ಮೈಸೂರು ರಾಜ್ಯದ ಹೆಸರು ಬದಲಾಯಿಸಿ ಕರ್ನಾಟಕ ಮಾಡಿದ ಇತಿಹಾಸವೇನು?

SANTOSH KULKARNI
By -
0

 ಮೈಸೂರು ರಾಜ್ಯದ ಹೆಸರು ಬದಲಾಯಿಸಿ ಕರ್ನಾಟಕ ಮಾಡಲಾಯಿತು. ಇದರ ಹಿಂದಿರುವ ಇತಿಹಾಸವೆಂದರೆ :

‘ಕರ್ನಾಟಕ’ ಎಂಬ ಪದವು ಹಳೆ ಮೈಸೂರು ಪ್ರದೇಶವನ್ನು ಮಾತ್ರವಲ್ಲ, ಇದು ಇಡೀ ಕನ್ನಡ ಮಾತನಾಡುವ ಪ್ರದೇಶವನ್ನು ಸೂಚಿಸುತ್ತದೆ.

ನಮ್ಮ ರಾಜಮನೆತನಗಳಾದ ಚಾಲುಕ್ಯರು, ರಾಷ್ಟ್ರಕೂಟರು, ಯಾವಾಗಲೂ ತಮ್ಮನ್ನು ಕರ್ನಾಟಬಲ ಎಂದು ಕರೆದುಕೊಳ್ಳುತ್ತಿದ್ದರು, ಅಂದರೆ ಕರ್ನಾಟಕದ ಸೈನ್ಯ. ವಿಜಯನಗರ ಸಾಮ್ರಾಜ್ಯದ ಮೂಲ ಹೆಸರು ಕರ್ನಾಟ ಸಾಮ್ರಾಜ್ಯ ಎಂದು.

ರಾಜ್ಯ ಏಕೀಕರಣ ಚಳವಳಿಯ ಸಂದರ್ಭದಲ್ಲಿ, ಆಲೂರು ವೆಂಕಟರಾಯರು ಇದನ್ನು ಮುನ್ನಡೆಸಿದರು, ನಂತರ ಇಡೀ ಚಳುವಳಿಯ ವೇಗವನ್ನು ವರ್ಧಿಸಲಾಯಿತು. ಅಂತಿಮವಾಗಿ ಕನ್ನಡ ಮಾತನಾಡುವ ರಾಜ್ಯವನ್ನು ರಚಿಸಲಾಯಿತು.

ಚಳವಳಿಯ ಸಮಯದಲ್ಲಿ, ಕನ್ನಡಿಗರಲ್ಲಿ ಮರೆತುಹೋದ ಹೆಮ್ಮೆಯನ್ನು ಮತ್ತು ಆತ್ಮಗೌರವವನ್ನು ಮರಳಿ ತರಲು ಆಲೂರು ವೆಂಕಟರಾಯರು ಪುಸ್ತಕವೊಂದನ್ನು ಬರೆದಿದ್ದರು. ಆ ಪುಸ್ತಕಕ್ಕೆ ಕರ್ನಾಟಕ ಗಥ ವೈಭವ ಎಂದು ಹೆಸರಿಟ್ಟರು. ಹೆಸರನ್ನು ಗಮನಿಸಿ, ಕರ್ನಾಟಕ ಪದವನ್ನು ಉಲ್ಲೇಖಿಸಲಾಗಿದೆ.

ಇಡೀ ಪ್ರದೇಶವನ್ನು ಆ ಹೆಸರಿನಿಂದ ಕರೆಯುತ್ತಿದ್ದರೆಂದು ಅದು ಸಾಬೀತುಪಡಿಸುತ್ತದೆ ಮತ್ತು ಅದು ಹೊಸ ಹೆಸರಲ್ಲ.

ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕನ್ನಡ ಪ್ರದೇಶ ಮಾತ್ರವಲ್ಲ, ಮಹಾರಾಷ್ಟ್ರವನ್ನು ಕರ್ನಾಟಕ ಅಥವಾ ಕನ್ನಡ ಪ್ರದೇಶ ಎಂದು ಕರೆಯಲಾಗುತ್ತಿತ್ತು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಬಹುದು.

ಪ್ರಸಿದ್ಧ ಕೃತಿ, ‘ಕವಿರಾಜಮಾರ್ಗ’ ಕನ್ನಡ ಪ್ರದೇಶದ ಗಡಿಯನ್ನು ಉತ್ತರದಲ್ಲಿ ಗೋದಾವರಿ ಎಂದು ದಕ್ಷಿಣದಲ್ಲಿ ಕಾವೇರಿ ಎಂದು ಉಲ್ಲೇಖಿಸುತ್ತದೆ. ಇದರ ಅರ್ಥ ಇಂದಿನ ಮಹಾರಾಷ್ಟ್ರದ ನಾಸಿಕ್ ನಿಂದ ಕರ್ನಾಟಕದ ಮೈಸೂರು. ಇದು ೯ ನೇ ಶತಮಾನದ ಕಥೆ.

ಕವಿರಾಜಮಾರ್ಗದ ಪದ್ಯ ಇದು.

ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್

ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ

ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ

ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗ ಅಮೋಘವರ್ಷ ಇಲ್ಲಿ ಹೇಳುತ್ತಿರುವುದು "ಕನ್ನಡ ನಾಡು" ಕಾವೇರಿಯಿಂದ ಗೋದಾವರಿಯವರೆಗೆ ೯ ನೇ ಶತಮಾನದಲ್ಲಿ ವಿಸ್ತರಿಸಿತ್ತು ಅಂತ.

ಹಾಗಾಗಿ ಕರ್ನಾಟಕ ಎಂಬ ಪದವನ್ನು ಬಿಟ್ಟು ಬೇರೆಯಾವ ಹೆಸರುಗಳು ಚರ್ಚೆಗೆ ಬರಲಿಲ್ಲ. ಕರ್ನಾಟಕ ಒಂದೇ ಸೂಕ್ತವಾದ ಹೆಸರು.

Post a Comment

0Comments

Please Select Embedded Mode To show the Comment System.*