ರಾಮನಾಮ ಪಾಯಸಕ್ಕೆ
ಕೃಷ್ಣ ನಾಮ ಸಕ್ಕರೆವಿಠಲನಾಮ ತುಪ್ಪವ ಬೆರೆಸಿ ||1||
ಬಾಯಿ ಚಪ್ಪರಿಸಿರೋ
ಒಮ್ಮನ ಗೋಧಿಯ ತಂದು ||2||
ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನ ಸಜ್ಜಿಗೆ ತೆಗೆದು
ಸಣ್ಣ ಸೇವಗೆ ಹೊಸೆದು
ಹೃದಯವೆಂಬೊ ಪಾತ್ರೆಯೊಳಗೆ ||3||
ಭಾವವೆಂಬೊ ಎಸರು ಇಟ್ಟು
ಬುದ್ಧಿಯಿಂದ ಪಕ್ವವ ಮಾಡಿ
ಹರಿವಾಣದೊಳಗೆ ನೀಡಿ
ಆನಂದ ಆನಂದವೆಂಬೊ||4||
ತೇಗು ಬಂದ ಪರಿಯಲಿ
ಆನಂದಮೂರುತಿ ನಮ್ಮ
ಪುರಂದರವಿಠಲನ ನೆನೆಯಿರೊ