Tuesday, January 28, 2025

ಗೆಣಸಿನ ಉಪಯೋಗ ಏನು? ಇದು ಆರೋಗ್ಯಕ್ಕೆ ಒಳ್ಳೆಯದೇ?

 

(ಗೆಣಸಿನ ಹೂ)

ಗೆಣಸು ಅತ್ಯಂತ ಆರೋಗ್ಯಕರ ತರಕಾರಿಗಳಲ್ಲಿ ಒಂದು.

  • ಗೆಣಸಿನಲ್ಲಿ ಬಹಳಷ್ಟು ವಿಧ ಗಳಿವೆಯಾದರೂ ನಾವು ಹೆಚ್ಚಾಗಿ ಬಳಸುವುದು ಸಿಹಿ ಗೆಣಸು(Sweet potato) ಮತ್ತು ಮರ ಗೆಣಸು (Tapioca).
  • ಈ ಎರಡರದ್ದೂ ಆಕಾರ, ಬಣ್ಣ ಮತ್ತು ರುಚಿ ಜೊತೆಗೆ ಇವುಗಳಲ್ಲಿನ ಪೌಷ್ಟಿಕಾಂಶಗಳು ಮತ್ತು ಇವುಗಳ ಉಪಯೋಗ ಕೂಡಾ ಬೇರೇನೇ.

ಇವುಗಳ ಬಗ್ಗೆ ಚಿಕ್ಕ ಮಾಹಿತಿ.

೧) ಮರಗೆಣಸು (Tapioca).

  • ಇದು ಶರ್ಕರ ಪಿಷ್ಟಗಳನ್ನ ಹೆಚ್ಚಾಗಿ ಹೊಂದಿದೆ.
  • ಅಕ್ಕಿ ಮತ್ತು ಮೆಕ್ಕೆ ಜೋಳಗಳಂತೆ ಇದು ಕೂಡಾ ಅತ್ಯಂತ ಹೆಚ್ಚು ಕಾರ್ಬೊಹೈಡ್ರೇಟ್ ಹೊಂದಿದೆ.
  • ಕಾರ್ಬೋಹೈಡ್ರೇಟ್ ಬಿಟ್ಟರೆ ಬೇರೆ ಜೀವಸತ್ವ ಮತ್ತು ಪ್ರೋಟೀನ್ ಅಂಶಗಳು ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತವೆ.
  • ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಂದಿಗೂ ಮರಗೆಣಸು ಪ್ರಮುಖ ಆಹಾರವಾಗಿ ಬಳಸ್ಪಡುತ್ತಿದೆ. ಐವತ್ತು ಕೋಟಿ ಜನರ ಹೊಟ್ಟೆಗೆ ಹಿಟ್ಟಾಗುತ್ತಿದೆ.
  • ನೈಜೀರಿಯಾದಲ್ಲಿ ಮತ್ತು ಬ್ರೆಜಿಲ್ ಗಳಲ್ಲಿ ಇದರ ಉತ್ಪಾದನೆ ಹೆಚ್ಚು.
  • ಥೈಲ್ಯಾಂಡ್ ನಿಂದ ಅತಿ ಹೆಚ್ಚು ಒಣಗಿದ ಮರಗೆಣಸು ರಫ್ತಾಗುತ್ತದೆ.
  • ನಮ್ಮ ದೇಶದಲ್ಲಿ ಇದನ್ನ ಹೆಚ್ವು ಉಪಯೋಗಿಸುವ ರಾಜ್ಯ ಕೇರಳ.
  • ಇದರ ರುಚಿ ಸ್ವಲ್ಪ ಕಹಿ ಮಿಶ್ರಿತ ಸಿಹಿಯಾಗಿರುವುದರಿಂದ ಇದು ತರಕಾರಿಯ ಚೀಲವನ್ನ ಸೇರುವುದೇ ಇಲ್ಲ.
  • ಇದನ್ನ ನಾವು ಹೆಚ್ಚಾಗಿ ಚಿಪ್ಸ್ ಮತ್ತು ಹೋಳಿಗೆ ಗಳಂತಹ ತಿಂಡಿಗಳ ರೂಪದಲ್ಲಿ ಉಪಯೋಗಿಸುತ್ತೇವೆ.
  • ಇದರ ಪುಡಿಯನ್ನ ಸೂಪ್, ಸಾಂಬಾರ್, ಕರಿಗಳನ್ನ ದಪ್ಪವಾಗಿಸಲು ಉಪಯೋಗಿಸುತ್ತೇವೆ.

೨) ಸಿಹಿ ಗೆಣಸು(Sweet potato)

  • ಸಿಹಿ ಗೆಣಸು ತಿನ್ನಲು ರುಚಿಕರ ಮತ್ತು ಪುಷ್ಟಿದಾಯಕವಾದ ಆಹಾರವಾಗಿದೆ. ಇದನ್ನ ತರಕಾರಿಯಾಗಿ ಕೂಡಾ ಉಪಯೋಗಿಸುತ್ತೇವೆ.

ಇದರಿಂದ ಮಾಡುವ ಕೆಲವು ಖಾದ್ಯಗಳು.

  • ಸಿಹಿ ಗೆಣಸಿನ ಹೋಳಿಗೆ
  • ಸಿಹಿ ಗೆಣಸಿನ ಚಿಪ್ಸ್
  • ಸಿಹಿ ಗೆಣಸಿನ ಪರೋಟ
  • ಸಿಹಿ ಗೆಣಸಿನ ಖಾರದ ಪಲ್ಯ.
  • ಸಿಹಿ ಗೆಣಸಿನ ಬಜ್ಜಿ
  • ಸಿಹಿ ಗೆಣಸನ್ನ ಕೆಂಡದಲ್ಲಿ ಸುಟ್ಟು ಅಥವಾ ನೀರಿನಲ್ಲಿ ಬೇಯಿಸಿ ಹಾಗೇ ತಿನ್ನಬಹುದು.

ಇದರ ಕೆಲವು ಉಪಯೋಗಗಳು.

  • ಇದು ಸಾಕಷ್ಟು ಪ್ರಮಾಣದ ವಿಟಮಿನ್ ಗಳು, ಕಬ್ಬಿಣಸೋಡಿಯಂ, ಕ್ಯಾಲ್ಸಿಯಂ, ಝಿಂಕ್, ಮತ್ತು ಮೆಗ್ನಿಶಿಯಂ ಗಳಂತಹ ಹಲವಾರು ಪೋಷಕಾಂಶಗಳನ್ನ ಒದಗಿಸುತ್ತದೆ. ಇದು ಉತ್ತಮವಾದ ನಾರಿನಂಶವನ್ನ ಕೂಡಾ ಹೊಂದಿದೆ.
  • ಇದರಲ್ಲಿನ ನೈಸರ್ಗಿಕ ಸಿಹಿಯು ದೇಹದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ.
  • ಹೆಚ್ಚು ಫೈಬರ್ ಮತ್ತು ಪೊಟ್ಯಾಸಿಯಮ್‌ ಇರುವುದರಿಂದ ಹೃದಯಕ್ಕೂ ಪ್ರಿಯ, ಉದರಕ್ಕೂ ಪ್ರಿಯ.
  • ನೆಗಡಿ ಮತ್ತು ಅಸ್ತಮಾಗೆ ಮದ್ದೂ ಹೌದು.
  • ಇದರಲ್ಲಿನ ಮ್ಯಾಂಗನೀಸ್, ಫೋಲಿಕ್ ಆಸಿಡ್ ಮತ್ತು ಕಬ್ಬಿಣಗಳು ಮಹಿಳೆಯರಲ್ಲಿ ಕಾಡು ಬಹಳಷ್ಟು ಸಮಸ್ಯೆಗೆ ರಾಮಬಾಣವಾಬಲ್ಲದು.
  • ಇದರಲ್ಲಿನ ಪ್ರೋಟೀನ್ ದೇಹದ ತೂಕವನ್ನ ಆರೋಗ್ಯಕರವಾಗಿ ಹೆಚ್ಚುಸಬಲ್ಲದು.
  • ಇದರಲ್ಲಿ ಹೆಚ್ಚಿನ ಪ್ರಮಾಣದ ಸಿ ವಿಟಾಮಿನ್ ಇರುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಕಣ್ಣಿಗೆ ಕೂಡಾ ಒಳ್ಳೆಯದು.

ಇವು ಗೆಣಸಿನ ಬಗೆಗಿನ ಕೆಲವು ಮಾಹಿತಿಗಳು.