು ಅಷ್ಟೇ ಪ್ರಮಾಣದ ಹೀಲಿಯಂ ಪರಮಾಣುವಾಗಿ ಪರಿವರ್ತಿಸುತ್ತಾನೆ.
  • ಇದು ಪರಮಾಣು‌ ಸಮ್ಮಿಳನ (Nuclear fusion) ಪ್ರಕ್ರಿಯೆಯಿಂದ ನಡೆಯುತ್ತದೆ.
  • ಈ ಪರಮಾಣು ಸಮ್ಮಿಳನವೇ ಸೂರ್ಯನ ಅಗಾಧ ಶಕ್ತಿಯ ಮೂಲ. ಈ ಪ್ರಕ್ರಿಯೆ ಸೂರ್ಯನ‌ ಹುಟ್ಟಿನಿಂದ ಸೂರ್ಯನ ಅಂತ್ಯದವರೆಗೂ ನಿರಂತರವಾಗಿ ನಡೆಯುತ್ತದೆ.
    • ಈ ನಿರಂತರ ಪ್ರಕ್ರಿಯೆಯೇ ಸೂರ್ಯನ ಅಂತ್ಯಕ್ಕೆ ಮುಖ್ಯ ಕಾರಣ ಎಂಬುದು ನಂಬಲೇಬೇಕಾದ ಸತ್ಯ! ಒಂದು ವೇಳೆ ತನ್ನ ಜೀವದ ಮೇಲಿನ ಆಸೆಯಿಂದ ಸೂರ್ಯನೇನಾದರೂ ತನ್ನ ಉರಿಯುವಿಕೆಯನ್ನ ಅಂದರೆ ಪರಮಾಣು ಸಮ್ಮಿಳನವನ್ನು ನಿಲ್ಲಿಸಿದರೆ ಸೂರ್ಯನ‌ ಜೊತೆಗೆ ಇಡೀ ಸೌರ ಮಂಡಲವೇ ನಾಶವಾಗುತ್ತದೆ.
  • ಈ ಪರಮಾಣು ಸಮ್ಮಿಳನದಿಂದ ಸೂರ್ಯನ‌ ಪ್ರತಿ ಚದರ ಇಂಚು ಜಾಗ ನಿರಂತರವಾಗಿ ಸುಮಾರು 40000 ವ್ಯಾಟ್ ಬೆಳಕನ್ನು ಉತ್ಪಾದಿಸುತ್ತದೆ.
    • ಈ ಬೆಳಕು ಒಂದು ಮನೆಯ ಒಂದು ವರ್ಷದ ಬಳಕೆಗೆ ಸಾಕು!
  • ಸೂರ್ಯ ಉತ್ಪಾದಿಸುವ ಶಕ್ತಿಯಲ್ಲಿ ಭೂಮಿ ಪಡೆಯುವ ಪ್ರಮಾಣ ನಗಣ್ಯ.
    • ನೂರು ಕೋಟಿಯಲ್ಲಿನ ಒಂದು ಭಾಗದಷ್ಟು ಸೂರ್ಯನ ಶಕ್ತಿ ಮಾತ್ರ ಭೂಮಿಗೆ ತಲುಪುತ್ತದೆ!
  • ನಮ್ಮ ಸೌರಮಂಡಲದ ಒಟ್ಟು ದ್ರವ್ಯರಾಶಿಯ 99.8 % ದ್ರವ್ಯರಾಶಿಯನ್ನು ಸೂರ್ಯನೆ ಹೊಂದಿದ್ದಾನೆ.
  • ನಾವು ಈ ಕ್ಷಣ ನೋಡುತ್ತಿರುವ ಬೆಳಕು ಅಥವಾ ಅನುಭವಿಸುತ್ತಿರುವ ಶಾಖ ಸುಮಾರು ಎಂಟು ನಿಮಿಷಗಳಷ್ಟು ಹಳೆಯದು ಅನ್ನುವ ವಿಚಾರ ನಮಗೆ ಗೊತ್ತು. ಆದರೆ ಸ್ವಾರಸ್ಯವಾದ ವಿಚಾರವೆಂದರೆ , ನಾವು ಈಗ ಅನುಭವಿಸುತ್ತಿರುವ ಬೆಳಕು ಮತ್ತು ಶಾಖ ಕನಿಷ್ಟ 10000 ವರ್ಷಗಳಷ್ಟು ಹಳೆಯದು!!
    • ಹೌದು, ಸೂರ್ಯನ ಮಧ್ಯಭಾಗದಲ್ಲಿ ( Core ) ಉತ್ಪತ್ತಿಯಾಗುವ ಅಗಣಿತ ಶಾಖವು ಸೂರ್ಯನ ಹೊರಪದರ ತಲುಪಲು ಕನಿಷ್ಟ 10000 ದಿಂದ 170000 ವರ್ಷಗಳಷ್ಟು ಸಮಯ ತೆಗೆದುಕೊಳ್ಳುತ್ತದೆ!!
  • ನಾವಂದುಕೊಂಡಂತೆ ಸೂರ್ಯನಿಗೊಂದು ನಿರ್ಧಿಷ್ಟವಾದ ಆಕಾರವಾಗಲಿ, ಗಾತ್ರವಾಗಲಿ ಇಲ್ಲ. ಸೂರ್ಯನ ಆಕಾರ ಮತ್ತು ಗಾತ್ರ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಯಾಕೆಂದರೆ ಸೂರ್ಯನಲ್ಲಿ ಯಾವುದೇ ರೀತಿಯ ಗಟ್ಟಿ ವಸ್ತುಗಳು ಇಲ್ಲ. ಅಲ್ಲಿರುವುದು ಕೇವಲ ಗ್ಯಾಸ್ ಮತ್ತು ಪ್ಲಾಸ್ಮಾ.
    • ತಮಾಷೆಯ ವಿಚಾರವೆಂದರೆ ಇಷ್ಟು ಅಗಾಧ ಶಕ್ತಿಯನ್ನು ಹೊಂದಿರುವ ಸೂರ್ಯನ ಮೇಲೆ ನಾವು ಒಂದು ಕ್ಷಣ ಕೂಡಾ ನಿಲ್ಲಲಾಗದು. ಅಲ್ಲಿ ನಿಂತುಕೊಳ್ಳಲು ಏನೂ ಇಲ್ಲ!!
  • ಸುಲಭವಾಗಿ ಹೇಳಬೇಕೆಂದರೆ ಸೂರ್ಯನು‌ ಒಂದು ಬೆಳಕಿನ ಚೆಂಡು.
  • ಸೂರ್ಯನ‌ ಮಧ್ಯಭಾಗದ ಉಷ್ಣಾಂಶವು ಸುಮಾರು‌ 1.5 ಕೋಟಿ ಡಿಗ್ರಿ ಸೆಲ್ಸಿಯಸ್ ಇರಬಹುದು ಅನ್ನುವುದು ಅಂದಾಜು. ಈ ಉಷ್ಣಾಂಶವು ಸೂರ್ಯನ ಹೊರ ಪದರಕ್ಕೆ ಬರುವಾಗ ಗಣನೀಯವಾಗಿ ಕಡಿಮೆಯಾಗಿ ಸುಮಾರು 5400 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ.

ಸೂರ್ಯನ ವಯಸ್ಸು ನಮಗೆ ತಿಳಿದದ್ದು ಹೇಗೆ?

  • ಅತ್ಯಂತ ಬಿಸಿಯಾದ ಸೂರ್ಯನ ಬಗ್ಗೆ ತಿಳಿಯುವುದು ಸುಲಭದ ಮಾತಲ್ಲ. ಸೂರ್ಯನ ಬಗ್ಗೆ ನಮಗೆ ತಿಳಿದ ವಿಚಾರಗಳು ಅತ್ಯಲ್ಲ ಮತ್ತು ಅವು ಎಷ್ಟರ ಮಟ್ಟಿಗೆ ಸರಿಯಾಗಿವೆ ಅನ್ನುವುದು ಕೂಡಾ ನಮಗೆ ತಿಳಿದಿಲ್ಲ.
  • ಒಂದಷ್ಟು ಸಿದ್ಧಾಂತಗಳು ಮತ್ತು ಹೋಲಿಕೆಗಳ ಆಧಾರದ ಮೇಲೆ ಸೂರ್ಯ ಹೀಗಿರಬಹುದು ಎಂದು ನಾವು ಅಂದುಕೊಂಡಿದ್ದೇವೆ. ಇದು ಪೂರ್ತಿಯಾಗಿ ಸತ್ಯವಾದ ಮಾಹಿತಿ ಆಗಿಲ್ಲದೆಯೂ ಇರಬಹುದು.
  • ಇಂತಹ ಸೂರ್ಯನ‌ ಬಗ್ಗೆ ತಿಳಿಯುವುದು ಕಷ್ಟವಾದ್ದರಿಂದ ವಿಜ್ಞಾನಿಗಳು ಚಂದ್ರನ‌ ಮೇಲಿನ‌ ಕಲ್ಲನ್ನು ತಂದು ಅದರ ವಯಸ್ಸನ್ನು ಲೆಕ್ಕ ಹಾಕಿದ್ದಾರೆ.
  • ಭೂಮಿ ಚಂದ್ರ ಮತ್ತು ಇತರೆ ಗ್ರಹಗಳನ್ನೊಳಗೊಂಡ ಸೌರಮಂಡಲದ ಜೊತೆಗೆ ಸೂರ್ಯ ಕೂಡಾ ಉತ್ಪತ್ತಿ ಆಗಿರಬಹುದು ಅನ್ನುವ ಸಿದ್ಧಾಂತದ ಆಧಾರದ ಮೇಲೆ ಚಂದ್ರನ‌ ಮೇಲಿರುವ ಕಲ್ಲಿನ ವಯಸ್ಸಿನಷ್ಟೇ ವಯಸ್ಸು ಸೂರ್ಯನಿಗೂ ಆಗಿದೆ ಅನ್ನುವುದು ವೈಜ್ಞಾನಿಕ ಸಿದ್ಧಾಂತ.

ಸೂರ್ಯ ಹೇಗೆ ತನ್ನ ಅಂತ್ಯ ಕಾಣುತ್ತಾನೆ?

  • ಮೊದಲೇ ಹೇಳಿದಂತೆ ಸೂರ್ಯನ ನಿರಂತರ ಪರಮಾಣು ಸಮ್ಮಿಳನವೆ ಸೂರ್ಯನ‌ ಅಂತ್ಯಕ್ಕೆ ಮುಖ್ಯ ಕಾರಣ.
  • ಸೂರ್ಯನಲ್ಲಿರುವ ಅತ್ಯಂತ ಶಕ್ತಿಶಾಲಿ ಗುರುತ್ವಾಕರ್ಷಣೆಯು ಅತ್ಯಂತ ಒತ್ತಡದಲ್ಲಿ ಹೈಡ್ರೊಜನ್ ಕಣಗಳು ಒಂದಕ್ಕೊಂದು ಬೆಸೆಯುವಂತೆ ಮಾಡಿದೆ. ಅದೇ ಗುರುತ್ವಾಕರ್ಷಣೆ ಸೂರ್ಯನ ಅಸ್ತಿತ್ವಕ್ಕೆ ಕಾರಣ.
  • ಸೂರ್ಯನ ಒಳ ಪದರವು (Core) ಅತ್ಯಂತ ಒತ್ತಡದಿಂದ ಕೂಡಿರುವುದರಿಂದ ಹೈಡ್ರೊಜನ್ ಕಣಗಳು ಘರ್ಷಣೆಗೊಂಡು ಪರಮಾಣು ಸಮ್ಮಿಳನದ ಮೂಲಕ ಹೀಲಿಯಂ ಆಗಿ ಪರಿವರ್ತನೆಗೊಳ್ಳುತ್ತವೆ.
  • ಈ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಲೇ ಇರುವುದರಿಂದ ಮುಂದೊಂದು ದಿನ ಸೂರ್ಯನಲ್ಲಿರುವ ಹೈಡ್ರೊಜನ್ ಪೂರ್ತಿ ಖಾಲಿಯಾಗುತ್ತದೆ. ಆಗ ಸೂರ್ಯನಲ್ಲಿ ಹೀಲಿಯಂ ಅನಿಲವು ಶಕ್ತಿಯ ಮೂಲವಾಗುತ್ತದೆ.
    • ಇದೇ ಸೂರ್ಯನ ಅಂತ್ಯಕ್ಕೆ ಮುನ್ನುಡಿ.
  • ಸೂರ್ಯನಲ್ಲಿರುವ ಹೈಡ್ರೊಜನ್ ಖಾಲಿಯಾದ ತಕ್ಷಣ ಸೂರ್ಯನ ಮಧ್ಯಭಾಗ (Core) ಚಿಕ್ಕದಾಗುತ್ತಾ ಹೋಗುತ್ತದೆ. ಈ ಚಿಕ್ಕದಾದ ಮಧ್ಯಭಾಗದಲ್ಲಿ ಒತ್ತಡ ಹೆಚ್ಚುತ್ತದೆ ಮತ್ತು ಪರಮಾಣು ಸಮ್ಮಿಳನಗಘಘದ ಕ್ರಿಯೆ ಕೂಡಾ ವಿಪರೀತವಾಗಿ ಹೆಚ್ಚುತ್ತದೆ. ಇದರಿಂದ ಸ್ವಾಭಾವಿಕವಾಗಿ ಮಧ್ಯಭಾಗದ ಉಷ್ಣತೆ ಅತಿಯಾಗಿ ಹೆಚ್ಚುತ್ತದೆ. ಅದು ಸುಮಾರು 10 ಕೋಟಿ ಡಿಗ್ರಿ ಸೆಲ್ಸಿಯಸ್ ತಲುಪಬಹುದು!
  • ಈ ಬಿಸಿಯೇರುವಿಕೆಯಿಂದ ಸೂರ್ಯನ ಹೊರಪದರ ಸುಮಾರು 200 ಪಟ್ಟು ಹಿಗ್ಗುತ್ತದೆ. ಈ ಹಿಗ್ಗುವಿಕೆಯಿಂದ ಸೂರ್ಯನು ಬುಧ ಮತ್ತು ಶುಕ್ರ ಗ್ರಹಗಳನ್ನು ನುಂಗಿ ಹಾಕುತ್ತಾನೆ‌.
    • ಈ ಸಮಯದಲ್ಲಿ ಭೂಮಿ ಏನಾಗಬಹುದು ಅನ್ನುವುದರ ಕುರಿತು ಸ್ಪಷ್ಟವಾದ ಸಿದ್ಧಾಂತ ಇಲ್ಲ.
  • ಸೂರ್ಯನ ವಿಸ್ತಾರ ಹೆಚ್ಚಿ ಅದರ ಹರಡುವಿಕೆ ಹೆಚ್ಚಿದಾಗ ಸೂರ್ಯನ ಹೊರ ಪದರವು ತಂಪಾಗುತ್ತಾ ಹೋಗುತ್ತದೆ. ಆಗ ಸೂರ್ಯ ಕೆಂಪು ಬಣ್ಣಕ್ಕೆ ತಿರುಗುತ್ತಾನೆ.
    • ಹಳದಿ ಕುಬ್ಜ ನಕ್ಷತ್ರವು ರಾಕ್ಷಸ ಗಾತ್ರದ ಕೆಂಪು ನಕ್ಷತ್ರವಾಗಿ ರೂಪು ಗೊಳ್ಳುತ್ತದೆ.
  • ಅದೇ ಸಮಯದಲ್ಲಿ ಒಳಗಿನ ತಾಪಮಾನದಿಂದ ಹೀಲಿಯಂ ಸಮ್ಮಿಳನಗೊಂಡು ಕಾರ್ಬನ್ ಉತ್ಪತ್ತಿಯಾಗುತ್ತದೆ.
  • ಭಾರವಾದ ಕಾರ್ಬನ್ ಅನಿಲವು ಸೂರ್ಯನ ಹೊರಪದರದಲ್ಲಿ ಸೌರ ಗಾಳಿಯನ್ನು ಉಂಟು ಮಾಡುತ್ತದೆ.
  • ಈ ಸೌರ ಗಾಳಿಯು ಸೂರ್ಯನ ಪೂರ್ತಿ ಹೊರಪದರವನ್ನು ಕಿತ್ತೆಸೆಯುತ್ತದೆ.
  • ಹೊರಪದರವನ್ನು ಕಳಚಿಕೊಂಡ ಸೂರ್ಯ ಒಂದು ಕಾರ್ಬನ್ ಚೆಂಡಾಗಿ ಪರಿವರ್ತನೆ ಆಗುತ್ತಾನೆ.
  • ಆ ಕಾರ್ಬನ್ ಚೆಂಡಿನಿಂದ ಯಾವುದೇ ರೀತಿಯ ಸಮ್ಮಿಳನ ಆಗುವುದಿಲ್ಲ ಮತ್ತು ಸೂರ್ಯನಿಂದ ಯಾವುದೇ ರೀತಿಯ ಶಕ್ತಿ ಉತ್ಪಾದನೆ ಆಗುವುದಿಲ್ಲ.

ಇದು ಸೂರ್ಯನ ಅಂತ್ಯ!!

ಕೊನೆಯದಾಗಿ ಒಂದೆರಡು ಮಾಹಿತಿಗಳು.

  • ಸೂರ್ಯನು ಸುತ್ತುತ್ತಿರುವ ಒಂದು ನಕ್ಷತ್ರ.
  • ಸೂರ್ಯ ತನ್ನ ಸುತ್ತಲೂ ನಿರಂತರವಾಗಿ ಸುತ್ತುತ್ತಿರುತ್ತಾನೆ.
  • ತನ್ನ ಕಕ್ಷೆಯ ಸುತ್ತಲೂ ಸುತ್ತುವುದಕ್ಕೆ ಸುಮಾರು 27 ದಿನ ತೆಗೆದುಕೊಳ್ಳುತ್ತಾನೆ.
  • ತನ್ನ ಕಕ್ಷೆಯ ಸುತ್ತಲೂ ಸುತ್ತುತ್ರಾ ಮಿಲ್ಕಿವೇ ಗೆಲ್ಯಾಕ್ಸಿಯ ಸುತ್ತಲೂ ಸೂರ್ಯ ಸುತ್ತತ್ತಾನೆ! ಆದರೆ ಇಲ್ಲಿ ಸೂರ್ಯನೊಬ್ಬನೇ ಸುತ್ತುವುದಿಲ್ಲ, ಬದಲಿಗೆ ನಮ್ಮ ಪೂರ್ತಿ ಸೌರಮಙಡಲವೇ ಸುತ್ತುತ್ತದೆ , ಅದೂ ಗಂಟೆಗೆ ಎಂಟು ಲಕ್ಷ ಕಿ.ಮಿ. ವೇಗದಲ್ಲಿ!
    • ಈ ವೇಗದಲ್ಲಿ ಸುತ್ತಿದರೂ ಕೂಡಾ ನಮ್ಮ ಗೆಲ್ಯಾಕ್ಸಿಗೆ ಒಂದು ಸುತ್ತು ಹಾಕಲು ಬರೋಬ್ಬರಿ 23 ಕೋಟಿ ವರ್ಷಗಳು ಬೇಕು!!
  • ನಾವಿದುವರೆಗೂ ತಿಳಿದದ್ದು ನಮ್ಮ ಸೌರಮಂಡಲದ ಸೂರ್ಯನ ಬಗ್ಗೆ ಮಾತ್ರ. ಅದೂ ಅತ್ಯಲ್ಪ.
  • ಈ ನಮ್ಮ ಸೂರ್ಯನಿಗಿಂತ ಹಲವು ಪಟ್ಟು ದೊಡ್ಡ ಮತ್ತು ಹೆಚ್ಚು ಶಕ್ತಿಯುತವಾದ ನೂರಾರು ಕೋಟಿ ಸೂರ್ಯರು ನಮ್ಮ ಮಿಲ್ಕಿವೇ ಗೆಲ್ಯಾಕ್ಸಿಯಲ್ಲೇ ಇವೆ. ಇಂತಹ ಅಥವಾ ಇದಕ್ಕಿಂತಲೂ ದೊಡ್ಡದಾದ ಹಲವು ಕೋಟಿ ಗೆಲ್ಯಾಕ್ಸಿಗಳು ಈ ಬ್ರಹ್ಮಾಂಡದಲ್ಲಿವೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...