ಹಂಪಿಯಲ್ಲಿ ನೋಡಲು ಅನೇಕ ಸ್ಥಳಗಳಿವೆ, ಕಡಿಮೆ ಎಂದರು ೨ ದಿನ ಬೇಕು. ನಿಮ್ಮ ಬಳಿ ವಾಹನ ಇದ್ದರೆ ದಕ್ಷಿಣ ಮತ್ತು ಉತ್ತರ ಹಂಪಿ ಎರಡು ನೋಡಬೇಕು ಅಂದರೆ ಸಮಯ ಬೇಕು. ಉತ್ತರ ಹಂಪಿಯಲ್ಲಿ ಕಲ್ಲಿನ ರಥ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಶಬರಿಯ ಗುಹೆ, ಆನೆಗುಂದಿಯ ಪ್ರದೇಶಗಳು ಇತ್ಯಾದಿ ಕೆಲ ಪ್ರದೇಶ ಇದೆ. ಉಳಿದ ಹೆಚ್ಚಿನ ಪ್ರದೇಶ ದಕ್ಷಿಣ ಭಾಗದಲ್ಲಿ ಬರುತ್ತದೆ.
೧. ವಿರೂಪಾಕ್ಷ ದೇವಾಲಯ ಮತ್ತು ತುಂಗಭದ್ರಾ ನದಿ ತೀರ
೨. ಕಡಲೆ ಕಾಳು ಗಣಪತಿ, ಸಾಸಿವೆ ಕಾಳು ಗಣಪತಿ, ಹೇಮಕೂಟ ಸಮೂಹದ ಮಂದಿರಗಳು(ಇವೆಲ್ಲ ಸಮೀಪದಲ್ಲಿ ಇವೆ)
೩. ಉಗ್ರ ನರಸಿಂಹ ಮತ್ತು ಬಡವಿಲಿಂಗಿ(ಸಮೀಪ)
೪. ಮಹಾನವಮಿ ದಿಬ್ಬ, ಕರೆ ಕಲ್ಲಿನ ಕಲ್ಯಾಣಿ, ಕಮಲ ಮಹಲ್,ಗಜ ಶಾಲೆ, ರಾಣಿಯರ ಸ್ನಾನಗೃಹ.. ಹೌದು ಇವೆಲ್ಲಾ ಸಮೀಪದ ಪ್ರದೇಶಗಳು
೫. ಮಾತಂಗ ಪರ್ವತ ಮತ್ತು ಅಚ್ಯುತರಾಯ ದೇವಸ್ಥಾನ (ಸಮೀಪ)
ಉತ್ತರ ದಿಕ್ಕಿನಲ್ಲಿ
೧. ಮಾಲ್ಯವಂತ ರಘುನಾಥ್ ದೇವಸ್ಥಾನ (ಇದು ತುಂಬಾ ಸುಂದರವಾದ ದೇವಸ್ಥಾನ ಆದರೆ ಹಾದಿ ಚಿಕ್ಕದು)
೨. ವಿಜಯ ವಿಠ್ಠಲ ದೇವಸ್ಥಾನ ಮತ್ತು ಕಲ್ಲಿನ ರಥ
೩. ಅಂಜನಾದ್ರಿ ಬೆಟ್ಟ ಮತ್ತು ಪಂಪಾ ಸರೋವರ
೪. ಆನೆಗುಂದಿಯ ಪ್ರದೇಶಗಳು