ಕೇಂದ್ರ ಸರಕಾರದ ಪದ್ಮ ಪ್ರಶಸ್ತಿಗಳನ್ನು 1954 ರಿಂದ ನಾನಾ ಕ್ಷೇತ್ರಗಳ ಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ.
ಸಂಗೀತ ಕ್ಷೇತ್ರದಲ್ಲಿಮೊದಲಿಗೆ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರದವರು ಉಸ್ತಾದ್ ಅಲ್ಲಾವುದ್ದಿನ್ ಖಾನ್ ಸಾಹೇಬ್.(8/11/1862–6/9/1972)
ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತ ಪರಂಪರೆಯಲ್ಲಿ ಅವರ ಸಾಧನೆಯನ್ನು ಗುರುತಿಸಿ 1958
ನೆ ಸಾಲಿನಲ್ಲಿ ಪದ್ಮ ಭೂಷಣ ಮತ್ತು 1971ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗಿದೆ. ಸರೋದ್, ಸಿತಾರ್, ಶಹನಾಯ್, ಬಾಂನ್ಸುರಿ ವಾದ್ಯಗಳಲ್ಲಿ ಖಾನ್ ಸಾಹೇಬ್ ಪ್ರಾವೀಣ್ಯತೆ ಪಡೆದಿದ್ದರು.ಅವರ ಕುಟುಂಬದಲ್ಲಿ ಮಗ, ಮಗಳು, ಮೊಮ್ಮಗ ಸಂಗೀತ ಪರಂಪರೆಯಲ್ಲಿಯೇ ಮುಂದುವರಿದರು.
ಅದೇ ರೀತಿಯಲ್ಲಿ ಸಂಗೀತ ವಿದುಷಿ ಎಂ. ಎಸ್. ಸುಬ್ಬ ಲಕ್ಷ್ಮಿ(16/9/1916–11/12/2004) ಅವರೂ 1954ರಲ್ಲಿ ಪದ್ಮ ಭೂಷಣ, 1975 ರಲ್ಲಿ ಪದ್ಮ ವಿಭೂಷಣ, 1998ರಲ್ಲಿ ದೇಶದ ಅತ್ಯುನ್ನತ ನಾಗರೀಕ ಗೌರವ ಭಾರತ ರತ್ನ ಪ್ರಶಸ್ತಿಗೆ ಭಾಜನರಾದರು. ಈ ಪುರಸ್ಕಾರ ಪಡೆದ ಸಂಗೀತ ಕ್ಷೇತ್ರದ ಪ್ರಥಮ ಸಾಧಕರು ಆಗಿದ್ದಾರೆ.