ಭಗವಂತನ ದಶಾವತಾರಗಳು

SANTOSH KULKARNI
By -
0

ಅಚಿಂತ್ಯಾತ್ಮಕವಾದ ಭಗವಂತ ವೈಕುಂಠದಲ್ಲಿರುತ್ತಾನಾದರೂ ಭೂಲೋಕಕ್ಕೆ ಭಕ್ತಾದಿಗಳ ಅನುಗ್ರಹಕ್ಕಾಗಿ ಅವತರಿಸಿ ಬರುತ್ತಾನೆ. ಧರ್ಮಕ್ಕೆ ಹಾನಿ ಸಂಭವಿಸಿದಾಗ, ಅಧರ್ಮವನ್ನು ಅಳಿಸಿ ಧರ್ಮವನ್ನು ಪುನರುಜ್ಜೀವನಗೊಳಿಸಲು ಆತ ಅವತರಿಸುತ್ತಾನೆ (ಸಾಧುಗಳ ಪರಿತ್ರಾಣಕ್ಕಾಗಿ, ದುಷ್ಕರ್ಮಗಳ ವಿನಾಶಕ್ಕಾಗಿ, ಧರ್ಮ ಸಂಸ್ಥಾಪನಾರ್ಥ ವಾಗಿ ಯುಗಯುಗದಲ್ಲೂ ಹುಟ್ಟಿಬರುತ್ತಾನೆ...


#ಮತ್ಸ್ಯಾವತಾರ

ಭಗವಂತನ ಅವತಾರಗಳಲ್ಲಿ ಮತ್ಸ್ಯಾವತಾರವು ಮೊದಲನೆಯದು. ವಿಷ್ಣು ಯೋಗನಿದ್ರೆಯಲ್ಲಿರುವಾಗ ವಿಷ್ಣುವಿನ ಕರ್ಣಗಳಿಂದ ಅಸುರರು ಹೊರಗೆ ಬಂದು ಬ್ರಹ್ಮ ನಿಂದ ವೇದಗಳನ್ನು ಅಪಹರಿಸಿ ಸಾಗರ ತಳದಲ್ಲಿ ಅಡಗಿಸಿದ ಇದನ್ನು ಅರಿತ ಸ್ಥಿತಿಕಾರಕ ವಿಷ್ಣು ಅಸುರನನ್ನು ಸಂಹರಿಸಿ ವೇದಗಳನ್ನು ಪುನರುತ್ಥಾನಗೊಳಿಸುವ ಯೋಜನೆಯಲ್ಲಿದ್ದ.
ಕೃತಯುಗದಲ್ಲಿ ಸತ್ಯವ್ರತ ಮನು ಚಕ್ರವರ್ತಿ ಮಹಾ ದೈವಭಕ್ತ. ದೊಡ್ಡ ಆಪತ್ತು ಭೂಮಿಗೆ ಕಾದಿದೆ ಎಂಬ ಅನೇಕ ಮುನ್ಸೂಚನೆಗಳು ಅವನ ಮನವನ್ನು ತಲ್ಲಣಗೊಳಿಸಿತ್ತು. ತನ್ನನ್ನು ತನ್ನ ರಾಜ್ಯವನ್ನು ಪ್ರಜೆ ಪಶುಪಕ್ಷಿಗಳನ್ನು ರಕ್ಷಿಸುವಂತೆ ಅವನು ಮೌನ ಪ್ರಾರ್ಥನೆ ಸಲ್ಲಿಸುತ್ತಿದ್ದ.

ತಾನು ನಂಬಿದ ದೈವ ತನ್ನನ್ನು ಖಂಡಿತವಾಗಿಯೂ ಕಾಪಾಡುತ್ತದೆಂಬ ಅಚಲ ವಿಶ್ವಾಸ ಅವನದ್ದು.
ಅವನು ಒಮ್ಮೆ ಸ್ನಾನ ಮಾಡಲು ನದಿಗೆ ಹೋದಾಗ ಬೊಗಸೆಯಲ್ಲಿ ಚಿಕ್ಕ ಮೀನೊಂದು ಕಾಣುತ್ತದೆ. ಅದನ್ನು ಮತ್ತೆ ನದಿಗೆ ಚೆಲ್ಲಲು ಹೋದಾಗ ಭಯಭೀತವಾದ ಧ್ವನಿಯಲ್ಲಿ ಅದು ತನ್ನನ್ನು ನದಿಯಲ್ಲಿರುವ ಕ್ರೂರ ಮೀನು ಮೊಸಳೆಗಳಿಂದ ರಕ್ಷಿಸುವಂತೆ ಮಾತನಾಡುತ್ತದೆ. ಅದು ಮಾತನಾಡಿದ್ದು ಕಂಡು ಚಕಿತನಾದ ರಾಜ ಅದನ್ನು ತನ್ನ ಕಮಂಡಲಿನಲ್ಲಿ ಹಾಕಿ ಮನೆಗೆ ತಂದ. ಅಷ್ಟರಲ್ಲಾಗಲೇ ಅದು ಕಮಂಡಲಿನಷ್ಟಾಗಿತ್ತು. ಆಶ್ಚರ್ಯಗೊಂಡ ರಾಜ ಅದನ್ನು ಹರಿವಾಣಕ್ಕೆ ಹಾಕಿದ. ಅದೂ ತುಂಬಿತು. ಹೀಗೆ ಕೆರೆ ಸರೋವರ ಕೊನೆಗೆ ಸಾಗರಕ್ಕೆ ಹಾಕಿದ. ಸಾಗರದಲ್ಲಿ ಬಿದ್ದ ದೊಡ್ಡ ಮೀನನ್ನು ಕಂಡು ರಾಜ ದಿಗ್ಭ್ರಾಂತನಾಗಿ ನಿಂತ.

ಅವನಿಗೇನೂ ಸಂಶಯ ಉಳಿಯಲಿಲ್ಲ. ಈ ಮೀನು ನಿಜಕ್ಕೂ ಶ್ರೀಹರಿಯ ಅವತಾರವೇ ಆಗಿದೆ ಎಂಬುದು ಅವನ ಅಚಲ ನಂಬಿಕೆ. ಅವನ ನಂಬಿಕೆಗೆ ಪುಷ್ಟಿಯಾಗಿ ರಾಜನೆದುರು ಬಂದ ಆ ಹೊಳೆಯುವ ಚಿನ್ನದ ಮೆರುಗಿನ, ಬೆನ್ನ ಮೇಲೆ ಕೊಂಬಿರುವ ಮೀನು ರಾಜನನ್ನು ಉದ್ದೇಶಿಸಿ, 'ರಾಜನೇ, ಅನತಿ ಸಮಯದಲ್ಲಿ ಯುಗಾಂತ್ಯವಾಗಲಿದೆ. ಭೂಮಿಗೆ ಅಪಾಯ ಕಾದಿದೆ. ಪ್ರಳಯ ಕಾಲದಂತೆ ಭೀಕರವಾದ ಮಳೆ ಬಂದು ಜಗತ್ತನ್ನು ಮುಳುಗಿಸಲಿದೆ. ನೀನು ದೊಡ್ಡದೊಂದು ಹಡಗನ್ನು ಕಟ್ಟಿ ಅದರೊಳಗೆ ನಿನ್ನ ಪ್ರಜೆಗಳನ್ನು ಎಲ್ಲ ಪ್ರಭೇದಗಳ ಪಶುಪಕ್ಷಿಗಳನ್ನು ಸಸ್ಯಗಳನ್ನು ಬೀಜಗಳನ್ನು ತುಂಬಿ ಸಿದ್ಧನಾಗಿರು. ಆಗ ಆ ಜಲದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ನನ್ನ ಕೊಂಬಿಗೆ ವಾಸುಕಿಯನ್ನು ಕಟ್ಟು. ಆ ಮಹಾಮಳೆಯಿಂದ ತುಂಬಿದ ಸಾಗರದ ಪ್ರವಾಹದಿಂದ ನಿನ್ನ ಹಡಗನ್ನು ನಾನು ಸುರಕ್ಷಿತವಾಗಿ ದಡ ತಲುಪಿಸುತ್ತೇನೆ' ಅಂತ ಹೇಳಿ ಅಂತರ್ಧಾನವಾಯಿತು. ಹಾಗೇ ಮಾಯವಾದ ಮೀನು ರೂಪದ ವಿಷ್ಣು ಸಾಗರದಡಿಯಲ್ಲಿ ಮುಳುಗಿ ವೇದಗಳನ್ನು ಬಚ್ಚಿಟ್ಟುಕೊಂಡಿದ್ದ ಹಯಗ್ರೀವ ಅಸುರನನ್ನು ಯುದ್ಧದಲ್ಲಿ ಸಂಹರಿಸಿ ವೇದಗಳನ್ನು ಮತ್ತೆ ಬ್ರಹ್ಮದೇವರಲ್ಲಿ ಇರಿಸಿದ.

ಈ ಮೊದಲು ಮನುವುಗೆ ಅದು ಹೇಳಿದಂತೆಯೇ ಮಳೆ ಸುರಿದು ಇಳೆ ತುಂಬಿತು. ಅಭಯವಿತ್ತಂತೆ ಬಂದ ಮೀನಿನ ಕೊಂಬಿಗೆ ವಾಸುಕಿಯನ್ನು ಕಟ್ಟಿದ ರಾಜ. ಪ್ರಕ್ಷ ುಬ್ಧ ಸಾಗರದಲ್ಲಿ ಹಡಗನ್ನು ತೇಲಿಸಿಕೊಂಡು ಸುತ್ತಾಡಿತು. ಆ ಸಮಯದಲ್ಲಿ ಮನುವಿಗೆ ವೇದಗಳನ್ನು ಬೋಧಿಧಿಸಿತು. ಕೊನೆಗೆ ಮನುವಿನ ಹಡಗನ್ನು ಹಿಮವತ್‌ ಪ್ರಾಂತ್ಯದಲ್ಲಿ ಸುರಕ್ಷಿತವಾಗಿ ತಲುಪಿಸಿ ಮಾಯವಾಯಿತು.

#ಕೂರ್ಮ (ಆಮೆ) ಅವತಾರ


ಹಿಂದೂಧರ್ಮದಲ್ಲಿ, ಕೂರ್ಮಾವತಾರವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ ವಿಷ್ಣುವಿನ ಎರಡನೇ ಅವತಾರ. ಮತ್ಸ್ಯಾವತಾರದಂತೆ ಈ ಅವತಾರವೂ ಸತ್ಯಯುಗದಲ್ಲಿ ಸಂಭವಿಸಿತ್ತು. ಕೂರ್ಮಾವತಾರಕ್ಕೆ , ಸಮುದ್ರ ಮುಂದಿನ ಸಮಯದಲ್ಲಿ ಮಂದಾರ ಪರ್ವತವನ್ನು ಕಡಗೋಲಾಗಿ ಮಾಡಿ ಕಡೆಯುವಾಗ ಆ ಮಂದಾರ ಪರ್ವತಕ್ಕೆ ಆಧಾರವಾಗಿ ಮಹಾವಿಷ್ಣು ಆಮೆಯ ಅವತಾರವೇ ಕೂರ್ಮಾವತಾರ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕೂರ್ಮಾಯಿ ಮತ್ತು ಶ್ರೀಕೂರ್ಮಂನಲ್ಲಿ ನೆಲೆಗೊಂಡಿವೆ.

#ವರಾಹಾವತಾರ

ಹಿರಣ್ಯಾಕ್ಷ ಅತೀ ದೈವದ್ವೇಷಿ. ಭೂಮಿಯಲ್ಲಿ ಭಗವಂತನನ್ನು ಆರಾಧಿಸವವರೇ ಇರಬಾರದು. ಭೂಮಿಯಿದ್ದರಲ್ಲವೆ? ಭಕ್ತರಿರುವುದು.ಇಡೀಭೂಮಿಯನ್ನೇ ಇಲ್ಲದಂತೆ ಮಾಡಿಬಿಟ್ಟರೆ ಭಕ್ತರೇ ಇರುವುದಿಲ್ಲ. ಭಗವಂತನ ಆರಾಧನೆಯೇ ನಡೆಯುವುದು ನಿಂತುಬಿಡುತ್ತದೆ.ಹೀಗೆ ಯೋಚಿಸಿ ಸಮುದ್ರದಡಿಯಲ್ಲಿ ಮುಚ್ಚಿಟ್ಟ. ಆಗ ವಿಷ್ಣುವು ವರಾಹರೂಪ ತಾಳಿ ಭೂಮಿಯನ್ನು ರಕ್ಷಿಸಬೇಕಾಯಿತು.

ಭೂದೇವಿಯ ರಕ್ಷಣೆಗಾಗಿ ಮಹಾ ವಿಷ್ಣುವಿನ ಮೂರನೆಯ ಅವತಾರ ವರಾಹಾವತಾರ
ವರಾಹಾವತಾರ ಹಂದಿಯ ರೂಪದಲ್ಲಿ ಕೋರೆಗಳಿಂದ ಭೂದೇವಿಯನ್ನು ರಕ್ಷಿಸಿದನು ...

#ಶ್ರೀನರಸಿಂಹ ಅವತಾರ

ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ಒಂದು. ದಶಾವತಾರಗಳಲ್ಲಿ ನಾಲ್ಕನೆಯದು.
ಅರ್ಧ ದೇಹ ಮನುಷ್ಯನಂತೆ ಮತ್ತು ಇನ್ನರ್ಧ ಭಾಗ ಸಿಂಹ ರೂಪದಲ್ಲಿರುವುದರಿಂದ ನರಸಿಂಹ ಎಂಬ ಹೆಸರು ಬಂದಿದೆ. ಹಿರಣ್ಯ ಕಶಿಪು ಎಂಬ ರಾಕ್ಷಸನನ್ನು ಕೊಲ್ಲಲು ಮಹಾವಿಷ್ಣು ಈ ರೂಪದಿಂದ ಭೂಮಿಯಲ್ಲಿ ಅವತರಿಸಿದನೆಂದು ಪುರಾಣಗಳಲ್ಲಿ ಹೇಳಲಾಗಿದೆ.
ಅಗ್ನಿಲೋಚನ...ಬೆಂಕಿಯನ್ನೇ ಹೊಂದಿರುವ ಕಣ್ಣುಳ್ಳವನು.ಭೈರವಾಡಂಬರ...ಭೀಕರ ಧ್ವನಿಯಿಂದ ಘರ್ಜಿಸುವನು.ಕರಾಳ...ಅಗಲ ಬಾಯಿಯಲ್ಲಿ ಚಾಚಿದ ಕೋರೆದಾಡಿಗಳುಳ್ಳವನು. ಹಿರಣ್ಯಕಶಿಪು ಧ್ವಂಸ...ಹಿರಣ್ಯಕಶಿಪುವನ್ನು ಸಂಹರಿಸಿದವನು. ನಖಾಸ್ತ್ರ...ಕೈ ಉಗುರುಗಳನ್ನೇ ಆಯುಧವಾಗುಳ್ಳವನು. ಸಿಂಹವದನ....ಸಿಂಹದ ಮುಖವುಳ್ಳವನು. ಮೃಗೇಂದ್ರ....ಮೃಗಗಳ ರಾಜನಾದ ಸಿಂಹರೂಪಿ. ಬಲದೇವ...ವಿಶಿಷ್ಟವಾದ ಶಕ್ತಿಯುಳ್ಳವನು.
ಹೀಗೆ ಈ ಅಷ್ಟರೂಪ ಸ್ಮರಣೆ ಮಾಡಿದರೆÜ ನಮಗೊದಗಿದ ಭಯಗಳಿಂದ ಪಾರು ಮಾಡುತ್ತಾನಂತೆ.

#ವಾಮನಾವತಾರ

ವಾಮನಾವತಾರವನ್ನು ಪುರಾಣಗಳಲ್ಲಿ ವಿಷ್ಣುವಿನ ಐದನೆಯ ಅವತಾರವೆಂದು, ಮತ್ತು ಎರಡನೇ ಯುಗ ತ್ರೇತಾಯುಗದ ಮೊದಲ ಅವತಾರವೆಂದು ವಿವರಿಸಲಾಗಿದೆ.
ಹಿರಣ್ಯಕಶಿಪುವಿನ ಮರಿಮೊಮ್ಮಗನಾದ ಬಲಿ ಚಕ್ರವರ್ತಿಯು ಇಂದ್ರನನ್ನು ಗೆದ್ದು ಮೂರು ಲೋಕಗಳ ಅಧಿಪತಿಯಾಗುತ್ತಾನೆ. ಇದರಿಂದ ಬೆದರಿದ ದೇವತೆಗಳು ಶ್ರೀಮಾನ್ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ದಾನ ಶೂರನಾದ ಬಲಿ ಚಕ್ರವರ್ತಿಯು ಒಂದು ಯಜ್ಞ ಮಾಡುತ್ತಿರುವಾಗ, ಶ್ರೀಮಾನ್ ಮಹಾವಿಷ್ಣುವು ಒಬ್ಬ ಕುಬ್ಜ ಬ್ರಾಹ್ಮಣ ಬಾಲಕನಾಗಿ ಯಜ್ಞ ಮಾಡುತ್ತಿರುವ ಸ್ಥಳಕ್ಕೆ ಬರುತ್ತಾನೆ. ಅಲ್ಲಿಗೆ ಬಂದ ವಾಮನನು ಮೂರು ಅಡಿಗಳಷ್ಟು ಬಲಿಯ ರಾಜ್ಯವನ್ನು ದಾನವಾಗಿ ಕೇಳಿದನು.

ಆ ಬಾಲಕನನ್ನು ನೋಡಿ ಬಲಿ ಚಕ್ರವರ್ತಿ ಬಹಳ ಸಂತೋಷದಿಂದ ಕೇಳಿದನ್ನು ದಾನವಾಗಿ ಕೊಡಲು ಒಪ್ಪಿದನು. ಕೂಡಲೇ ವಾಮನನು ತ್ರಿವಿಕ್ರಮನಾಗಿ ಬೆಳೆದು ನಿಂತನು. ತ್ರಿವಿಕ್ರಮನ ಮೊದಲ ಹೆಜ್ಜೆಯಲ್ಲಿ ಸ್ವರ್ಗ ಹಾಗು ಪಾತಾಳ ಲೋಕವು, ಎರಡನೇ ಹೆಜ್ಜೆಯಲ್ಲಿ ಭೂಮಿಯು ಆವರಿಸಲ್ಪಟ್ಟಿತು. ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ತ್ರಿವಿಕ್ರಮನು ಬಲಿ ಚಕ್ರವರ್ತಿಯನ್ನು ಕೇಳಿದಾಗ, ಬಲಿ ಚಕ್ರವರ್ತಿಯು ವಾಮನ ರೂಪದಲ್ಲಿ ಬಂದಿದ್ದು ಶ್ರೀಮಾನ್ ಮಹಾವಿಷ್ಣುವೇ ಎಂದು ಕಂಡುಕೊಂಡು, ತನ್ನ ಶಿರವನ್ನೇ ಮೂರನೇ ಹೆಜ್ಜೆ ಇಡಲು ಜಾಗವಾಗಿ ಕೊಟ್ಟನು. ಆಗ ತ್ರಿವಿಕ್ರಮನು ತನ್ನ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲೆ ಇಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದನು. ಬಲಿ ಚಕ್ರವರ್ತಿಯ ಭಕ್ತಿಗೆ ಮೆಚ್ಚಿದ ಶ್ರೀಹರಿಯು ಬಲಿಯನ್ನು ಅಮರನನ್ನಾಗಿ ಮಾಡಿ ಪಾತಾಳ ಲೋಕಕ್ಕೆ ಚಕ್ರವರ್ತಿಯನ್ನಾಗಿ ನೇಮಿಸಿದನು.

#ಪರಶುರಾಮ ಅವತಾರ

ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ. ಅವನು ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಅವನು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದನು ಮತ್ತು ಅವನು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬನು.

ಪರಶುರಾಮರ ಜನ್ಮಸ್ಥಳ
ಪರಶುರಾಮರ ಜನ್ಮಸ್ಥಳ ರೇಣುಕಾ ತೀರ್ಥವೆಂದು ಹೇಳಲಾಗುತ್ತಿದೆ(ಈಗಿನ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡ). ಆಧುನಿಕ ಮಹೇಶ್ವರದಲ್ಲಿ ಅವರ ವಂಶಾವಳಿ ನಡೆಯಿತು ಎಂಬುದಾಗಿ ಪ್ರಸ್ತಾಪಿಸಲಾಗಿದೆ. ಅವರ ತಂದೆ ಋಷಿ ಜಮದಗ್ನಿ ಬ್ರಹ್ಮ ದೇವರ ನೇರ ತಲೆಮಾರಿನವರಾಗಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ.

ಭಗವಾನ್ ವಿಷ್ಣುವಿನ ಆರನೆಯ ಅವತಾರವೆಂದೇ ಖ್ಯಾತರಾಗಿರುವ ಮಹರ್ಷಿ ಪರಶುರಾಮರು ಬ್ರಾಹ್ಮಣ ಸಪ್ತರ್ಷಿಯಾದ ಜಮದಗ್ನಿ ಮತ್ತು ರೇಣುಕಾದೇವಿ ಯರ ಪುತ್ರರಾಗಿದ್ದಾರೆ. ತ್ರೇತಾಯುಗದಲ್ಲಿ ಜನಿಸಿ, ಹಿಂದೂ ಧರ್ಮದಲ್ಲಿ ಸಪ್ತಚಿರಂಜೀವಿ ಎಂದು ಕರೆಯಲಾದ ಏಳು ದೇವತೆಗಳಲ್ಲಿ ಒಬ್ಬರೆನಿಸಿದ್ದಾರೆ. ಹುಟ್ಟುವಾಗಲೇ ಬ್ರಾಹ್ಮರಾಗಿದ್ದರೂ, ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಪರಶುರಾಮನಿಗೆ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರನ್ನೂ ಪರಶುರಾಮ ಪಡೆದುಕೊಂಡಿದ್ದಾರೆ.

ಯುದ್ಧ ವಿದ್ಯಾ ಪರಿಣಿತನಾಗಿದ್ದ ಪರಶುರಾಮ ಭ್ರಷ್ಟ ಯೋಧರಿಗೆ ಸಿಂಹಸ್ವಪ್ನ ಎಂದೆನಿಸಿದ್ದರು.ಕೇರಳದ ಕಲರಿಪಯಟ್ಟುವಿನ ಜನಕ. ಭೂಮಿಯ ಮೇಲೆ 21 ಬಾರಿ ಪರ್ಯಟನೆಮಾಡಿ ಭ್ರಷ್ಟ ಕ್ಷತ್ರಿಯರನ್ನು ಇವರೊಬ್ಬರೇ ವಧಿಸಿದ್ದಾರೆ. ಪರಶು ಎಂಬುದರ ಅರ್ಥ ಕೊಡಲಿ.ಪರಶುರಾಮ ಎಂಬ ಹೆಸರು ಈ ಅರ್ಥವನ್ನು ಹೊಂದಿರುವುದರಿಂದ ಕೊಡಲಿಯನ್ನು ಹೊಂದಿರುವ ರಾಮ ಎಂಬ ಹೆಸರಿನಿಂದ ಕೂಡ ಪರಶುರಾಮ ಜನಜನಿತರಾಗಿದ್ದರು. ತಾಯಿಯ ಶಿರವನ್ನೇ ಕಡಿದ ಪರಶುರಾಮನ ಪಿತೃಭಕ್ತಿಗೆ ಎಣೆಯು೦ಟೇ..?!. ತಮ್ಮ ದಾರಿಗೆ ಅಡ್ಡ ಬರುವಂತಹ ಕ್ಷತ್ರಿಯ ರಾಜರನ್ನು ಕೊಲ್ಲುತ್ತಾ ಪರಶುರಾಮ ಏಕೈಕ ರಾಜನನ್ನೂ ಬಿಟ್ಟಿಲ್ಲ ಎಂಬುದಾಗಿ ಪುರಾಣ ಹೇಳುತ್ತದೆ.

#ಶ್ರೀರಾಮ ಅವತಾರ

ಶ್ರೀ ರಾಮಚಂದ್ರ ಸೂರ್ಯ ವಂಶದವನು. ಮಹಾ ವಿಷ್ಣುವಿನ ಏಳನೆಯ ಅವತಾರ
ಭಾರತದಲ್ಲಿ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ, ನೀತಿಗಳಿಂದ ಕೂಡಿದ್ದವೆಂದು ತಿಳಿದು ಬರುತ್ತದೆ. ಅಯೋಧ್ಯೆಯ ರಾಜನಾಗಿದ್ದ ದಶರಥನ ನಾಲ್ಕು ಜನ ಮಕ್ಕಳಲ್ಲಿ ಹಿರಿಯನು ರಾಮ. ಆತನ ತಾಯಿ ಕೌಸಲ್ಯೆ. ಲಕ್ಷ್ಮಣ, ಭರತ, ಶತ್ರುಘ್ನರು ಆತನ ತಮ್ಮಂದಿರು. ಭರತನ ತಾಯಿ ಕೈಕೇಯಿ. ಲಕ್ಷ್ಮಣ ಶತ್ರುಘ್ನರ ತಾಯಿ ಸುಮಿತ್ರೆ.

ಸೀತೆ ರಾಮನ ಹೆಂಡತಿ. ರಾಮನಿಗೆ ಲವಮತ್ತು ಕುಶ ಎಂಬ ಇಬ್ಬರು ಮಕ್ಕಳು. ರಾಮನ ಜೀವನ ಚರಿತ್ರೆಯನ್ನು ತಿಳಿಸುವ ಮಹಾಕಾವ್ಯವೇ ರಾಮಾಯಣ. ಶ್ರೀರಾಮಚಂದ್ರ ಕ್ರಿ.ಪೂ.5114 ರ ಜನವರಿ 10 ರಂದು ಜನಿಸಿದನು. ಈತನು ಪುರಾಣ ಪುರುಷ ಮಾತ್ರವಲ್ಲ ಈತನ ಇತಿಹಾಸದ ಬಗ್ಗೆಯೂ ಸಾಕಷ್ಟು ಮಾಹಿತಿ ಲಭ್ಯ ವಾಗಿದೆ. ಪ್ರಖ್ಯಾತ ಖಗೋಳಜ್ಞರು ಈ ಬಗ್ಗೆ ಅನೇಕ ಅನ್ವೇಷಣೆಗಳನ್ನು ಮಾಡುತ್ತಿದ್ದಾರೆ.
ಶ್ರೀರಾಮನು ತಂದೆ ಮಾತಿಗೆ ಬೆಲೆ ಕೊಟ್ಟು ಸೀತಾ ಮತ್ತು ಲಕ್ಷ್ಮಣರೊಂದಿಗೆ ವನವಾಸಕ್ಕೆ ಹೋಗುವನು 13 ವರ್ಷಗಳ ವನವಾಸ ನಿರಾತಂಕವಾಗಿ ನಡೆಯುವುದು. ಆದರೆ ಶೂರ್ಪನಕಿ ಎಂಬ ರಾಕ್ಷಸಿ ಬಂದು ಇವರ ನೆಮ್ಮದಿಗೆ ಭಂಗ ತರುತ್ತಾಳೆ. ನಂತರ ಆಕೆಯ ಮೂಗು, ಮುಂದಲೆಯನ್ನು ಲಕ್ಷ್ಮಣ ಕೊಯ್ಯುವನು.

ಆಗ ಆಕೆ ತನ್ನ ಅಣ್ಣ ಲಂಕಾಧಿಪತಿ, ಮಹಾಶಿವಭಕ್ತ ರಾವಣನಿಗೆ ದೂರು ನೀಡಿ ಸೀತೆಯು ಸುಂದರಿಯೆಂದು ಆಕೆಯನ್ನು ನೀನು ವರಿಸಿದರೆ ಬಹಳ ಚೆಂದವೆಂದು ಹೇಳುವಳು. ಆಗ ರಾವಣ ಮಾಯಾವೇಶ ಧರಿಸಿ ಸೀತೆಯನ್ನು ಅಪಹರಿಸುವನು. ಶ್ರೀರಾಮ-ಲಕ್ಷ್ಮಣರು ಸೀತೆಯನ್ನು ಅರಸುತ್ತಾ, ವಾನರರ ಸಹಾಯ ಪಡೆದು ರಾವಣನನ್ನು ಸಂಹರಿಸಿ, ಸೀತೆಯನ್ನು ಅಗ್ನಿಪ್ರವೇಶದ ಮೂಲಕ ಪುನೀತಳನ್ನಾಗಿಸಿ ಮರಳಿ ಅಯೋಧ್ಯೆಗೆ ಕರೆತರುತ್ತಾನೆ.

#ಬಲರಾಮ (ಬೌದ್ಧಾವತಾರ)

ಬಲದೇವ, ಬಲಭದ್ರ, ಮತ್ತು ಹಲಾಯುಧ ಎಂಬ ಹೆಸರುಗಳನ್ನು ಹೊತ್ತ ಬಲರಾಮ ಕೃಷ್ಣನ ಹಿರಿಯಣ್ಣ. ಬಲರಾಮನು ವಿಷ್ಣುವಿನ ಒಂಬತ್ತನೇ ಅವತಾರ. ವಿಷ್ಣುವನ್ನು ಹೊಂದುವ ದೈವೀ ಸರ್ಪಆದಿಶೇಷನ ಅವತಾರವಾಗಿಯೂ ಪರಿಗಣಿಸಲಾಗುತ್ತದೆ. ಭಾಗವತ ಪುರಾಣದ ಪ್ರಕಾರ ಕೃಷ್ಣನೇ ವಿಶ್ವದ ಮೂಲ. ಈ ಪ್ರಕಾರ ಕೃಷ್ಣನ ಮೊದಲ ಅವತಾರವೇ ಬಲರಾಮ. ಬಲರಾಮನಿಂದ ಇತರ ಅವತಾರಗಳು ಹುಟ್ಟಿದವು.

ಬಲರಾಮನ ಹುಟ್ಟು ವಸುದೇವ ಮತ್ತು ದೇವಕಿಯರ ಪುತ್ರನಾಗಿ. ದೇವಕಿಯ ಅಣ್ಣ ಮತ್ತು ದುಷ್ಟ ರಾಜನಾದ ಕಂಸನು ದೇವಕಿಯ ಎಲ್ಲ ಮಕ್ಕಳನ್ನು ಕೊಲ್ಲುವ ಹೊಂಚು ಹಾಕಿದ್ದನು. ಇದಕ್ಕೆ ಕಾರಣ ದೇವಕಿಯ ಎಂಟನೇ ಸಂತಾನ ಕಂಸನ ಹತ್ಯೆ ಮಾಡುವುದೆಂಬ ಅಶರೀರವಾಣಿ. ಈ ಕಾರಣದಿಂದ ಕಂಸನು ದೇವಕಿ ಮತ್ತು ವಸುದೇವನನ್ನು ಬಂಧನದಲ್ಲಿಟ್ಟು ಅವರ ಮಕ್ಕಳನ್ನು ಹುಟ್ಟಿದ ಕೂಡಲೇ ಕೊಲ್ಲುತ್ತಾ ಬಂದನು. ಕಾಲಾನಂತರ ದೇವಕಿ ಏಳನೇ ಸಲ ಗರ್ಭಿಣಿಯಾದಳು. ಆದರೆ ಗರ್ಭದಲ್ಲಿದ್ದ ಮಗು ಮಾಯೆಯಿಂದ/ಪವಾಡದಿಂದ ದೇವಕಿಯ ಗರ್ಭದಿಂದ ರೋಹಿಣಿಯ ಗರ್ಭಕ್ಕೆ ಹರಿಯಿತು. ಈ ಕಾರಣದಿಂದ ಬಲರಾಮನ ಇನ್ನೊಂದು ಹೆಸರು ಸಂಕರ್ಷಣ ಎಂದು. ಮಗುವಿನ ಹೆಸರು ರಾಮ ಎಂದಿದ್ದರೂ, ಅವನ ಅತೀವ ಶಕ್ತಿಯ ಕಾರಣ "ಬಲರಾಮ" ಎಂದು ಕರೆಯಲಾಯಿತು. ಹೀಗೆ ರೋಹಿಣಿ ಬಲರಾಮನಿಗೆ ಜನ್ಮ ಕೊಟ್ಟು ಪಾಲಿಸಿದಳು. ಬಲರಾಮನು ತನ್ನ ಬಾಲ್ಯವನ್ನು ಸಹೋದರ ಕೃಷ್ಣನ ಜೊತೆ ಹಸುಗಳನ್ನು ಕಾಯುವ ಗೋಪಾಲನಾಗಿ ಕಳೆದನು.

#ಕೃಷ್ಣ ಅವತಾರ

ಶ್ರೀಕೃಷ್ಣ , ಮಹಾವಿಷ್ಣುವಿನ ಒಂಬತ್ತೆಯ ಅವತಾರ

ಕಂಸ ಮತ್ತು ಚಾಣೂರರ ಸಂಹಾರಕ್ಕಾಗಿ ವಿಷ್ಣು ಶ್ರೀಕೃಷ್ಣನ ಅವತಾರವನ್ನೆತ್ತಿದ. ಮಥುರಾ ನಗರದಲ್ಲಿ ರಾಜನಾಗಿದ್ದ ಉಗ್ರಸೇನನ ಮಗ ಕಂಸ ತನ್ನ ತಂದೆಯನ್ನೇ ಬಂಧನದಲ್ಲಿಟ್ಟು ತಾನು ರಾಜನಾಗುತ್ತಾನೆ. ತನ್ನ ತಂಗಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಶಿಶುವಿನಿಂದ ತನಗೆ ಮೃತ್ಯು ಎಂದು ನಂಬಿದ ಕಂಸ ದೇವಕಿ ಮತ್ತು ಅವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಇವರಿಗೆ ಹುಟ್ಟಿದ ಮಕ್ಕಳನ್ನು ಕಂಸ ನಿರ್ದಯೆಯಿಂದ ಕೊಲ್ಲುತ್ತಾನೆ. ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವ ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಶಿಶುವಿನ ಸ್ಥಾನದಲ್ಲಿ ಕೃಷ್ಣನನ್ನು ಮಲಗಿಸಿ ಆ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ.

ಕಂಸ ಯಥಾಪ್ರಕಾರ ದೇವಕಿಗೆ ಹುಟ್ಟಿದ ಶಿಶು ಎಂದು ಭ್ರಮಿಸಿ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆಗ ಒಂದು ಪವಾಡ ನಡೆಯುತ್ತದೆ. ಶಿಶು "ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಳೆದಾಗಿದೆ" ಎಂದು ಹೇಳಿ ಅಂತರ್ಧಾನವಾಗುತ್ತದೆ. ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳಿಸುತ್ತಾನೆ. ಇವರಾರಿಗೂ ಶ್ರೀಕೃಷ್ಣನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಮುಂದೆ ಕೃಷ್ಣನು ತನ್ನ (ಖಾಸಾ) ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡುತ್ತಾನೆ. ಉಗ್ರಸೇನ ಮಹಾರಾಜನನ್ನು ಸೆರೆಯಿಂದ ಮುಕ್ತಗೊಳಿಸಿ ಅವನಿಗೆ ಫಟ್ಟಾಭಿಷೇಕ ಮಾಡುತ್ತಾನೆ.

ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕತೆಗಳಿವೆ. ಭಕ್ತಿಯುಗದ ಕವಿಗಳು ಈ ಕತೆಗಳನ್ನು ಆಧರಿಸಿ ಅನೇಕ ಭಜನೆಗಳನ್ನು ರಚಿಸಿದ್ದಾರೆ. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ, ಇವರೆಲ್ಲರೂ ಶ್ರೀಕೃಷ್ಣನ ಭಕ್ತರಾಗಿದ್ದ ಕವಿಗಳು.

ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಗೋಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ. ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ.
ರುಕ್ಮ ಎಂಬ ರಾಜನ ತಂಗಿ ರುಕ್ಮಿಣಿಯನ್ನು ಮದುವೆಯಾಗಲು ಶ್ರೀಕೃಷ್ಣ ಬಯಸುತ್ತಾನೆ. ರುಕ್ಮನಿಗೆ ಶ್ರೀಕೃಷ್ಣನನ್ನು ಕಂಡರೆ ದ್ವೇಷ. ಹೀಗಾಗಿ ರುಕ್ಮಿಣಿಯನ್ನು ಅಪಹರಿಸಿಕೊಂಡು ಬಂದು ಕೃಷ್ಣ ಮದುವೆಯಾಗುತ್ತಾನೆ. ಮುಂದೆ ಜಾಂಬವತಿ ಮತ್ತು ಸತ್ಯಭಾಮೆ ಎಂಬ ಕನ್ಯೆಯರನ್ನೂ ಕೃಷ್ಣ ವಿವಾಹವಾಗುತ್ತಾನೆ.

ಜರಾಸಂಧ ಎಂಬ ರಾಕ್ಷಸನೊಂದಿಗೆ ಕೃಷ್ಣನಿಗೆ ಅನೇಕ ಸಲ ಯುದ್ಧವಾಗುತ್ತದೆ. ಜರಾಸಂಧನನ್ನು ಸೋಲಿಸುವ ಬದಲು, ಕೃಷ್ಣ ತನ್ನ ಬಂಧು-ಬಾಂಧವರನ್ನೆಲ್ಲ ಗಂಗಾತೀರದ ಮಥುರೆಯಿಂದ, ಸಾಗರತೀರದ ದ್ವಾರಕೆಗೆ ಬಂದು, ನಗರವನ್ನು ನಿರ್ಮಿಸಿ ಮಥುರೆಯ ದೊರೆ ಉಗ್ರಸೇನನನ್ನೇ ರಾಜನಾಗಿ ನಿಲ್ಲಿಸುತ್ತಾನೆ

#ಕಲ್ಕಿ ಅವತಾರ

ಕಲ್ಕಿ ವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರ. ಕಲಿಯುಗದ ಕೊನೆಯಲ್ಲಿ ಆಗಲಿದೆ. ಕಲಿಮಹಾಪುರುಷನ ಪ್ರಭಾವದಿಂದ ಜನರಲ್ಲಿ ಧರ್ಮ, ದಯೆ ಮೊದಲಾದ ಗುಣಗಳು ಅಳಿದು ಅಧರ್ಮ ಅತಿ ಹೆಚ್ಚಿದಾಗ ವಿಷ್ಣು ಕಲ್ಕಿಯಾಗಿ ಅವತರಿಸಿ ಅಶ್ವಾರೂಢನಾಗಿ, ಖಡ್ಗ ಹಿಡಿದು ಹೊರಟು ಮ್ಲೇಚ್ಛ ಸಮೂಹವನ್ನು ಸಂಹರಿಸಿ, ಜಗತ್ತಿನಲ್ಲಿ ಧರ್ಮಸಂರಕ್ಷಣೆ ಮಾಡಿ ಶಾಂತಿಸೌಖ್ಯಗಳನ್ನು ನೆಲೆಗೊಳಿಸುತ್ತಾನೆಂದು ನಂಬಿಕೆ. ವೈದಿಕ ಸಾಹಿತ್ಯದಲ್ಲಿ ಕಲ್ಕಿಯು ಮಹಾವಿಷ್ಣುವಿನ ಹತ್ತನೆಯ ಮತ್ತು ಕೊನೆಯ ಅವತಾರ. ಅವನು ಈಗ ಇರುವ , ಅಸತ್ಯ, ಅಧರ್ಮ ಮತ್ತು ಅನ್ಯಾಯಗಳಿಂದ ಕೂಡಿದ ಕಲಿಯುಗವನ್ನು ಕೊನೆಗೊಳಿಸಿ ಸತ್ಯ,ಧರ್ಮ,ನ್ಯಾಯಗಳ ಕೃತಯುಗ ಅಂದರೆ ಸತ್ಯಯುಗವನ್ನು ಸ್ಥಾಪಿಸುವನು. ಬೌದ್ಧಧರ್ಮದಲ್ಲಿ ಶಾಂಭಲಾ ರಾಜ್ಯದ ೨೫ ಜನ ಅರಸರು ಕಲ್ಕಿ ಎಂಬ ಬಿರುದನ್ನು ಹೊಂದಿರುತ್ತಾರೆ.

ಗರುಡಪುರಾಣದಲ್ಲಿ ಹತ್ತು ಅವತಾರಗಳನ್ನು ಹೇಳಿದ್ದು ಕಲ್ಕಿ ಹತ್ತನೆಯ ಅವತಾರವಾಗಿದೆ. ಭಾಗವತ ಪುರಾಣದಲ್ಲಿ ಒಟ್ಟು ಇಪ್ಪತ್ತನಾಲ್ಕು ಅವತಾರಗಳನ್ನು ಹೇಳಿದೆ....ಕಲ್ಕಿಯವತಾರದಲ್ಲಿ ಅವನು ರೆಕ್ಕೆಗಳುಳ್ಳ ದೇವದತ್ತ ಎಂಬ ಹೆಸರಿನ ಬಿಳಿಯ ಬಣ್ಣದ ಕುದುರೆಯ ಮೇಲೆ ಎಡಗೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕಲಿಯುಗವನ್ನು ಕೊನೆಗೊಳಿಸಲು ಬರುತ್ತಾನೆ ಎಂದು ಅವನನ್ನು ಕಲ್ಪಿಸಲಾಗಿದೆ. ವಿಷ್ಣುಪುರಾಣ, ಅಗ್ನಿಪುರಾಣ ಗಳಲ್ಲೂ ಕಲ್ಕಿಯ ಬಗ್ಗೆ ಸೂಚಿಸಲಾಗಿದೆ.

ಕಲ್ಕಿಪುರಾಣದಲ್ಲಿ ಕಲ್ಕಿಯ ಅವತಾರ ಯಾವಾಗ ಹೇಗೆ ಆಗುವುದು, ಅವನು ಏನು ಮಾಡುತ್ತಾನೆ ಎಂಬ ಬಗ್ಗೆ ವಿವರಗಳಿವೆ.

Post a Comment

0Comments

Please Select Embedded Mode To show the Comment System.*