ಘಟ್ಟದ ಅಂಚಿದ, ಎಂಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾಡಿನಾಡಿಯೇ.ಘಾಟೀಯ ಇಳಿದು, ತೆಂಕಣ ಬಂದು,
ಅವಳಾ ನೋಡಿ ನಿಂತನೂ.
ಕಡಲ ಬೀಸೋ ಗಾಳಿಗವಳು ಮಾತನಾಡಲು
ಕೇಳದ ಪಿಸು ಮಾತಿಗಿವನು ಮರುಳನಾದನು.
ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಮನದ ಹಿಂದಾರಿಲಿ ಬರದೇ ಕವಲು,
ಆ ಕವಲು ದಾರಿಗೆ ಕಾವಲಾ..??
ಮರುಭೂಮಿಯಲಿ ಹೆಜ್ಜೆಯ ಗುರುತು,
ಆ ಗುರುತೇ ನಿನ್ನಯ ನೆರಳಾ?
ಮನಸಾ ಬಿಚ್ಚಿಟ್ಟವನಾ,
ಬರಯಲು ಮೌನದ ಕವನ,
ಪದಗಳೇ ಇಲ್ಲದ ಸಾಲ,
ಇಳಿಸಲು ಹಾಳೆಯ ಮೇಳ.
ಸೇರಲು ರಂಗು ಮಾಸಿತು ಶಾಯಿಯ ಗೀಚಲು...
ಸಮಯ, ಸಾಗುವ ಗತಿಯ ,ತಡೆಯುವ ಪರಿಯ ನಾ ಕಾಣೆನು..
ಕಳೆವ ಸನಿಹದ ಕ್ಷಣವ, ಮೌನದ ಕ್ಷಣವ ಕೂಡಿಡುವೆನು..
ಶ್ರಾವಣ ಕಳೆದು, ಮರಳನು ಅಲೆದು, ದೂರವ ಸರಿದು ಕೂತನು,
ಕಡಲ ಬೀಸೋ ಗಾಳಿಗವಳು ಮಾತನಾಡಲು,
ಕೇಳದ ಪಿಸಿ ಮಾತಿಗಿವನು ಮರುಳನಾದನು..
ನಗ್-ನಗ್ತಾ ನನ್ನ ಮನಸಾ ಎತ್ಕಂಡು ಓಯ್ತಾವ್ಳಲ್ಲೋ.
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಅಯ್ಯಯ್ಯಯ್ಯೋ ಹೋ.. ನಗ್ತವ್ಳಾ?????
ಘಟ್ಟದ ಅಂಚಿದ, ಎಂಥೆಂಕಾಯಿ ಬತ್ತು ತೂಯೆ,
ಅಲೆನ ತೆಳ್ಕೆದ ಪೊರ್ಲೀಗೆ ತಾಡಿನಾಡಿಯೇ.
No comments:
Post a Comment