Wednesday, September 30, 2026

ಅರ್ಜುನ್ ಸರ್ಜಾ ಅವರ ಕುಟುಂಬದ ಬಗ್ಗೆ ತಿಳಿಸಬಹುದೇ?

 ಕನ್ನಡ ಚಿತ್ರರಂಗದಲ್ಲಿ, ಡಾಕ್ಟರ್ ರಾಜಕುಮಾರ್ ಅವರ ಪರಿವಾರದ ನಂತರ, ಅತಿ ಹೆಚ್ಚು ಸಂಖ್ಯೆ ಹೊಂದಿರುವ ಪರಿವಾರ ಎಂದರೆ ಅದು ಅರ್ಜುನ್ ಸರ್ಜಾ ಕುಟುಂಬ.

ಅರ್ಜುನ್ ಸರ್ಜಾ ಅವರ ತಂದೆಯವರಾದ ಶಕ್ತಿಪ್ರಸಾದ್ ಹಾಗೂ ಮಾವನವರಾದ ರಾಜೇಶ್ ಅವರು ಈ ಕುಟುಂಬದ ಮೂಲ ಮತ್ತು ಪ್ರಮುಖ ಪುರುಷರಾಗಿದ್ದಾರೆ.

ಅರ್ಜುನ್ ಸರ್ಜಾ ನಂತರದ ತಲೆಮಾರಿನ ಬಹುತೇಕ ಕುಟುಂಬಸ್ಥರು ಚಿತ್ರರಂಗದ ವಿವಿಧ ರಂಗಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ, ಕೆಲವರು ದೀರ್ಘಕಾಲ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಛಾಯಾಚಿತ್ರಗಳ ಮೂಲಕ ಸರ್ಜಾ ಕುಟುಂಬದವರ ಪರಿಚಯವನ್ನು ಮಾಡಿಕೊಡುತ್ತೇನೆ.

ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ ಮತ್ತು ತಂದೆ ಶಕ್ತಿಪ್ರಸಾದ್, ಶಕ್ತಿಪ್ರಸಾದ್ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ಪೋಷಕ/ಖಳ ನಟನಾಗಿ ಕೊಡುಗೆ ನೀಡಿದ್ದಾರೆ.

ಹೆಣ್ಣು ಕೊಟ್ಟ ಮಾವ, ಕನ್ನಡ ಚಿತ್ರರಂಗದ "ಕಲಾ ತಪಸ್ವಿ" ಎಂದು ಖ್ಯಾತರಾಗಿರುವ ಹಿರಿಯ ನಟ ರಾಜೇಶ್.

ರವಿ ವರ್ಮನ ಕುಂಚದ ಹಾಡು ಇಂದಿಗೂ ಇವರ ನೆನಪು ಮಾಡುತ್ತದೆ.

ಅರ್ಜುನ್ ಸರ್ಜಾ ಅವರ ಅಣ್ಣ ಕಿಶೋರ್ ಸರ್ಜಾ, ಇವರು ನಟ ಸಹಾಯಕ ನಿರ್ದೇಶಕ ಮತ್ತು ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ, ವಾಯುಪುತ್ರ ಹಾಗೂ ದಂಡಂ ದಶಗುಣಂ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ.

ಅರ್ಜುನ್ ಸರ್ಜಾ ಅವರ ಚಿಕ್ಕ ಸಂಸಾರ

ಪತ್ನಿ : ನಟಿ, ಆಶಾ ದೇವಿ (ನಿವೇದಿತಾ)

ಮಕ್ಕಳು :

೧. ಹಿರಿಯ ಮಗಳು: ಐಶ್ವರ್ಯ

೨. ಕಿರಿಯ ಮಗಳು: ಅಂಜನಾ

ಅರ್ಜುನ್ ಸರ್ಜಾ ಅವರ ತಂಗಿ ಕುಟುಂಬ

ತಂಗಿ: ಅಮ್ಮಾಜಿ

ಭಾವ: ವಿಜಯ್ ಕುಮಾರ್

ಕಿರಿಯ ಅಳಿಯ: ಧೃವ

ಹಿರಿಯ ಅಳಿಯ: ಚಿರಂಜೀವಿ

ಚಿರು ಪತ್ನಿ: ಮೇಘನ ರಾಜ್

ಅಣ್ಣ, ಕಿಶೋರ್ ಸರ್ಜಾ ಅವರ ಮಗ ಸೂರಜ್ ಸರ್ಜಾ.

ಇವರು ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಧ್ರುವ ಚಂದನ್ ಶೆಟ್ಟಿ ಅವರ ಜೊತೆಗೆ ಇವರೆಲ್ಲರ ಮೊದಲ ರಾಪ್ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗೆ ಮೂರೆ ಮೂರು ಪೆಗ್ ಹಾಡಿಗೆ ಸಂಗೀತ ನೀಡಿದ್ದಾರೆ.

ಅರ್ಜುನ್ ಸರ್ಜಾ ಅವರ ಮತ್ತೊಬ್ಬ ಅಳಿಯ ಭರತ್ ಸರ್ಜಾ.

ಇವರು, ವೀರ ಪುಲಿಕೇಶಿ, ಹನುಮಾನ್ ಮತ್ತು ಇತ್ತೀಚಿನ 'ಪ್ರಯಾಣಿಕರ ಗಮನಕ್ಕೆ' ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರು ನಿರ್ದೇಶನದಲ್ಲಿ ಕೂಡ ಆಸಕ್ತಿ ಹೊಂದಿದ್ದು ತಮ್ಮ ಹಿರಿಯ ಮಾವನವರ ನಿರ್ದೇಶನದ ವಾಯುಪುತ್ರ ಮತ್ತು ದಂಡಂ ದಶಗುಣಂ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕ ಆಗಿ ಕೆಲಸ ಮಾಡಿದ್ದಾರೆ.