ಬಾಲಿಯಿಂದ ಹನುಮನ ಶಕ್ತಿ ಪರೀಕ್ಷೆ

SANTOSH KULKARNI
By -
0



ಬಾಲಿ ವಾನರ ರಾಜನಿಗೆ ತನ್ನ ಮುಂದೆ ಯಾರಾದರೂ ಯುದ್ಧಕ್ಕೆ ಬಂದರೆ ಎದುರಾಳಿಯ ಅರ್ಧದಷ್ಟು ಶಕ್ತಿ ಅವನ ದೇಹಕ್ಕೆ ಹೋಗುತ್ತದೆ ಎಂದು ನಾವೆಲ್ಲ ಕೇಳಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ, ಹನುಮಾನ್ ಜೀ ಬಾಲಿಯ ಮುಂದೆ ಬಂದಾಗ ಏನಾಯಿತು ಎಂದು ನಾವು ಇಂದು ತಿಳಿಯಲಿದ್ದೇವೆ.

ಈ ಜಗತ್ತಿನಲ್ಲಿ ಯಾರೂ ತನ್ನನ್ನು ಸೋಲಿಸಲು ಸಾಧ್ಯವಿಲ್ಲ ಅಥವಾ ಯಾರೂ ಎದುರಿಸಲು ಸಾಧ್ಯವಿಲ್ಲ ಎಂದು ಬಾಲಿ ಹೆಮ್ಮೆಪಡುತ್ತಾನೆ. ಹನುಮನು ಶ್ರೀ ರಾಮನ ಕುರಿತು ಧ್ಯಾನ ಮಾಡುತ್ತ ಕುಳಿತ ಕಾಡನ್ನು ಪ್ರವೇಶಿಸಿ ತನ್ನ ಶಕ್ತಿಯ ಅಮಲಿನಲ್ಲಿ ಜನರನ್ನು ಬೆದರಿಸುತ್ತಾ ಕಾಡನ್ನು ತಲುಪಿ "- ನನ್ನನ್ನು ಸೋಲಿಸಬಲ್ಲವರಾರು..?, ನನ್ನೊಂದಿಗೆ ಸ್ಪರ್ಧಿಸಬಲ್ಲ ತಾಯಿಯ ಹಾಲು ಕುಡಿದವನು ಯಾರಾದರೂ ಇದ್ದರೆ ನನ್ನ ಮುಂದೆ ಬನ್ನಿ " ಎಂದು ಕೂಗಲು ಪ್ರಾರಂಭಿಸಿದನು.

ಬಾಲಿಯ ಕೂಗಿನಿಂದ ಹನುಮನ ಧ್ಯಾನಕ್ಕೆ ಭಂಗ ಬರುತ್ತಿತ್ತು. ಆಗ ಅವನು ಬಾಲಿಗೆ ಹೇಳಿದನು,

" - ಹೇ ವಾನರರಾಜ.! ನೀನು ಅತ್ಯಂತ ಶಕ್ತಿಶಾಲಿ, ನಿನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ನೀನು ಯಾಕೆ ಹೀಗೆ ಕೂಗುತ್ತೀಯ..? "

ಹನುಮನ ಮಾತು ಕೇಳಿ ಬಾಲಿಗೆ ಕೋಪ ಬಂತು. ಅವನು ಹನುಮಾನ್ ಗೆ ಸವಾಲು ಹಾಕಿದ.

"- ಓ ವಾನರ ಶ್ರೇಷ್ಠನೇ, ನೀನೆನು ಮಹಾ, ನೀನು ಆರಾಧಿಸುವವನನ್ನೂ ನಾನು ಸೋಲಿಸಬಲ್ಲೆ...!" ಎಂದು ಶ್ರೀ ರಾಮನನ್ನು ಅಣಕಿಸುವುದನ್ನು ನೋಡಿದ ಹನುಮಂತ ಕೋಪಗೊಂಡು ಬಾಲಿಯ ಸವಾಲನ್ನು ಸ್ವೀಕರಿಸಿದನು. ಬಾಲಿಯು ನಗರದಲ್ಲೆಲ್ಲ ಡಂಗುರ ಸಾರಿಸಿದ '- ತನಗೂ, ಹನುಮನಿಗೂ ನಾಳೆ ಬೆಳಿಗ್ಗೆ ಯುದ್ಧ ನಿಶ್ಚಯ ವಾಗಿದೆ. '

ಸೂರ್ಯೋದಯವಾದ ಕೂಡಲೇ ಇಬ್ಬರ ನಡುವೆ ಕಾದಾಟ ನಡೆಯುವುದೆಂದು ತೀರ್ಮಾನವಾಯಿತು. ಮರುದಿನ, ಹನುಮಂತನು ಸಿದ್ಧನಾಗಿ ಹೊರಟಾಗ, ಬ್ರಹ್ಮ ಅವನ ಮುಂದೆ ಪ್ರಕಟನಾದ. ಹನುಮನು ಬ್ರಹ್ಮನಿಗೆ ಪ್ರಣಾಮ ಮಾಡಿದನು "- ಹೇ ಜಗತ್ಪಿತ, ಇಂದು ನನ್ನಂಥ ವಾನರನ ಮನೆಗೆ ನಿಮ್ಮ ಪಾದಾರ್ಪಣೆ ಆಗಿರುವುದು ಅವಶ್ಯವಾಗಿ ಏನೋ ವಿಶೇಷ ಇರಬೇಕು..!" ಎನ್ನಲು ಬ್ರಹ್ಮನು "- ಶ್ರೀ ಅಂಜನಿಪುತ್ರ, ಹೇ ಶಿವಾoಷ, ಹೇ ಪವನಪುತ್ರ, ರಾಮ ಭಕ್ತ ಹನುಮಾನ್..! ನನ್ನ ಪುತ್ರ ಬಾಲಿಗೆ ಅವನ ಉದ್ದಟತನಕ್ಕಾಗಿ ಕ್ಷಮೆ ಇರಲಿ ಮತ್ತು ಅವನೊಂದಿಗೆ ಯುದ್ಧಕ್ಕೆ ಹೋಗಬೇಡ. " ಬಾಲಿಯ ಸವಾಲನ್ನು ಸ್ವೀಕರಿಸದಂತೆ ಹನುಮಂತನಿಗೆ ಮನವರಿಕೆ ಮಾಡಲು ಪ್ರಯತ್ನಿಸಿದನು. ಆಗ ಹನುಮಂತ ಹೇಳಿದ

"- ಹೇ ಪ್ರಭು, ಬಾಲಿಯು ಬಗ್ಗೆ ಹೇಳಿದರೆ ನಾನು ಅವನನ್ನು ಕ್ಷಮಿಸುತ್ತಿದ್ದೆ. ಆದರೆ ಅವನು ನನ್ನ ಆರಾಧ್ಯ ಪ್ರಭು ಶ್ರೀರಾಮನ ಕುರಿತು ಮಾತನಾಡಿ ಯುದ್ಧಕ್ಕೆ ಸವಾಲು ಹಾಕಿದ್ದಾನೆ. ಇದನ್ನು ನಾನು ಸಹಿಸಲಾರೆ. ಅಂತಹ ಪರಿಸ್ಥಿತಿಯಲ್ಲಿ, ನಾನು ಅವನ ಕೋರಿಕೆಯನ್ನು ತಿರಸ್ಕರಿಸಿದರೆ ಜಗತ್ತು ಏನು ಯೋಚಿಸುತ್ತದೆ..? ಹೀಗಾಗಿ ಅವನಿಗೆ ತಕ್ಕ ಪಾಠ ಕಲಿಸಬೇಕಾಗಿದೆ. "

ಈ ಮಾತನ್ನು ಕೇಳಿ ಬ್ರಹ್ಮನು ಹೇಳಿದ.

"- ಸರಿ ಹಾಗಾದರೆ ಯುದ್ಧಕ್ಕೆ ಹೋಗುವುದೇ ಆದಲ್ಲಿ ನಿನ್ನ ಜೊತೆ ಸಮಸ್ತ ಶಕ್ತಿಯನ್ನು ಒಯ್ಯಬೇಡ. ಶೇ. 10 ಭಾಗದಷ್ಟು ಶಕ್ತಿಯನ್ನು ಜೊತೆಯಲ್ಲಿರಿಸಿಕೊಂಡು ಹೋಗು. ಉಳಿದ 90ರಷ್ಟು ಭಾಗ ಶಕ್ತಿ ಯೋಗಬಲದೊಂದಿಗೆ ಶ್ರೀ ರಾಮನ ಪಾದಕ್ಕೆ ಅರ್ಪಿಸು. ಯುದ್ಧದ ನಂತರ ಮರಳಿ ಬಂದ ಮೇಲೆ ಅದನ್ನು ಪುನಃ ಸಂಚಯಿಸಿಕೋ. "

ಬ್ರಹ್ಮನ ಮಾತಿನ ಗೌರವಕ್ಕಾಗಿ ಹನುಮನು ಒಪ್ಪಿದ. ಬಾಲಿಯ ಜೊತೆಗೆ ಯುದ್ಧಕ್ಕೆ ಹೋಗುವಾಗ ಹತ್ತು ಭಾಗ ಶಕ್ತಿಯನ್ನಷ್ಟೇ ತನ್ನೊಡನೆ ಧರಿಸಿ ಹೋದ.

ಅಲ್ಲಿ ಬಾಲಿಯು ನಗರದ ಮಧ್ಯ ಭಾಗದಲ್ಲಿ ಒಂದು ಸ್ಥಳ ಗುರ್ತಿಸಿ ಅಲ್ಲಿ ಯುದ್ಧದ ತಯಾರಿ ನಡೆಸಿದ. ಹನುಮನೊಡನೆ ಯುದ್ಧ ಮಾಡಲು ವ್ಯಾಕುಲಗೊಂಡು ಪದೇ ಪದೇ ಯುದ್ದಕ್ಕಾಗಿ ಹನುಮನಿಗೆ ಪ್ರಚೋದಿಸುತ್ತಿದ್ದ.

ನಗರದ ಎಲ್ಲ ವೀರರು ಈ ಇಬ್ಬರು ಯೋಧರ ಯುದ್ಧವನ್ನು ಕಾತುರದಿಂದ ನೋಡಲು ಕೂಡಿದ್ದರು. ಹನುಮಾನ ಯುದ್ಧ ಸ್ಥಳ ತಲುಪಿದ ಮೇಲೆ ಯುದ್ದಕ್ಕಾಗಿ ಬಾಲಿಯು ತನ್ನನ್ನು ಪ್ರಚೋದಿಸುತ್ತಿರುವುದನ್ನು ನೋಡಿ ಒಂದೊಂದೇ ಹೆಜ್ಜೆಯೊಂದಿಗೆ ಮುಂದಡಿ ಇಡುತ್ತಿದ್ದಂತೆ ಅವನ ಅರ್ಧದಷ್ಟು ಬಲ ಬಾಲಿಯ ಶರೀರ ಸೇರತೊಡಗಿತು. ಅದರೊಂದಿಗೆ ಬಾಲಿಯ ಶರೀರದಲ್ಲಿ ಬಲದ ಪ್ರಳಯವೇ ಆಗತೊಡಗಿತು. ಆ ಬಲದ ಪ್ರಭಾವದಿಂದ ಅವನ ಶರೀರವು ಬಲೂನಿನಂತೆ ಉಬ್ಬತೊಡಗಿತು. ಸ್ವಲ್ಪದರಲ್ಲಿ ಅವನ ಶರೀರವು ಅಲ್ಲಲ್ಲಿ ಬಿರುಕುಗೊಂಡು ರಕ್ತ ಚಿಮ್ಮತೊಡಗಿತು. ಆದರೆ ಬಾಲಿಗೆ ಏನೊಂದು ತಿಳಿಯದಾಯಿತು.

ಆಗ ಬ್ರಹ್ಮನು ಬಾಲಿಗೆ ಪ್ರಕಟನಾಗಿ ಹೇಳಿದ

"- ಪುತ್ರನೇ..! ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ಇಲ್ಲಿಂದ ಬಹು ದೂರ ಹೋಗಿಬಿಡು. "

ಬಾಲಿಗೆ ಈ ಸಮಯದಲ್ಲಿ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ಅವನು ಬ್ರಹ್ಮನ ಮಾತು ಕೇಳುತ್ತಿದ್ದಂತೆ ಅಲ್ಲಿಂದ ಓಡಿ ಹೋದ. ಒಂದು ನೂರು ಮೈಲಿಗಳಷ್ಟು ದೂರ ಓಡಿದ ನಂತರ ಸುಸ್ತಾಗಿ ನೆಲದ ಮೇಲೆ ಬಿದ್ದುಬಿಟ್ಟ. ಸ್ವಲ್ಪ ಹೊತ್ತಿನ ನಂತರ ಪ್ರಜ್ಞೆ ಬಂದಾಗ "- ಇದೇನು ಬ್ರಹ್ಮಾಜಿ ..!? ಹನುಮನೊಡನೆ ಯುದ್ಧ ಮಾಡುವ ಪೂರ್ವದಲ್ಲಿ ನನ್ನ ಶರೀರವು ಒಡೆದು ಹೋಗುವಷ್ಟು ಉಬ್ಬುತ್ತಿತ್ತು. ನಂತರ ನೀವು ಅಲ್ಲಿ ಕಾಣಿಸಿಕೊಂಡು ನನ್ನನ್ನು ಎಚ್ಚರಿಸಿದಿರಿ. ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಓಡಿ ಬಂದ ನಂತರ ಈಗ ನನ್ನ ಶರೀರ ಸಾಮಾನ್ಯ ಸ್ಥಿತಿಯಲ್ಲಿ ಬಂದಿದೆ..!"

ಅವನ ಮಾತಿಗೆ ಬ್ರಹ್ಮ ಹೇಳಿದ.

"- ಪುತ್ರ, ನಿನ್ನ ಎದುರು ಹನುಮಾನನು ಬರುತ್ತಿದ್ದಂತೆ ಅವನ ಅರ್ಧದಷ್ಟು ಬಲವು ನಿನ್ನ ಶರೀರದಲ್ಲಿ ತುಂಬಿತು. ಆಗ ನಿನಗೆ ಹೇಗೆ ಅನಿಸಿತು..!?, "

ಬಾಲಿ :- ನನ್ನ ನನ್ನ ಶರೀರದಲ್ಲಿ ಶಕ್ತಿಯ ಸಾಗರವೇ ತುಂಬಿದ ಹಾಗೆ ಬೋರ್ಗರೆಯತೊಡಗಿತು. ಈ ಸಮಸ್ತ ಸಂಸಾರದಲ್ಲಿ ನನ್ನ ತೀಕ್ಷ್ಣತೆಯ ಮುಂದೆ ಯಾರೂ ಇಲ್ಲ ಅನಿಸಿತು. ಜೊತೆಗೆ ಹೀಗೂ ಅನಿಸಿತು ಸದ್ಯದಲ್ಲೇ ನನ್ನ ಶರೀರ ಸ್ಪೋಟಿಸುವುದು..!

ಬ್ರಹ್ಮನು ಹೇಳಿದನು

"- ನಾನು ಹನುಮನಿಗೆ ಅವನ ಶಕ್ತಿಯ 10 ಭಾಗ ಮಾತ್ರ ಈ ಯುದ್ಧದಲ್ಲಿ ಬಳಸಲು ಹೇಳಿದ್ದೆ. ಆದರೆ ನೀನು ಅವನು ಹತ್ತು ಭಾಗದ ಅರ್ಧದಷ್ಟು ಶಕ್ತಿಯನ್ನು ನಿರ್ವಹಿಸಲಿಲ್ಲ. ಹಾಗಿದ್ದ ಮೇಲೆ ಯೋಚಿಸು.., ಒಂದು ವೇಳೆ ಹನುಮನು ತನ್ನ ಸಮಸ್ತ ಶಕ್ತಿಯೊಂದಿಗೆ ಯುದ್ಧಕ್ಕೆ ಬಂದರೆ, ಶೇಕಡ ಐದರಷ್ಟು ಬಲದಲ್ಲಿ ಸ್ಪೋಟಿಸುವ ನಿನ್ನ ಶರೀರ, ಪೂರ್ತಿ ಶಕ್ತಿಯೊಂದಿಗೆ ಬಂದಿದ್ದರೆ ನಿನ್ನ ಸ್ಥಿತಿ ಏನಾಗುತ್ತಿತ್ತು..?"

ಈ ಮಾತಿಗೆ ಬಾಲಿ ಬೇವತು ಹೋದ. ಮತ್ತೆ ಯೋಚಿಸಿ ಹೇಳಿದ

"- ಪ್ರಭು.., ಹಾಗಾದರೆ ಹನುಮಾನನ ಬಳಿ ಇಷ್ಟೊಂದು ಶಕ್ತಿ ಇದ್ದರೆ ಅದನ್ನು ಎಲ್ಲಿ, ಏನು ಮಾಡಬಲ್ಲ..?"

ಬ್ರಹ್ಮ :- ಹನುಮಾನ ಯಾವತ್ತೂ ತನ್ನ ಶಕ್ತಿಯ ಸಂಪೂರ್ಣ ಪ್ರಯೋಗ ಮಾಡಲಾರ. ಯಾಕೆಂದರೆ ಪೂರ್ತಿ ಸೃಷ್ಟಿಯು ಕೂಡ ಅವನ ಬಲದ ಹತ್ತರಷ್ಟು ಭಾಗವನ್ನು ಸಹಿಸಲಾರದು.

ಈ ಮಾತನ್ನು ಕೇಳಿ ಬಾಲಿಯು ಹನುಮಂತನಿಗೆ ದಂಡವತ್ ಪ್ರಣಾಮ ಮಾಡಿದನು.

'- ಅಪಾರ ಶಕ್ತಿಯಿದ್ದರೂ ಹನುಮಂತನು ಶಾಂತನಾಗಿ ರಾಮಭಜನೆಯನ್ನು ಹಾಡುತ್ತಾ ಇರುತ್ತಾನೆ. ನಾನು ಅವನಿಗೆ ಕೂದಲೆಳೆಯೂ ಸಮ ಇಲ್ಲದವನು ಮತ್ತು ಅವನಿಗೆ ಸವಾಲು ಹಾಕುವವನು ನಾನ್ಯಾರು...? ' ಹನುಮಂತ ನನ್ನನ್ನು ಕ್ಷಮಿಸು."

ಆತ್ಮಗ್ಲಾನಿಯಿಂದ ತುಂಬಿ ಶ್ರೀ ರಾಮನನ್ನು ಭಜಿಸುತ್ತ ತನ್ನ ಮೋಕ್ಷದ ಮಾರ್ಗವನ್ನು ಕಂಡುಕೊಂಡ.

ಪವನ ಪುತ್ರ ಹನುಮಾನ್ ಜಿಕೆ ಜೈ, 🙏🚩

ಶ್ರೀ ರಾಮಚಂದ್ರ ಪ್ರಭು ಕಿ ಜೈ 🙏🚩

ಕೃಪೆ

ಫೇಸ್ಬುಕ್ ನಿತ್ಯ ಸತ್ಯ

Post a Comment

0Comments

Post a Comment (0)