ಮೈಸೂರು ರಾಜರು ಭಾರತಕ್ಕೆ ನೀಡಿದ ದೊಡ್ಡ ಕೊಡುಗೆ ಎಂದರೆ ಅದು ಸುಸಜ್ಜಿತ ಬೆಂಗಳೂರು ನಗರ.
ಇಂದು ಭಾರತಕ್ಕೆ ಬೆಂಗಳೂರು ಎಷ್ಟು ಮುಖ್ಯವೆಂದು ಬಿಡಿಸಿ ಹೇಳಬೇಕಿಲ್ಲ. ಐಟಿ ಕ್ಷೇತ್ರದಲ್ಲಿ ಅಗ್ರಗಣ್ಯ ನಗರವಿದು. ದೇಶಕ್ಕೆ ಬಹಳ ಆದಾಯ ತರುವ ಊರಿದು. ಅಮೇರಿಕಾ ದೇಶದ ಪ್ರೆಸಿಡೆಂಟ್ ಎಲೆಕ್ಷನ್ನಲ್ಲಿ ಕೂಡ ಬ್ಯಾಂಗಲೋರ್ ಪದದ ಪ್ರಸ್ತಾವ ಆಗುತ್ತದೆಯೆಂದರೆ ಬೆಂಗಳೂರಿನ ಹಿರಿಮೆ ಗರಿಮೆಯನ್ನು ನೀವೇ ಯೋಚನೆ ಮಾಡಿ.
ಇಂತಹ ಊರನ್ನು ಕೊಟ್ಟಿದ್ದು ನಾಡಪ್ರಭು ಕೆಂಪೇಗೌಡರೇ ಆದರೂ, ಅದನ್ನು ಅಭಿವೃದ್ಧಿಗೊಳಿಸಿದವರು ಮೈಸೂರಿನ ಒಡೆಯರು.
- ಇಂಡಿಯನ್ ಇನ್ಸ್ಟಿಟ್ಯುಯೇ ಆಫ್ ಸೈನ್ಸ್
- ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸ್
ಇವೆಲ್ಲ ಆರಂಭವಾಗಿದ್ದು ಇವರ ಕಾಲದಲ್ಲೇ.
ವಿಜ್ಞಾನ ಮತ್ತು ತಾಂತ್ರಿಕ ಕಾಲೇಜುಗಳು ಶುರುವಾದವು.
ಇವರು ಕೊಟ್ಟ ಭೂಮಿಯಲ್ಲಿ ಅನೇಕ ಕಾರ್ಖಾನೆಗಳು ಪ್ರಾರಂಭವಾದವು.
HAL NAL BEL BHEL BEML NAL ಇಂತಹ ಸಂಸ್ಥೆಗಳು ಬಂದವು.
ಮಾಹಿತಿ ತಂತ್ರಜ್ಞಾನ ಇಲ್ಲಿ ಬೆಳೆಯಲು ಇವೆಲ್ಲ ಅಡಿಪಾಯವಾದವು.
ಐಟಿ ದೊಡ್ಡ ಮಟ್ಟದಲ್ಲಿ ಬೆಳೆದು ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ನಿಂತಿದೆ ಇವತ್ತು.
ಇಂತಹ ಹೆಮ್ಮೆಯ ಊರನ್ನು ಬೆಳೆಸಿ, ವಿಕಾಸಗೊಳಿಸಿದವರು ಮೈಸೂರಿನ ಒಡೆಯರು.