ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ
ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ
ಕಂಡಿದ್ದು ಸುಳ್ಳು ... ಕಾಣದ್ದು ಸುಳ್ಳು
ನಿಜ ಹೇಳಲು ಬಾಯಿಲ್ಲ. ನನಗಿಲ್ಲಿ.ಈ ಈ ಈ
ದಿಕ್ಕಿಲ್ಲ ದೆಸೆಯಿಲ್ಲ ಅಳುವ
ಕಣ್ಣಿಗೆ ರೆಪ್ಪೆ ಗಳಿಲ್ಲ
ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ
ರಾತ್ರಿಗಳೆಲ್ಲ ಸುಖದ ಕನಸುಗಳಾಗಿ
ಮತ್ತೆ ಹಗಲು ಗಳೆಲ್ಲ ದುಃಖ ದ ನೆನಪುಗಳಾಗಿ
ಪಾಪದ ಎತ್ತಿನ ಬಂ.ಡಿಯ ಚಕ್ಕಡಿಯಾಗಿ
ಈ ಕಾಲವೆಂಬ ಕೈಯಲಿ ತಕ್ಕಡಿಯಾಗಿ
ಬಾಳೋದೆ.ಏ ಏ ಏ.
ಇಲ್ಲಿ ದಿನದಿನಕು ಕಥೆಗಳಾಗಿ ಕಾಣುತ್ತಮ್ಮ
ಮನುಷ್ಯನಾಸೆಗಳೆ ವ್ಯಥೆಗಳಾಗಿ ಉಳಿಯುತ್ತಮ್ಮ
ವಿಧಿಯಾ..ಟ ..... ಹುಡುಗಾಟ
ಹೆತ್ತವನೆದೆಯಲಿ ಬೆಂಕಿಯ ಊಟ
ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ
ಅರ್ಥವಿಲ್ಲದಿರುವ ಲೋಕ ನಮ್ಮದು
ಇಲ್ಲಿ ಸ್ವಾರ್ಥವೊಂದೆ ಬಡವನ ಆಳುವಂತದು
ಎಲ್ಲ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು
ಬಂದ ಹಾಗೆ ಪಡೆಯೋದೆ ಆ ದೇವರು ಕೊಟ್ಟದ್ದು
ನಂಬಿಕೆಯೆ ಏ ಏ ಏ ಏ ಏ
ಇಂತ ಊರು ಬಿಟ್ಟವರ ಕಾಯೋ ಊರುಗೋಲು
ಆದರೆ ಮೂರು ಬಿಟ್ಟವರ ಮುಂದೆ ಬುಡಮೇಲು
ಅದು ಯಾರೋ ಬರೆದೋರು
ಗಾಯದ ಮೇಲೆ ಬರೆ ಎಳೆದೋರು
ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ
ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ
ಕಂಡಿದ್ದು ಸುಳ್ಳು ... ಕಾಣದ್ದು ಸುಳ್ಳು
ನಿಜ ಹೇಳಲು ಬಾಯಿಲ್ಲ. ನನಗಿಲ್ಲಿ.....ಈ
ದಿಕ್ಕಿಲ್ಲ ದೆಸೆಯಿಲ್ಲ ಅಳುವ ಕಣ್ಣಿಗೆ
ರೆಪ್ಪೆ ಗಳಿಲ್ಲ
ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ