ಈ ಪ್ರಶ್ನೆಯ ಬಗೆಗಿನ ಕೆಲವು ವೈಜ್ಞಾನಿಕ ವಿಷಯಗಳು ಸ್ಪಷ್ಟವಾದರೆ ಪ್ರಶ್ನೆಗೆ ಉತ್ತರ ಸಿಗುತ್ತದೆ.
- ಬೆಳಕು ಕಣಗಳಿಂದ ಮಾಡಲ್ಪಟ್ಟಿದೆ ಅನ್ನುವುದು ಸರಿಯಲ್ಲ. ಬೆಳಕು ಒಂದು ಅಲೆ.
- ಬೆಳಕು ಗಾಜಿನ ಮೂಲಕ ಹಾದು ಹೋಗುತ್ತದೆ ಅನ್ನುವುದೂ ಸರಿಯಲ್ಲ. ಅದು ಬೆಳಕಿನ ಚಲನೆ.
- ನಮಗೆ ಘನವಸ್ತುವಿನಂತೆ ಕಾಣುವ ಯಾವುದೇ ವಸ್ತು ಕೂಡಾ ಪೂರ್ತಿ ಘನವಾದುದಲ್ಲ. ವಿಜ್ಞಾನದ ದೃಷ್ಟಿಯಿಂದ ಎಲ್ಲ ವಸ್ತುಗಳೂ ಕೂಡಾ ರಂಧ್ರಗಳಿಂದ (Pores) ಕೂಡಿದವೇ ಆಗಿವೆ.
- ವೈಜ್ಞಾನಿಕಚಾಗಿ ಇಡೀ ವಿಶ್ವದಲ್ಲಿ ಅಥವಾ ಸೌರಮಂಡಲದಲ್ಲಿ ಇರುವ ಎಲ್ಲ ವಸ್ತುವೂ ಸಜೀವವೇ ಆಗಿರುತ್ತವೆ. ಯಾವ ವಸ್ತುವೂ ನಿರ್ಜೀವವಲ್ಲ. ಎಲ್ಲಾ ವಸ್ತುಗಳೂ ಕೂಡಾ ಪರಮಾಣುವಿನಿಂದ ಮಾಡಲ್ಪಟ್ಟಿರುವುದು. ಪರಮಾಣುಗಳು ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಗಳೆಂಬ ಮೂರು ಕಣಗಳಿಂದ ಮಾಡಲ್ಪಟ್ಟಿವೆ.
- ಯಾವುದೇ ಒಂದು ನಿರ್ಜೀವ ವಸ್ತು ಎಂದು ಹೇಳುವ ವಸ್ತುವನ್ನು ಸಾವಿರಾರು ಪಟ್ಟು ದೊಡ್ಡದಾಗಿಸಿ ನೋಡಿದರೆ ನಮಗಲ್ಲಿ ಜೀವ ಕಳೆ ಕಾಣುತ್ತದೆ. ಪರಮಾಣುಗಳು , ಎಲೆಕ್ಟ್ರಾನ್ ಗಳ ಬಂಧ , ನ್ಯೂಕ್ಲಿಯಸ್‌ಗಳನ್ನು ಸುತ್ತುತ್ತಿರುವ ಎಲೆಕ್ಟ್ರಾನ್‌ಗಳನ್ನು ನಾವಲ್ಲಿ ನೋಡಬಹುದು.
- ಬೆಳಕು ಒಂದು ಶಕ್ತಿ. ಅದನ್ನೇ ಲೈಟ್ ಎನರ್ಜಿ ಅನ್ನುವುದು.
- ನಮ್ಮ ಕಣ್ಣಿಗೆ ಕಾಣದ ಬೆಳಕುಗಳೂ ಸಾಕಷ್ಟಿವೆ
ನಮಗೆ ವಸ್ತುಗಳು ಹೇಗೆ ಕಾಣುತ್ತವೆ? ವಸ್ತುಗಳಿಗೆ ಬಣ್ಣ ಹೇಗೆ ಬರುತ್ತದೆ?
ಈ ಬೆಳಕಿನ ಶಕ್ತಿಯು ಸತತವಾಗಿ ಚಲಿಸುತ್ತಲೇ ಇರುತ್ತದೆ. ಆ ಪಯಣ ಕೊನೆವೊಳ್ಳಲು ಅದು ಒಂದು ವಸ್ತುವಿನಿಂದ ಹೀರಲ್ಪಡಬೇಕು, ಇಲ್ಲವೇ ಆ ವಸ್ತು ಬೆಳಕನ್ನು ಪ್ರತಿಫಲಿಸಬೇಕು ಅಥವಾ ಬೆಳಕನ್ನು ಹೀರಿಕೊಂಡು ಹೊರಗೆ ಬಿಡಬೇಕು.
- ಯಾವುದೇ ಒಂದು ವಸ್ತುವು ಬೆಳಕನ್ನು ಪ್ರತಿಫಲಿಸಿದಾಗ ಮತ್ತು ಹೀರಿಕೊಂಡಾಗ ಮಾತ್ರ ನಮಗೆ ಆ ವಸ್ತುವು ಕಾಣುತ್ತವೆ. ಒಂದು ವಸ್ತುವು ಬೆಳಕನ್ನು ಹೀರಿಕೊಂಡು ಹೊರಗೆ ಬಿಟ್ಟರೆ ಆ ವಸ್ತುವು ನಮಗೆ ಕಾಣಿಸುವುದಿಲ್ಲ ಮತ್ತು ಬೆಳಕಿನ ಪಯಣವು ಮುಂದುವರಿಯುತ್ತದೆ.
ವಿವಿಧ ಗಾತ್ರದ ಅಲೆಗಳಿಂದ ಮಾಡಲ್ಪಟ್ಟಿರುವ ಬೆಳಕಿನ ಕೆಲವೇ ತರಂಗಾಂತರಗಳನ್ನು ಮಾತ್ರ ನಾವು ಗುರುತಿಸಬಲ್ಲೆವು. ಅದನ್ನೇ ವಿಸಿಬಲ್ ಸ್ಪೆಕ್ಟ್ರಮ್ ಎನ್ನುತ್ತಾರೆ. ಈ ವಿಸಿಬಲ್ ಸ್ಪೆಕ್ಟ್ರಮ್ ನಲ್ಲಿರುವ ಬೇರೆ ಬೇರೆ ತರಂಗಾಂತರಗಳು ಬೇರೆ ಬೇರೆ ಬಣ್ಣಗಳನ್ನು ಪ್ರತಿನಿಧಿಸುತ್ತವೆ.
- ಅವುಗಳಲ್ಲಿ ನಮಗೆ ಕಾಣಬಹುದಾದ ಬೆಳಕು ಗಾಜಿನ ಮೇಲೆ ಬಿದ್ದಾಗ ಗಾಜು ಅದನ್ನು ಪ್ರತಿಫಲಿಸದೆ ಅಥವಾ ಹೀರಿಕೊಳ್ಳದೆ ಅದನ್ನು ತನ್ನೊಳಗಿನಿಂದ ಹೊರಗೆ ಬಿಡುತ್ತದೆ. ಅದಕ್ಕಾಗಿ ನಮಗೆ ಕಾಣಿಸಬಹುದಾದ ಬೆಳಕು ಗಾಜಿನ ಮೇಲೆ ಬಿದ್ದಾಗ ಆ ವಸ್ತು ಕಾಣಿಸುವುದಿಲ್ಲ. ಅದೇ ಪಾರದರ್ಶಕ ವಸ್ತು.
- ಅದೇ ಬೆಳಕು ಮರದ ಬಾಗಿಲು ಅಥವಾ ಮನೆಯ ಗೋಡೆಯ ಮೇಲೆ ಬಿದ್ದಾಗ ಆ ವಸ್ತುಗಳು ಕೆಲವು ತರಂಗಾಂತರಗಳ ಬೆಳಕನ್ನು ಹೀರಿಕೊಳ್ಳುತ್ತವೆ. ಅವು ಯಾವ ತರಂಗಾಂತರಗಳನ್ನು ಹೀರಿಕೊಳ್ಳುತ್ತವೆಯೋ ಅದನ್ನು ಪ್ರತಿನಿಧಿಸುವ ತರಂಗಾಂತರದ ಬಣ್ಣದಲ್ಲಿ ಆ ವಸ್ತು ನಮಗೆ ಕಾಣುತ್ತದೆ. ಅವನ್ನು ಅಪಾರದರ್ಶಕ ಅನ್ನುತ್ತೇವೆ.
- ಕೆಲವು ಗಾಜುಗಳು ತನ್ನ ಮೇಲೆ ಬಿದ್ದ ಕೆಲವು ತರಂಗಾಂತರಗಳನ್ನು ಹೀರಿಕೊಳ್ಳುತ್ತವೆ ಮತ್ತು ಕೆಲವನ್ನು ಹೊರಗೆ ಬಿಡುತ್ತವೆ. ಅವನ್ನು ಅರೆ ಪಾರದರ್ಶಕ ಎನ್ನುತ್ತೇವೆ.
ಎಲ್ಲ ಅಪಾರದರ್ಶಕ ವಸ್ತುಗಳು ಬೆಳಕನ್ನು ಹೀರಿಕೊಳ್ಳುತ್ತಬೆ. ಕನ್ನಡಿಯಂತಹ ಹೊಳಪುಳ್ಳ ವಸ್ತುಗಳು ಬೆಳಕನ್ನು ಪ್ರತಿಫಲಿಸುತ್ತವೆ. ಗಾಜಿನಂತಹ ಪಾರದರ್ಶಕ ವಸ್ತುಗಳು ಬೆಳಕನ್ನು ಹೀರಿಕೊಂಡು ಹೊರಗೆ ಬಿಡುತ್ತವೆ. ಅದನ್ನೇ ನಾವು ಹಾದು ಹೋಗುವುದು ಅನ್ನುತ್ತೇವೆ. ಆದರೆ ಅದು ಹಾದುಹೋಗುವುದಲ್ಲ , ಅದು ಚಲಿಸುವುದು.
ಅದು ಹೇಗೆ ?
ಪೋಟಾನ್ ಎನ್ನುವ ಕಣಗಳಿಂದ ಬೆಳಕು ಮಾಡಲ್ಪಟ್ಟಿದೆ. ಅದರಲ್ಲಿರುವ ವಿದ್ಯುತ್‌ಕಾಂತೀಯ ಬಂಧವು ಒಂದು ನಿರ್ಧಿಷ್ಟ ಪ್ರಮಾಣದ ಶಕ್ತಿಯನ್ನು ಹೊಂದಿವೆ.
ಪೋಟಾನ್‌ಗಳಿಂದ ಮಾಡಲ್ಪಟ್ಟರುವ ಬೆಳಕಿನ ಶಕ್ತಿಯು ಯಾವುದೇ ಒಂದು ವಸ್ತುವಿಗೆ ತಾಗಿದಾಗ ಆ ವಸ್ತುವಿನಲ್ಲಿರುವ ಎಲೆಕ್ರಾನ್‌ಗಳೊಂದಿಗೆ ಸಂವಹನ ನಡೆಸುತ್ತದೆ ಅಥವಾ ಅಲ್ಲೊಂದು ಸಮರ ನಡೆಯುತ್ತದೆ.
- ಆ ವಸ್ತುವಿನಲ್ಲಿನ ಎಲೆಕ್ಟ್ರಾನ್‌ಗಳನ್ನು ಪ್ರಚೋದಿಸಲು ಪೋಟಾನ್ ಕಣಗಳು ಶಕ್ತವಾದರೆ ಆ ವಸ್ತುವಿನ ಎಲೆಕ್ಟ್ರಾನ್‌ಗಳಲ್ಲಿ ಪೋಟಾನ್ ಕಣಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಹಾಗೂ ಆ ವಸ್ತುವಿನಲ್ಲಿ ವಿಲೀನಗೊಳ್ಳುತ್ತವೆ . ಆಗ ನಮಗೆ ಆ ವಸ್ತುವು ಗೋಚರಿಸುತ್ತದೆ. ಅದು ಅಪಾರದರ್ಶಕ ವಸ್ತು.
- ಪೋಟಾನ್ ಕಣಗಳು ಕೆಲವು ವಸ್ತುಗಳ ಮೇಲೆ ಬಿದ್ದಾಗ ಕೆಲವು ಪೋಟಾನ್ ಕಣಗಳು ಆ ವಸ್ತುವಿನ ಎಲೆಕ್ಟ್ರಾನ್‌ಗಳನ್ನು ಪ್ರಚೋದಿಸಿ ತಮ್ಮ ಶಕ್ತಿಯನ್ನು ಕಳೆದುಕೊಂಡು ಆ ವಸ್ತುವಿನಲ್ಲಿ ವಿಲೀನವಾಗುತ್ತವೆ ಮತ್ತು ಸಮನಾದ ಶಕ್ತಿಯನ್ನು ಹೊಂದಿದ ಕೆಲವು ಪೋಟಾನ್ ಕಣಗಳು ಆ ವಸ್ತುವಿನಿಂದ ಚಿಮ್ಮುತ್ತವೆ. ಅದನ್ನು ಹೊಳೆಯುವ ವಸ್ತುಗಳು ಅನ್ನುತ್ತೇವೆ.
- ಇನ್ನು , ಒಂದು ವಸ್ತುವಿನ ಮೇಲೆ ಬಿದ್ದ ಪೋಟಾನ್ ಕಣಗಳಲ್ಲಿ ಕೆಲವು ಪೋಟಾನ್ ಕಣಗಳು ಆ ವಸ್ತುವಿನಲ್ಲಿ ವಿಲೀನವಾಗಿ ಇನ್ನು ಕೆಲವು ಆ ವಸ್ತುವಿನಿಂದ ಆಚೆ ಬರುತ್ತವೆ. ಅದು ಅರೆ ಪಾರದರ್ಶಕ ವಸ್ತು.
- ಒಂದುವೇಳೆ ಪೋಟಾನ್ ಕಣಗಳು ಆ ವಸ್ತುವಿನಲ್ಲಿರುವ ಎಲೆಕ್ಟ್ರಾನ್‌ಗಳನ್ನು ಪ್ರಚೋದಿಸಲು ಶಕ್ತವಾಗದಿದ್ದರೆ ಅಲ್ಲಿ ಯಾವುದೇ ಸಂವಹನ ಪ್ರಕ್ರಿಯೆ ನಡೆಯುವುದಿಲ್ಲ ಮತ್ತು ಪೋಟಾನ್ ಕಣಗಳು ಅಂದರೆ ಬೆಳಕಿನ ತರಂಗಗಳು ಅದೇ ಶಕ್ತಿಯಿಂದ ಆ ವಸ್ತವಿನಿಂದ ಆಚೆ ಬರುತ್ತವೆ. ಆಗ ಆ ವಸ್ತುವು ನಮಗೆ ಕಾಣುವುದಿಲ್ಲ. ಅದೇ ಪಾರದರ್ಶಕ ವಸ್ತು.
ಅದನ್ನೇ ನಾವು ಗಾಜಿನ ಮೂಲಕ ಬೆಳಕು ಚಲಿಸುತ್ತದೆ ಅನ್ನುವುದು.