ಗಂಡನನ್ನು ಬುಟ್ಟಿಯಲ್ಲಿ ಕೂರಿಸಿ ತಲೆಯ ಮೇಲೆ ಹೊತ್ತುಕೊಂಡು ಹೋಗಿ ವೇಶ್ಯೆಯ ಮನೆಗೆ ಬಿಟ್ಟು ಬರುತ್ತಿದಂತಹ " ಪತಿವ್ರತೆ ಸುಮತಿಯ ಬಗ್ಗೆ ತಿಳಿಯೋಣ
🍁 ಪ್ರತಿಷ್ಟಾನಪುರ ಎಂಬ ಗ್ರಾಮದಲ್ಲಿ ಕೌಶಿಕ ಎಂಬ ಬ್ರಾಹ್ಮಣ ಇದ್ದ ಅವನು ಉತ್ತಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು ಕೂಡ ತಂದೆ ತಾಯಿ ಗುರು ಹಿರಿಯರ ಮಾತು ಕೇಳದೆ..ಸಾರಾಯಿ ಕುಡಿಯುವುದು ಜೂಜಾಟ ಆಡುವುದು ಹಾಗೆ ವೇಶ್ಯೆಯರ ಸಹವಾಸ ಮಾಡಿ ತನ್ನ ಕುಟುಂಬದ ಮಾನ ಮರ್ಯಾದಿಯನ್ನು ಕಳೆಯುತಿದ್ದ..
🍁ಕೌಶಿಕನು ಒಬ್ಬ ಎಂತಹ ನೀಚ ಬ್ರಾಹ್ಮಣ ಎಂದರೆ ಇಂತಹ ಬ್ರಾಹ್ಮಣರು ಕೂಡ ಇರುತ್ತಾರೆಯೇ ಎಂದು ಪ್ರತಿಷ್ಟಾನಪುರದ ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು..
ಕೌಶಿಕನ ತಂದೆ ತಾಯಿ ಇಬ್ಬರು ಒಳ್ಳೆ ದಂಪತಿಗಳು ಹಾಗೂ ಇವರಿಬ್ಬರು ವಿಷ್ಣುವಿನ ಭಕ್ತರು ಹಾಗಾಗಿ ಇವರ ಮನೆಯಲ್ಲಿ ಯಾವಾಗಲು ಹರಿನಾಮ ಭಜನೆ ಮಾಡುತ್ತಿದ್ದರು..
🍁 ಕೌಶಿಕ ತುಂಬಾ ದರಿದ್ರ ನೀಚ ಬ್ರಾಹ್ಮಣ ಆದರೂ ಕೂಡ ಅವನಲ್ಲಿ ಒಂದು ಒಳ್ಳೆ ಗುಣವಿತ್ತು ಅವನ ಮನೆಯಲ್ಲಿ ಯಾವಾಗಲು ಅವನ ತಂದೆ ತಾಯಿ ಭಜನೆ ಹರಿನಾಮ ಮಾಡುತ್ತಿದ್ದ ಕಾರಣ.. ಕೌಶಿಕನಿಗೂ ಕೂಡ ಚಿಕ್ಕಂದಿನಿಂದಲೆ ಓಂ ನಮೋ ನಾರಾಯಣ ಎಂಬ ಹರಿನಾಮ ಬಾಯಿ ಪಾಠವಾಗಿತ್ತು..
🍁 ಮದುವೆ ಮಾಡಿದ ಮೇಲೆ ಆದರೂ ಕೂಡ ತಮ್ಮ ಮಗ ಸರಿ ಆಗಬಹುದು ಎಂಬ ಕಾರಣಕ್ಕೆ ಕೌಶಿಕನ ತಂದೆ ತಾಯಿ ಸೇರಿ ಕೌಶಿಕನಿಗೆ ಮದುವೆ ಮಾಡಲು ಯೋಚಿಸಿದರು..
🍁ಕೌಶಿಕ ಎಷ್ಟೇ ಕೆಟ್ಟ ಬ್ರಾಹ್ಮಣ ಆಗಿದ್ದರು ಕೂಡ
ಓಂ ನಮೋ ನಾರಾಯಣ ಅಂತ ಹರಿನಾಮ ಜಪಿಸುತ್ತಿದ್ದ..
ಇವನ ಈ ಒಂದೇ ಒಂದು ಒಳ್ಳೆ ಗುಣದ ಕಾರಣ ಇವನಿಗೆ
( ಸುಮತಿ ಎಂಬ ಸದ್ಗುಣಶೀಲೆ ಹುಡುಗಿ ಹೆಂಡತಿಯಾಗಿ ಬಂದಳು..)
🍁 ಮದುವೆ ಆದಮೇಲೆ ಸುಮತಿಯು ಗಂಡನನ್ನು ದೇವರೆಂದು ಭಾವಿಸಿ ಸೇವೆಗಳನ್ನು ಮಾಡುತ್ತಿದ್ದಳು ( ಮದುವೆಯ ನಂತರವೂ ಕೂಡ ಕೌಶಿಕನು ತನ್ನ ದುರ್ಬುದ್ದಿ ಬಿಡಲಿಲ್ಲ.. ಸಾರಾಯಿ ಕುಡಿಯುವುದು ಜೂಜಾಟ ಆಡುವುದು ಹಾಗೆ ಸುಮತಿ ಅಂತ ಒಳ್ಳೆ ಹೆಂಡತಿ ಬಂದರು ಕೂಡ ಕೌಶಿಕನು ವೇಶ್ಯೆಮನೆಗೆ ಹೋಗುವುದನ್ನು ಮಾತ್ರ ನಿಲ್ಲಿಸಲಿಲ್ಲ..
🍁 ಗಂಡನ ಈ ಎಲ್ಲ ಕೆಟ್ಟ ಗುಣವನ್ನು ನೋಡಿಯೂ ಕೂಡ
ಒಂದು ಸಲವು ಕೂಡ ಸುಮತಿಯು ಗಂಡನಿಗೆ ಬಯ್ಯುತ್ತಿರಲಿಲ್ಲ ಏನು ಕೂಡ ಹೇಳುತ್ತಿರಲಿಲ್ಲ..
🍁 ಈಕಡೆ ಮಗನನ್ನು ಒಳ್ಳೆ ದಾರಿಗೆ ತರುವುದಕ್ಕೆ ಆಗದೆ
ಆಕಡೆ ಸೊಸೆಯ ಕಣ್ಣೀರು ಒರೆಸೋಕೆ ಆಗದೆ ಒಂದು ದಿನ ಕೌಶಿಕನ ತಂದೆ ತಾಯಿ ಕೊರಗಿ ಕೊರಗಿ ಸತ್ತು ಹೋದರು..
🍁ಈಗ ಮನೆಯಲ್ಲಿ ಉಳಿದಿದ್ದು ಕೌಶಿಕ ಹಾಗೂ ಸುಮತಿ ಇಬ್ಬರೇ.. ಈಗ ಅಂತೂ ಹೇಳೋರು ಕೇಳೋರು ಇಲ್ಲದೆ ಕೌಶಿಕನು ಇನ್ನಷ್ಟು ದುರ್ಬುದ್ದಿ ಮಾಡುತ್ತ ಸಾರಾಯಿ ವೇಶ್ಯೆವಾಟಿಕೆ ಅಲ್ಲಿಯೇ ಮುಳುಗುತ್ತಿದ್ದ..
🍁 ಕೌಶಿಕನ ಈ ಕೆಟ್ಟ ದುರ್ಬುದ್ದಿಯ ಪರಿಣಾಮವಾಗಿ ಹಾಗೆ ಅವನು ಮಾಡಿದ ಪಾಪ ಕರ್ಮಗಳಿಗೆ ತಕ್ಕಂತೆ ಅವನಿಗೆ
ಕುಷ್ಟ ರೋಗ ಬರುತ್ತದೆ.. ಕುಷ್ಟರೋಗ ಬಂದಿದ್ದು ಪ್ರತಿಷ್ಟಾನಪುರ ಗ್ರಾಮದ ಜನರಿಗೆ ಗೊತ್ತಾಗಿ..ಎಲ್ಲ ಜನರು ಸೇರಿ ಕೌಶಿಕನ ಜೊತೆಗೆ ಸುಮತಿಯನ್ನು ಕೂಡ ಗ್ರಾಮದಿಂದ ಹೊರಗೆ ಹಾಕಿದರೂ..
🍁 ಬೇರೆ ದಾರಿ ಇಲ್ಲದೆ ಸುಮತಿಯು ತನ್ನ ಕುಷ್ಟರೋಗ ಬಂದಿರುವ ಗಂಡನನ್ನು ಕರೆದುಕೊಂಡು ಊರಿನ ಆಚೆ ಇರುವ ಸ್ಮಶಾನದ ಬಳಿ ಒಂದು ಗುಡಿಸಲು ಕಟ್ಟಿಕೊಂಡು ಅಲ್ಲೇ ಇರಲು ಶುರು ಮಾಡಿದರು..
🍁 ಸುಮತಿಯು ದಿನ ಬೆಳಿಗ್ಗೆ ಬೇಗ ಎದ್ದು ಗಂಡನನ್ನು ಎಬ್ಬಿಸಿ ಅವನಿಗೆ ಸ್ನಾನ ಮಾಡಿಸಿ.. ಅವನ ದೇಹದ ಕುಷ್ಟರೋಗದ ಗಾಯಗಳಿಗೆ ಔಷದಿ ಹಚ್ಚಿ..ತಿಂಡಿ ಕೊಟ್ಟು ಗುಡಿಸಲಿನ ಜಗುಲಿ ಮೇಲೆ ಅವನನ್ನು ಕೂರಿಸಿ..
ಸುಮತಿಯು ಊರಿನಲ್ಲಿ ಇರುವ ಮನೆಗಳಿಗೆ ಕೆಲಸ ಮಾಡಲು ಹೋಗುತ್ತಿದ್ದಳು.. ಅಲ್ಲಿ ಪಾತ್ರೆ ಮುಸುರೆ ತಿಕ್ಕಿಕೊಂಡು ಬಟ್ಟೆ ಒಗೆದು ಕೊಡುವುದು ಅಡುಗೆ ಕೆಲಸ ಮಾಡಿ ಅಲ್ಪ ಸಲ್ಪ ಹಣ ಗಳಿಸುತ್ತಿದ್ದಳು..
🍁 ಪ್ರತಿಷ್ಟಾನಪುರದ ಗ್ರಾಮದ ಜನಗಳಿಗೆ ಸುಮತಿಯ ಒಳ್ಳೆ ಗುಣದ ಬಗ್ಗೆ ಗೊತ್ತಿತ್ತು.. ಕೌಶಿಕ ಒಬ್ಬ ನೀಚ ದುಷ್ಟ ವ್ಯಕ್ತಿ ಆದರೆ ಅವನ ಹೆಂಡತಿ ಸುಮತಿಯು ಒಳ್ಳೆ ಸ್ತ್ರೀ ಎಂದು ಎಲ್ಲರಿಗೂ ಗೊತ್ತಿತ್ತು.. ಹಾಗಾಗಿ ಪ್ರತಿಷ್ಟಾನಪುರದ ಗ್ರಾಮದ ಜನರು ಕರುಣೆಯಿಂದ ಹಳೆಯ ಬಟ್ಟೆಗಳನ್ನು ಹಾಗೂ ಊಟ ರೊಟ್ಟಿಯನ್ನು ಸುಮತಿಗೆ ಕೊಡುತ್ತಿದ್ದರು..
🍁 ಸುಮತಿಯು ಆ ಬಟ್ಟೆ ಊಟವನ್ನು ಹೊತ್ತುಕೊಂಡು ಊರಿನಿಂದ ಈಚೆ ಸ್ಮಶಾನದ ಬಳಿ ಇರುವ ತನ್ನ ಗುಡಿಸಲಿಗೆ ತಂದು.. ಮೊದಲು ಆ ಊಟವನ್ನು ಗಂಡನಿಗೆ ತಿನ್ನಿಸಿ ಆದಮೇಲೆ ನಂತರ ತಾನು ತಿನ್ನುತ್ತಿದ್ದಳು..
ಸುಮತಿಯ ಈ ಪತಿ ಭಕ್ತಿಯನ್ನು ನೋಡಿ ಸ್ವರ್ಗದ ದೇವತೆಗಳೇ ಆಶ್ಚರ್ಯ ಪಡುತ್ತಿದ್ದರಂತೆ..
🍁 ಆದರೆ ಕೌಶಿಕನು ಮಾತ್ರ ತನ್ನ ದುರ್ಬುದ್ದಿ ಬಿಡಲಿಲ್ಲ
ದಿನವೂ ಸುಮತಿಗೆ ಚುಚ್ಚು ಮಾತುಗಳಿಂದ kett ಕೆಟ್ಟದಾಗಿ ಬಯ್ಯುತಿದ್ದ..ನಿನ್ನಿಂದಲೇ ನನಗೆ ಈ ಕುಷ್ಟರೋಗ ಬಂತು ನಿನ್ನನ್ನು ಮದುವೆ ಆದಮೇಲೆಯೇ ನನಗೆ ಈ ದುರ್ಗತಿ ಬಂತು ಅಂತ ಚುಚ್ಚು ಮಾತುಗಳಿಂದ ನಿಂದನೆ ಮಾಡುತ್ತಿದ್ದ
🍁 ನನ್ನಿಂದ ಸುಮತಿಯ ಜೀವನ ಹಾಳಾಯಿತು ನಾನು ಇತರ ಚುಚ್ಚು ಮಾತುಗಳಿಂದ ಬೈದರೆ ಸುಮತಿ ನನ್ನನ್ನು ಬಿಟ್ಟು ಹೋಗಿ ಎಲ್ಲಾದರೂ ಸುಖವಾಗಿ ಜೀವನ ಮಾಡುತ್ತಾಳೆ ಎಂದು ಕೌಶಿಕ ಅಂದುಕೊಂಡು ಈ ರೀತಿ ಮಾಡುತ್ತಿದ್ದ.. ಈ ಬುದ್ದಿ ಅವನಿಗೆ ಮೊದಲೇ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಲೇ ಇರ್ತ ಇರಲಿಲ್ಲ..
🍁 ಅವನು ಎಷ್ಟೇ ಬೈದರು ಕೂಡ ಸುಮತಿ ಏನು ಅಂದುಕೊಳ್ಳುತ್ತಿರಲಿಲ್ಲ ನಿಮ್ಮ ಸೇವೆ ಮಾಡಲು ಆ ವಿಷ್ಣುವೆ ನನ್ನನ್ನು ನೇಮಿಸಿದ್ದಾನೆ ಎಂದು ಅಂದುಕೊಳ್ಳಿ ಎಂದು ಸುಮತಿ ನಗುತ್ತಾ ಮನೇ ಒಳಗೆ ಹೋದಳು..
🍁 ಒಂದು ದಿನ ಪ್ರತಿಷ್ಟಾಪುರದ ಹತ್ತಿರವಿರುವ
ರಾಜರ ಅರಮನೆಯಲ್ಲಿ ಕಳ್ಳತನವಾಗುತ್ತದೆ ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ಮೂಟೆ ಕಟ್ಟಿಕೊಂಡು ಕದ್ದುಕೊಂಡು ಹೋಗುತ್ತಿರುವಾಗ ರಾಜನ ಸೈನಿಕರು ಅದನ್ನು ನೋಡಿ ಕಳ್ಳರನ್ನು ಅಟ್ಟಿಸಿಕೊಂಡು ಬಂದರು..
🍁 ಕಳ್ಳರು ಕೂಡಲೆ ಬೆಲೆ ಬಾಳುವ ವಸ್ತು ಇರುವ ಮೂಟೆಯನ್ನು ಗ್ರಾಮದ ಆಚೆ ಇರುವ " ಮಾoಡವ್ಯ ಮುನಿಗಳ ಆಶ್ರಮದ ಒಳಗೆ ಹೋಗಿ ಆ ಬೆಲೆ ಬಾಳುವ ವಸ್ತುಗಳನ್ನು ಅಲ್ಲಿ ಬಚ್ಚಿಟ್ಟರು.. ಹಾಗೆ ತಾವು ಕೂಡ ಅಲ್ಲೇ ಅಡಗಿಕೊಂಡರು..
🍁 ತನ್ನ ಆಶ್ರಮದ ಒಳಗೆ ಕಳ್ಳರು ಬಂದು ಅರಮನೆಯ ಬೆಲೆ ಬಾಳುವ ವಸ್ತುವನ್ನು ತಂದು ಇಟ್ಟು ಕಳ್ಳರು ಕೂಡ ಇಲ್ಲೇ ಅಡಗಿಕೊಂಡಿದ್ದಾರೆ ಎಂದು ಮಾಂಡವ್ಯ ಮುನಿಗೆ ಗೊತ್ತಿರುತ್ತದೆ.. ಆದರೆ ಅವರು ಕಠಿಣವಾದ ಮೌನ ವ್ರತ ಆಚರಣೆ ಮಾಡುತ್ತ ಇರುತ್ತಾರೆ ಹಾಗಾಗಿ ಅವರು ಕಳ್ಳರಿಗೆ ಏನು ಅನ್ನದೆ ತಮ್ಮ ಪಾಡಿಗೆ ಮೌನ ವ್ರತ ಆಚರಣೆ ಮಾಡುತ್ತಿರುತ್ತಾರೆ..
🍁 ಸ್ವಲ್ಪ ಹೊತ್ತು ಆದಮೇಲೆ ಅರಮನೆಯ ಸೈನಿಕರು ಆಶ್ರಮದ ಬಳಿ ಬಂದು ಅಲ್ಲೇ ಅಡಗಿಕೊಂಡ ಕಳ್ಳರನ್ನು ಬಂದಿಸುತ್ತಾರೆ ಹಾಗೆ ಮಾಂಡವ್ಯ ಮುನಿಗಳು ಕೂಡ ಸುಮ್ಮನೆ ಕುಳಿತಿರುವುದನ್ನು ನೋಡಿ ಇವರು ಕೂಡ ಕಳ್ಳರಿಗೆ ಸಹಾಯ ಮಾಡುತ್ತಿದ್ದರೆ ಎಂದು ಅಪಾರ್ಥ ಮಾಡಿಕೊಂಡು ಕೊಂಡು ಸೈನಿಕರು ಕಳ್ಳರ ಜೊತೆಗೆ ಮಾಂಡವ್ಯ ಮುನಿಗಳನ್ನು ಕೂಡ ಅರಮನೆಗೆ ಎಳೆದುಕೊಂಡು ಹೋಗುತ್ತಾರೆ..
🍁 ಸೈನಿಕರು ಕಳ್ಳರನ್ನು ಹಾಗೂ ಮಾಂಡವ್ಯ ಮುನಿಗಳನ್ನು ರಾಜನ ಎದುರು ತಂದು ನಿಲ್ಲಿಸಿದರು.. ಮಾಂಡವ್ಯ ಮುನಿಗಳು ಮೌನ ವ್ರತ ಆಚರಣೆ ಮಾಡುತ್ತಿದ್ದ ಕಾರಣ ತಾನು ಕಳ್ಳ ಅಲ್ಲ ಎಂದು ಹೇಳಲು ಸಾಧ್ಯವಗಲ್ಲ..
🍁 ಹಾಗಾಗಿ ಮುನಿ ವೇಷ ಧರಿಸಿ ಕಳ್ಳತನ ಮಾಡುತ್ತೀಯಾ ಅಂತ ಕೋಪದಲ್ಲಿ ರಾಜನು ಮಾಂಡವ್ಯ ಮುನಿಗೂ ಹಾಗೂ ಕಳ್ಳರಿಗೂ ಕಠಿಣ ಶಿಕ್ಷೆ ಕೊಡುತ್ತಾರೆ..
ಆ ಶಿಕ್ಷೆ ಏನೆಂದರೆ 🔱 ತ್ರಿಶುಲವನ್ನು ನೆಲಕ್ಕೆ ಹುಗಿದು ಅದರ ಮೇಲೆ ಮಾಂಡವ್ಯ ಮುನಿಗಳನ್ನು ಹಾಗೂ ಕಳ್ಳರನ್ನು ಕೂರಿಸಿದರು.. ಒಂದೊಂದು ತ್ರಿಶುಲದ ಮೇಲೆ ಒಬ್ಬೊಬ್ಬರನ್ನು ಕೂರಿಸಿದರು.. ನೋವಿನಲ್ಲಿ ಮಾಂಡವ್ಯ ಮುನಿಗಳ ಕಣ್ಣಲ್ಲಿ ನೀರು ಬರುತ್ತಿತ್ತು..
🍁 ರಾತ್ರಿ ಕಳೆದು ಬೆಳಿಗ್ಗೆ ಆಯಿತು ಎಂದಿನಂತೆ ಸುಮತಿಯು ತನ್ನ ಕುಷ್ಟರೋಗಿಯಾದ ಗಂಡನಿಗೆ ಔಷದಿ ಹಚ್ಚಿ ತಿಂಡಿಕೊಟ್ಟು ಮನೆಯ ಜಗುಲಿಯ ಮೇಲೆ ಕೂರಿಸಿ
ಊರಿನ ಜನರ ಮನೆಯ ಕೆಲಸಕ್ಕೆ ಹೋದಳು..
🍁 ಸುಮತಿಯು ಊರಿನ ಜನರ ಮನೇಯ ಕೆಲಸಕ್ಕೆ ಹೋದಮೇಲೆ ಕೌಶಿಕನು ಜಗುಲಿ ಮೇಲೆ ಕುಳಿತು ಯೋಚನೆ ಮಾಡಲು ಶುರು ಮಾಡಿದ.. ನನ್ನ ಹೆಂಡತಿ ಸುಮತಿ ನನ್ನಂತ ಕುಷ್ಟರೋಗಿಯನ್ನು ಕಟ್ಟಿಕೊಂಡು ಜೀವನ ಹಾಳುಮಾಡಿಕೊಳ್ಳುತ್ತಿದ್ದಾಳೆ ಹೇಗಾದರೂ ಮಾಡಿ ಇವಳಿಗೆ ನ್ಯಾಯ ಕೊಡಿಸಬೇಕು ಎಂದು ಯೋಚನೆ ಮಾಡುತ್ತಿದ್ದ
🍁 ಹಾಗೆ ಅವನು ಯೋಚನೆ ಮಾಡುತ್ತ ಕುಳಿತಿದ್ದಾಗ ಅವನ ಗುಡಿಸಲಿನ ಎದುರು ದಾರಿಯಲ್ಲಿ ಒಂದು ಪಲ್ಲಕ್ಕಿ ಹೋಗುತ್ತಾ ಇರುತ್ತದೆ ಆ ಪಲ್ಲಕಿ ಒಳಗೆ ಒಬ್ಬಳು ಮಹಿಳೆ ಇರುತ್ತಾಳೆ ಅವಳನ್ನು ನೋಡಿದ ಕೂಡಲೇ ಅವಳೊಬ್ಬಳು ವೇಶ್ಯೆ ಎಂದು ಕೌಶಿಕನಿಗೆ ಅರ್ಥವಾಗುತ್ತದೆ..
🍁 ಕೌಶಿಕನು ಸುಮತಿಯನ್ನು ಉದ್ದಾರ ಮಾಡಲು ಒಂದು ಉಪಾಯ ಮಾಡುತ್ತಾನೆ...
ಊರಿನ ಜನರ ಮನೆ ಕೆಲಸ ಮುಗಿಸಿ ಸಂಜೆ ಗಂಡನಿಗೆ ಊಟ ಕೊಡಲು ಸುಮತಿ ಗುಡಿಸಲಿಗೆ ಬಂದು ಕೌಶಿಕನಿಗೆ ಊಟ ಹಾಕುತ್ತಾಳೆ ಆದರೆ ಕೌಶಿಕ ಊಟ ನೀರು ಏನು ಬೇಡ ಎಂದು ಹಠ ಮಾಡುತ್ತಾನೆ..
🍁 ಕಾರಣ ಏನು ಎಂದು ಸುಮತಿ ಕೇಳುತ್ತಾಳೆ..
ಇವತ್ತು ನಮ್ಮ ಗುಡಿಸಲಿನ ಎದುರು ಒಂದು ಪಲ್ಲಕಿ ಅಲ್ಲಿ ನಾನು ಒಬ್ಬಳು ವೇಶ್ಯೆಯನ್ನು ನೋಡಿದೆ ಅವಳನ್ನು ನೋಡಿದ ಮೇಲೆ ನನಗೆ ಅವಳ ಮೇಲೆ ಮನಸ್ಸಾಗಿದೆ
ನಾನು ಅವಳ ಜೊತೆ ಒಂದು ರಾತ್ರಿ ಮಲಗಬೇಕು ಎಂದು ಕೌಶಿಕ ಹೇಳುತ್ತಾನೆ..
🍁 ಈಗ ಸಂಜೆ ಆಗಿದೆ ಇವತ್ತು ರಾತ್ರಿ ನಾನು ಆ ವೇಶ್ಯೆಯ ಜೊತೆ ಮಲಗಬೇಕು..ಇವತ್ತೇನಾದರೂ ನಾನು ಅವಳ ಜೊತೆ ಮಲಗಲು ಸಾಧ್ಯವಾಗಿಲ್ಲ ಎಂದರೆ ನಾನು ನಾಳೆ ಸೂರ್ಯೋದಯದ ಒಳಗೆ ಸತ್ತು ಹೋಗುತ್ತೇನೆ ಎಂದು ಕೌಶಿಕ ಹೇಳುತ್ತಾನೆ.. ಸಂಜೆ ಸಮಯದಲ್ಲಿ ಕೆಟ್ಟ ಮಾತುಗಳನ್ನು ಆಡಬಾರದು ಎಂಬತೆ.. ಕೌಶಿಕನು ಸಂಜೆ ವೇಳೆಗೆ ಸಾವಿನ ಮಾತು ಆಡಿದ ಕಾರಣ..
ಅದೇ ಸಂಜೆ ಸಮಯದಲ್ಲಿ ಆಕಾಶದಲ್ಲಿ ಅಶ್ವಿನಿದೇವತೆಗಳು ಸಂಚಾರ ಮಾಡುತ್ತಿದ್ದರು ಇವನ ಈ ಮಾತು ಕೇಳಿ ತಥಾಸ್ತು ಅನ್ನುತ್ತಾರೆ ಅಲ್ಲಿಗೆ ಕೌಶಿಕ ಆಡಿದ ಸಾವಿನ ಮಾತು ನಿಜವಾಗುವ ಸಮಯ ಬರುತ್ತದೆ..
🍁 ನನ್ನನ್ನು ವೇಶ್ಯೆ ಮನೆಗೆ ಕರೆದುಕೊಂಡು ಹೋಗಲು ಹೇಳಿದರೆ ನನ್ನ ಮಾತು ಕೇಳಿ ಛಿ ಅಂತ ಉಗಿದು ನನ್ನನ್ನು ಬಿಟ್ಟು ಸುಮತಿಯು ಬೇರೆ ಕಡೆ ಹೋಗಿ ಸುಖವಾಗಿ ಜೀವನ ಮಾಡುತ್ತಾಳೆ ಎಂದು ಕೌಶಿಕ ಅಂದುಕೊಂಡಿದ್ದ..
ಆದರೆ ಕೌಶಿಕನ ಈ ಆಸೆಯನ್ನು ಕೇಳಿ ಸುಮತಿಯು ಸ್ವಲ್ಪವು ಕೂಡ ಅಸಹ್ಯ ಪಡಲಿಲ್ಲ..
🍁 ಸಂಜೆ ಮುಗಿದು ರಾತ್ರಿ ಆದ ಕೂಡಲೇ ಸುಮತಿಯು ತನ್ನ ಗಂಡನನ್ನು ಸ್ನಾನ ಮಾಡಿಸಿ ಒಳ್ಳೆ ಬಟ್ಟೆ ಹಾಕಿ ಅಲಂಕಾರ ಮಾಡಿದಳು ಕೌಶಿಕನಿಗೆ ಕುಷ್ಟ ರೋಗ ಬಂದ ಕಾರಣ ನಡೆಯಲು ಆಗುತ್ತಿರಲಿಲ್ಲ ಹಾಗಾಗಿ ಅವನನ್ನು ಎತ್ತಿಕೊಂಡು ಒಂದು ಬುಟ್ಟಿ ಒಳಗೆ ಕೂರಿಸಿ ಆ ಬುಟ್ಟಿಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸುಮತಿಯು ವೇಶ್ಯೆ ಮನೆಯ ದಾರಿ ಹಿಡಿದು ನಡೆಯಲು ಶುರು ಮಾಡಿದಳು..
🍁 ಸುಮತಿ ಈಗಲೂ ಕೂಡ ನಿನಗೆ ನನ್ನ ಮೇಲೆ ಕೋಪ ಬರುತ್ತಿಲವೇ ನನ್ನನು ನೋಡಿ ಅಸಹ್ಯವಾಗುತ್ತಿಲವೇ ಎಂದು ಕೇಳುತ್ತಾನೆ.. ಸುಮತಿಯು ಅವನ ಮಾತಿಗೆ ಏನು ಉತ್ತರ ಕೊಡದೆ ಅವನನ್ನು ಹೊತ್ತುಕೊಂಡು ನಡೆಯುತ್ತ ಇದ್ದಳು..
ನಾನು ಇಷ್ಟು ಮಾತಾಡುತ್ತಾ ಇದ್ದರು ಕೂಡ ನಿನಗೆ ಉತ್ತರ ಕೊಡಬೇಕು ಅಂತ ಅನ್ನಿಸುತ್ತ ಇಲ್ಲವೇ.. ನೀನು ನಿಜವಾಗಲೂ ನನ್ನನ್ನು ವೇಶ್ಯೆಯ ಮನೆಗೆ ಕರೆದುಕೊಂಡು ಹೋಗುತ್ತಾ ಇದ್ದಿಯೊ ಅಥವಾ ನಿನಗೆ ಅಲ್ಲಿ ಯಾರಾದರೂ ಗಿರಾಕಿಗಳು ಸಿಗುತ್ತಾರೆ ಎಂದು ಬರುತ್ತೀರುವೆಯೋ ಎಂದು ತುಂಬಾ ಕೀಳು ಮಟ್ಟದಲ್ಲಿ ಚುಚ್ಚು ಮಾತುಗಳನ್ನು ಆಡುತ್ತಿದ್ದನು..
🍁 ಕೌಶಿಕನು ಏನೆ ಅಂದರು ಅದಕ್ಕೆ ಸುಮತಿಯು ಉತ್ತರ ಕೊಡದೆ ಇದ್ದದು ನೋಡಿ ಕೌಶಿಕನಿಗೆ ಕೋಪ ಬಂದು ಬುಟ್ಟಿಯಿಂದ ಕೆಳಗೆ ಇಳಿಯಲು ಕಾಲು ಹೊರಗೆ ಹಾಕುತ್ತಾನೆ ದಾರಿಯಲ್ಲಿ ಅಲ್ಲೆ ತ್ರಿಶುಲದ ಮೇಲೆ ಕುಳಿತು ಶಿಕ್ಷೆ ಅನುಭವಿಸುತ್ತ ಇದ್ದಂತಹ ಮಾಂಡವ್ಯ ಮುನಿಗಳಿಗೆ ಕೌಶಿಕನ ಕಾಲು ತಾಕುತ್ತದೆ..
🍁 ಮೊದಲೇ ತ್ರಿಶುಲದ ಮೇಲೆ ಕುಳಿತು ನೋವು ಪಡುತ್ತಿದ್ದ ಮಾಂಡವ್ಯ ಮುನಿಗಳಿಗೆ ಕೋಪ ಇತ್ತು ಈಗ ಕೌಶಿಕನ ಕಾಲು ತಾಗಿ ಇನ್ನಷ್ಟು ಕೋಪ ಬಂದು ಕೌಶಿಕನಿಗೆ ಶಾಪ ಕೊಡುತ್ತಾರೆ
ಯಾವ ವ್ಯಕ್ತಿಯ ಕಾಲು ನನ್ನ ದೇಹಕ್ಕೆ ತಾಕಿದಿಯೋ ಆ ವ್ಯಕ್ತಿಯ ತಲೆ ನಾಳೆ ಸೂರ್ಯೋದಯಕ್ಕೂ ಮುನ್ನವೇ ಸಾವಿರ ಚುರುಗಳಾಗಿ ಹೋಗಲಿ ಎಂದು ಶಾಪ ಕೊಟ್ಟರು..
🍁 ಅಶ್ವಿನಿದೇವತೆಗಳು ಸಂಚಾರ ಮಾಡುತ್ತಿದಾಗ ಮನೆಯಲ್ಲಿ ಕುಳಿತು ಕೌಶಿಕನು ನಾನು ವೇಶ್ಯೆಯ ಜೊತೆ ಮಲಗಲು ಸಾಧ್ಯವಗದಿದ್ದರೆ ನಾಳೆ ಸೂರ್ಯೋದಯಕ್ಕೂ ಮುನ್ನವೇ ಸಾಯುತ್ತೀನಿ ಅಂತ ಹೇಳಿದ್ದ ಆ ಮಾತು ಕೇಳಿ ಅಶ್ವಿನಿ ದೇವತೆಗಳು ತಥಾಸ್ತು ಅಂದಿದ್ದರು.. ಈಗ ಮಾಂಡವ್ಯ ಮುನಿಗಳು ಕೂಡ ಶಾಪ ಕೊಟ್ಟು ಬಿಟ್ಟರು..
ಅಶ್ವಿನಿದೇವತೆಗಳ ತಥಾಸ್ತು ವರ ಹಾಗೂ ಮಾಂಡವ್ಯ ಮುನಿಯ ಶಾಪ ಏರೆಡು ಸೇರಿ ಕೌಶಿಕನ ಸಾವಿಗೆ ಕಾರಣವಾಯಿತು.. ಇನ್ನೇನು ಕೌಶಿಕ ಚಟ್ಟ ಏರುವ ಸಮಯ ಹತ್ತಿರ ಬರುತಿತ್ತು..
🍁 ಮಾಂಡವ್ಯ ಮುನಿಗಳು ನಾಳೆ ಸೂರ್ಯೋದಯದ ಒಳಗೆ ತನ್ನ ಗಂಡನ ತಲೆ ಸಾವಿರ ಚೂರು ಆಗಲಿ ಎಂದು ಶಾಪ ಕೊಟ್ಟಿದು ಕೇಳಿದ ಸುಮತಿಯು ಕೂಡ ಮರು ಶಾಪವನ್ನು ಹಾಕುತ್ತಾಳೆ.
( ನಾಳೆ ಸೂರ್ಯದೇವ ಉದಯಿಸದೆ ಇರಲಿ ಎಂದು ಸುಮತಿ ಶಾಪ ಕೊಡುತ್ತಾಳೆ.. ಪತಿವ್ರತೆ ಸುಮತಿಯ ಶಾಪಕ್ಕೆ ಹೆದರಿದ ಸೂರ್ಯದೇವ ಉದಯಿಸಲೇ ಇಲ್ಲ ಸೂರ್ಯ ಉದಯವಾಗದೆ ಇರುವ ಪರಿಣಾಮ ಜಗತ್ತಿನಲ್ಲಿ ಕೇವಲ ಕತ್ತಲು ಕತ್ತಲು.. ಸ್ವರ್ಗದ ದೇವತೆಗಳು ಸುಮತಿಯ ಬಳಿ ಬಂದು ಶಾಪವನ್ನು ಹಿಂದಕ್ಕೆ ಪಡೆದುಕೊ ಅಂದರು ಕೂಡ ಸುಮತಿಯು ಯಾರ ಮಾತು ಕೇಳಲಿಲ್ಲ..
🍁 ದೇವತೆಗಳೇ ನಾನು ನನ್ನ ಶಾಪವನ್ನು ಹಿಂದಕ್ಕೆ ಪಡೆಯುತ್ತೇನೆ ಆದರೆ ನೀವು ಆ ಮುನಿಯ ಶಾಪವನ್ನು ಹಿಂದಕ್ಕೆ ಪಡೆಯಿರಿ ಎಂದು ಸುಮತಿ ಹೇಳುತ್ತಾಳೆ..
🍁 ಆಗ ಇಂದ್ರ ದೇವನು ಬಂದು ಇಲ್ಲ ತಾಯಿ ಮುನಿಗಳ ಶಾಪವನ್ನು ಹಿಂದಕ್ಕೆ ಪಡೆಯಲು ಆ ವಿಷ್ಣುವಿಗೂ ಸಾಧ್ಯವಿಲ್ಲ ಶಾಪ ಎಂದರೆ ಶಾಪ ಅದನ್ನು ಅನುಭವಿಸಲೇ ಬೇಕು ಹಾಗಾಗಿ ನೀನೆ ನಮ್ಮನ್ನು ಕರುಣಿಸಬೇಕು ಎಂದು ಹೇಳುತ್ತಾನೆ..
🍁 ಈ ಮಾತನ್ನು ಸುಮತಿಯು ಕೇಳುವುದಿಲ್ಲ
ನನ್ನ ಗಂಡನ ಪ್ರಾಣವನ್ನು ಉಳಿಸಲು ಸಾಧ್ಯವಾಗದ ನೀವು ದೇವತೆಗಳು ಹಾಗೂ 3 ಲೋಕಗಳು ಈ ಜಗತ್ತು ಇದ್ದರೇಷ್ಟು ಬಿಟ್ಟರೇಷ್ಟು ಎಂದು ಹೇಳುತ್ತಾಳೆ..
🍁 ಏನು ಮಾಡಲು ಸಾಧ್ಯವಾಗದ ದೇವತೆಗಳು ಬ್ರಹ್ಮದೇವನ ಬಳಿ ಹೋಗುತ್ತಾರೆ..
( ಪತಿವ್ರತೆಯರ ಶಾಪ ತುಂಬಾ ಶಕ್ತಿ ಶಾಲಿಯಾದದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ
ಪತಿವ್ರತೆಯರ ಶಾಪದಿಂದ ಲೋಕಗಳನ್ನು ಕಾಪಾಡುವ ಶಕ್ತಿ ಕೇವಲ ಮತ್ತೊಂದು ಪತಿವ್ರತೆಗೆ ಮಾತ್ರ ಸಾಧ್ಯ..
ಹಾಗಾಗಿ ನೀವೆಲ್ಲ ದೇವತೆಗಳು ಮಹಾಪತಿವ್ರತೆಯಾದ
ಭಗವಾನ್ ದತ್ತಾತ್ರೇಯ ತಾಯಿ ಅನಸೂಯ ದೇವಿ ಬಳಿಗೆ ಹೋಗಿ ಅವರೇ ನಿಮಗೆ ಸಹಾಯ ಮಾಡುತ್ತಾರೆಂದು ಬ್ರಹ್ಮದೇವ ಹೇಳುತ್ತಾರೆ..
🍁 ಎಲ್ಲ ದೇವತೆಗಳು ಅನಸೂಯ ದೇವಿ ಬಳಿಗೆ ಹೋಗುತ್ತಾರೆ ತಮ್ಮ ಕಷ್ಟ ಎಲ್ಲ ಹೇಳಿಕೊಳ್ಳುತ್ತಾರೆ ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಅನಸೂಯ ದೇವಿ ಅವರಿಗೆಲ್ಲ ಧೈರ್ಯ ಹೇಳುತ್ತಾಳೆ..
🍁 ನಂತರ ಅನಸೂಯ ದೇವಿ ಸುಮತಿಯ ಬಳಿಗೆ ಬರುತ್ತಾರೆ.. ಅಮ್ಮ ಸುಮತಿ ನಿನ್ನ ಕಷ್ಟ ನನಗೆ ಅರ್ಥವಾಯಿತು ಆದರೆ ನಿನ್ನ ಶಾಪದಿಂದ ಇಡಿ ಲೋಕವೇ ಕತ್ತಲಿನಲ್ಲಿ ಮುಳುಗಿದೆ.. ನಿನಗೆ ನಾನಿದ್ದೇನೆ ನನ್ನನ್ನು ನಂಬಿ
ನಿನ್ನ ಶಾಪವನ್ನು ಹಿಂದಕ್ಕೆ ಪಡೆದುಕೊಂಡು ಲೋಕಗಳಿಗೆ ಶಾಂತಿ ಅನುಗ್ರಹಿಸು ಎಂದು ಅನಸೂಯ ದೇವಿ
ಹೇಳುತ್ತಾರೆ..
🍁 ಅಮ್ಮ ಅನಸೂಯ ದೇವಿ ನೀವು ನನಗೆ ತಾಯಿ ಇದ್ದ ಹಾಗೆ ನನ್ನ ಸೌಭಾಗ್ಯವನ್ನು ಕಾಪಾಡುವ ಶಕ್ತಿ ನಿಮಗೆ ಮಾತ್ರ ಇದೆ ನಿಮ್ಮ ಮಾತನ್ನು ನಾನು ಕೇಳುತ್ತೇನೆ ನಾನು ಈಗಲೇ ನನ್ನ ಶಾಪವನ್ನು ಹಿಂದಕ್ಕೆ ಪಡೆಯುತ್ತೇನೆ ಎಂದಳು..
ಮರುಕ್ಷಣವೆ ಸೂರ್ಯೋದಯವಾಯಿತು..
( ಮಾಂಡವ್ಯ ಮುನಿಗಳ ಶಾಪದಂತೆ ಕೌಶಿಕನ ತಲೆ ಸಾವಿರ ಚುರುಗಳಾಗಿ ಕೌಶಿಕ ಸತ್ತು ಹೋದ..
🍁 ಮರುಕ್ಷಣವೆ ಅಲ್ಲಿ ತ್ರಿಮೂರ್ತಿಗಳು ಪ್ರತ್ಯಕ್ಷವಾದರೂ
ಸುಮತಿ ಹಾಗೂ ಅನಸೂಯ ನಿಮ್ಮಿಬ್ಬರಿಂದ ಇಂದು ಲೋಕಕ್ಕೆ ಶಾಂತಿ ಸಿಕ್ಕಿದೆ..ಅಮ್ಮ ಅನಸೂಯ ನೀನು ಸುಮತಿಗೆ ಕೊಟ್ಟ ಮಾತಿನ ಪ್ರಕಾರ ನಾನು ಕೌಶಿಕನಿಗೆ ಪ್ರಾಣ ನೀಡುತ್ತೇನೆ ಎಂದು ಬ್ರಹ್ಮ ದೇವರು ಕೌಶಿಕನಿಗೆ ಪ್ರಾಣ ಭಿಕ್ಷೆ ಕೊಟ್ಟರು..
🍁 ಕೌಶಿಕ ದುರ್ಬುದ್ದಿ ನೀಚ ಬ್ರಾಹ್ಮಣ ಆದರೂ ಕೂಡ ಅವನು ಸದಾ ನನ್ನ ನಾಮ ಸ್ಮರಣೆ ಮಾಡುತ್ತಿದ್ದ ಪೂರ್ವ ಜನ್ಮದ ಪಾಪಗಳಿಂದ ಅವನಿಗೆ ಕುಷ್ಟರೋಗ ಬಂತು ಈಗ ನಿನ್ನ ಕುಷ್ಟರೋಗವೆಲ್ಲ ಹೋಗಿ ಅರೋಗ್ಯ ಐಶ್ವರ್ಯ ಪ್ರಾಪ್ತಿ ಆಗಲಿ ಎಂದು ವಿಷ್ಣು ದೇವ ವರ ಕೊಟ್ಟರು..
ಕೂಡಲೇ ಕೌಶಿಕನ ಕುಷ್ಟರೋಗ ಹೋಗಿ ಅರೋಗ್ಯವಂತನಾದ..
🍁 ಈ ಕಲ್ಪಾoತರ ವರೆಗೂ ನೀವಿಬ್ಬರು ಚೀರಂಜೀವಿಗಳಾಗಿ ತಪೋಲೋಕದಲ್ಲಿ ಸುಖ ಶಾಂತಿಯಿಂದ ಕಾಲ ಕಳೆದು ನಂತರ ಕಲ್ಪಾoತರದಲ್ಲಿ ನೀವಿಬ್ಬರು ಶ್ರೀ ಹರಿಯ ಪಾದ ಸೇರಿ ಮೋಕ್ಷ ಪಡೆಯಿರಿ ಎಂದು " ಶಿವನು ವರ ಕೊಟ್ಟು..
ತ್ರಿಮೂರ್ತಿಗಳು ಮಾಯವಾಗುತ್ತಾರೆ..
🍁 ಹೀಗೆ ಮಹಾ ಪತಿವ್ರತೆ ಸುಮತಿಯು ತ್ರಿಮೂರ್ತಿಗಳನ್ನೇ ಮೆಚ್ಚಿಸಿ ತಾನು ಮೋಕ್ಷ ಪಡೆಯುವುದಲ್ಲದೆ ತನ್ನ ನೀಚ ಗಂಡನಿಗೂ ಕೂಡ ಮೋಕ್ಷ ಕೊಡಿಸುತ್ತಾಳೆ..