ಪ್ರಪಂಚದ ಏಳು ಅದ್ಭುತಗಳ ಎರಡು ಗುಂಪುಗಳಿವೆ. ಅವುಗಳು ಯಾವುದೆಂದರೆ ಏಳು ಪ್ರಾಚೀನ ಜಗತ್ತಿನ ಅದ್ಭುತಗಳು ಮತ್ತು ಏಳು ಆಧುನಿಕ ಯುಗದ ಅದ್ಭುತಗಳು.
ಪ್ರಾಚೀನ ಜಗತ್ತಿನ ಏಳು ಅದ್ಭುತಗಳು-
- ಗೀಜಾ಼ದ ಮಹಾನ್ ಪಿರಮಿಡ್ಗಳು, ಈಜಿಪ್ಟ್-
- ಬ್ಯಾಬಿಲೋನಿಯಾದ ನೇತಾಡುವ ತೋಟಗಳು-
- ಎಫಿಸಸ್‌ನ ಆರ್ಟೆಮಿಸ್ ದೇವಾಲಯ-
- ಒಲಿಂಪಿಯಾದ ಜಿ಼ಯುಸ್ ಪ್ರತಿಮೆ-
- ಹೆಲಿಕಾರ್ನಸಸ್ ಸಮಾಧಿ-
- ಅಲೆಗ್ಸ್ಯಾಂಡ್ರಿಯಾದ ದೀಪಸ್ತಂಭ-
- ಕೊಲೊಸಸ್ ಆಫ಼್ ರೋಡ್ಸ್-
ಇವುಗಳಲ್ಲಿ ಗೀಜಾ಼ದ ಪಿರಮಿಡ್ಗಳು ಮಾತ್ರ ಇನ್ನೂ ಇಳಿದುಕೊಂಡಿದೆ. ಬೆರೆಯೆಲ್ಲವೂ ಭೂಕಂಪ, ಯುದ್ಧ, ನೈಸರ್ಗಿಕ ಅವಘಡಗಳಲ್ಲಿ ನಾಶವಾಗಿದೆ.
ಆಧುನಿಕ ಯುಗದ ಏಳು ಅದ್ಭುತಗಳು-
- ತಾಜ್ ಮಹಲ್, ಆಗ್ರಾ, ಭಾರತ-
- ಚೀನಾದ ಮಹಾ ಗೋಡೆ-
- ಚಿಚೆನ್ ಇಟ್ಜಾ, ಮೆಕ್ಸಿಕೊ-
- ಕ್ರೈಸ್ಟ್ ದಿ ರಿಡೀಮರ್, ರಿಯೋ ಡಿ ಜನೈರೊ, ಬ್ರಜಿ಼ಲ್-
- ಕೊಲೊಸಿಯಮ್, ರೋಮ್, ಇಟಲಿ-
- ಮಾಚು ಪಿಚ್ಚು, ಪೆರು-
- ಪೆಟ್ರಾ, ಜಾರ್ಡನ್-
ಇವಲ್ಲದೆ ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಉಳಿದುಕೊಂಡಿರುವ ಈಜಿಪ್ಟಿನ ಗೀಜಾ಼ದ ಪಿರಮಿಡ್ ಅನ್ನು ಎಂಟನೇಯ ಅದ್ಭುತವಾಗಿ ಗೌರವಾನ್ವಿತ ಸ್ಥಾನ ಹೊಂದಿದೆ.
ಚಿತ್ರಗಳ ಮೂಲ: ವಿಕಿಪೀಡಿಯ