1947ರ ಇಸವಿಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು.
ಆಗ ನಮ್ಮ ಕರ್ನಾಟಕವು ಮೈಸೂರು ರಾಜ್ಯವಾಗಿತ್ತು. ಮೈಸೂರು ರಾಜರಿಂದ ಈ ರಾಜ್ಯವನ್ನು ಸರ್ಕಾರ ತೆಗೆದುಕೊಂಡಿತು.
ಆಗ ನಮ್ಮ ರಾಜ್ಯದಲ್ಲಿ ಇವಾಗ ಇರುವಷ್ಟು ಜಿಲ್ಲೆಗಳು ಇರಲಿಲ್ಲ. ಎಷ್ಟೋ ಜಿಲ್ಲೆಗಳು ಬೇರೆ ರಾಜ್ಯಗಳಿಗೆ ಸೇರಿತ್ತು. ಕೆಲವು ಹೈದರಾಬಾದ್ ಗೆ, ಕೆಲವು ಮದ್ರಾಸ್ ಗೆ, ಕೆಲವು ಬಾಂಬೆ ಗೆ. ದಕ್ಷಿಣ ಕರ್ನಾಟಕದಲ್ಲಿ ಇದ್ದ ಕೆಲವು ಜಿಲ್ಲೆಗಳು ಮಾತ್ರ ಮೈಸೂರು ರಾಜ್ಯಕ್ಕೆ ಸೇರಿತ್ತು.
ಅವುಗಳು ಯಾವುದೆಂದರೆ ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ. ಈ ಜಿಲ್ಲೆಗಳನ್ನು ಆಳುವ ಒಬ್ಬ ಮುಖ್ಯಮಂತ್ರಿಯ ನೇಮಕ ಆಯಿತು.
ಅವರ ಹೆಸರು ಚೆಂಗಲರಾಯ ರೆಡ್ಡಿ.
ಇವರು 1947 ರಿಂದ 1950 ವರೆಗೂ ನಮ್ಮ ಮೈಸೂರು ರಾಜ್ಯದ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದರು.
ನಮ್ಮ ರಾಜ್ಯದ ಜಿಲ್ಲೆಗಳು ಒಟ್ಟಿಗೆ ಸೇರಿ ಸಂಪೂರ್ಣ ಕನ್ನಡ ನಾಡು ಆಗಿದ್ದು 1956 ರ ವರ್ಷದಲ್ಲಿ.
ಆದ್ದರಿಂದ ಇವರೇ ನಮ್ಮ ರಾಜ್ಯದ ಮೊದಲ ಮುಖ್ಯಮಂತ್ರಿ. ಒಳ್ಳೆ ಆಡಳಿತಕ್ಕೆ ಇವರು ಹೆಸರುವಾಸಿ ಆಗಿದ್ದರು.