Wednesday, September 30, 2026

ಈ ಜಗತ್ತು ಅದ್ಭುತಗಳ ತಾಣ

 ನಾನು ಈಗ ಹೇಳ ಹೊರಟಿರುವುದು, ಒಂದು ಬಹಳ ಅತ್ಯದ್ಭುತವಾದ ವಿಷಯ.

ಬಹಳಷ್ಟು ಜನ, ಇದು ಯಾವುದೋ ಒಂದು ಚಿತ್ರದ ಸೆಟ್ ಇರಬೇಕು, ಇಲ್ಲಾ ಅಂದ್ರೆ, ಯಾವುದೋ ಶ್ರೀಮಂತ ಮನೆತನದವರ ಮದುವೆಯ ಅಲಂಕಾರವಿರಬೇಕು, ಇಲ್ಲಾ ಡಿಸ್ನಿಲ್ಯಾಂಡ್ ನಂತಾ ಒಂದು ಪಾರ್ಕ್ ಇರಬೇಕು ಎಂದು ಯೋಚಿಸಿರಬೇಕು.

ಇದ್ಯಾವುದೂ ಅಲ್ಲ.

ಇದಕ್ಕೆ ರಕ್ತ ಧಾರೆ, ಅಥವಾ ರಕ್ತ ಜಲಪಾತ ಅಂತಾ ಹೇಳ್ತಾರೆ. ಇದು ಇರುವುದು, ಅಂಟಾರ್ಟಿಕಾ ದಲ್ಲಿ. ಇದನ್ನು ೧೯೧೧ನೇ ಇಸಿವಿಯಲ್ಲಿ ಕಂಡುಹಿಡಿದರು.

ಇದು ಮ್ಯಾಕ್ಮುರ್ಡೋ ಒಣ ಪ್ರದೇಶದಲ್ಲಿ (McMurdo dry valleys) ಇರುವ ಟೈಲರ್ ಹಿಮನದಿ (Taylor Glacier) ಯಿಂದ ಉಂಟಾದ ಜಲಪಾತ.

ಆದರೆ ಹರಿಯುವ ನೀರು, ರಕ್ತದ ಬಣ್ಣದಲ್ಲಿ ಹೇಗೆ ಕಾಣಿಸುತ್ತದೆ?.

ಇದಕ್ಕೆ ಕಾರಣ, ಕಬ್ಬಿಣದ ಸತು ಬರ್ಫಿ ನಲ್ಲಿ ಅಡಗಿದ ನೀರಿನಲ್ಲಿ ಇರುವ ಆಮ್ಲಜನಕ ದೊಂದಿಗೆ ಸೇರಿದಾಗ ಈ ರಕ್ತದ ಬಣ್ಣ ಬರುತ್ತದೆ. ನೆನಪಿರಲಿ, ಇಲ್ಲಿನ ನೀರಿನಲ್ಲಿ ಅತೀ ಹೆಚ್ಚು ಲವಣದ ಅಂಶ ಇರುತ್ತದೆ . ಇಲ್ಲಿ ಎಲ್ಲವೂ ಅತಿರೇಕವಾಗಿ ಇದೆ. ಈ ನೀರಿನಲ್ಲೂ, ಹಲವು ಜೀವಿಗಳು ಜೀವಿಸುತ್ತದೆ. (Microbes)

ಇದು ವಿಜ್ಞಾನಿಗಳಿಗೆ, ಮಂಗಳ ಗ್ರಹಗಳಲ್ಲಿ ಅತೀ ತೀವ್ರ ಪರಿಸ್ಥಿತಿಯಲ್ಲಿ ಜೀವಿಸಿರಬಹುದಾದ ಜೀವಾಣುಗಳ ಜೀವಿತದ ಬಗೆಗಿನ ಒಂದು ಒಳನೋಟ ಸಿಗುತ್ತದೆ, ಎಂದು ಹೇಳಲಾಗುತ್ತದೆ.

ಮುಂದಿನ ಬಾರಿ, ಇಲ್ಲಿಯೇ ನಿಮ್ಮ ರಜಾದಿನಗಳ ಪ್ರವಾಸ ಪಿಕ್ಸ್ ಮಾಡ್ತೀರಾ…😄

ಜೈ ಹಿಂದ್.

ಜೈ ಶ್ರೀ ರಾಮ್.