ಜೇನು ನೊಣ ಕಡಿತದ ನೋವು ಶಮನಗೊಳಿಸುವ ಮನೆಮದ್ದು ಬಹುಶಃ ಇಲ್ಲ.
ಆದರೆ ಅದರ ನಂಜು ನಿವಾರಣೆಗೆ ಅರಿಸಿನ ಅತ್ಯಂತ ಪರಿಣಾಮಕಾರಿ ಮನೆಮದ್ದು.
- ಮೊದಲನೆಯದಾಗಿ ಜೇನು ನೊಣ ಕಚ್ಚಿದ ಜಾಗದಲ್ಲಿ ಇರುವ ನೊಣದ ಅಂಬನ್ನು ತೆಗೆಯಬೇಕು.
- ನಂತರ ಆ ಜಾಗಕ್ಕೆ ಅರಿಸಿನದ ಕೊಂಬನ್ನು ಜಜ್ಜಿ ಅಥವಾ ತೇದು ಹಚ್ಚಬೇಕು. ಹಾಗೂ ಅರಿಸಿನದ ಕೊಂಬನ್ನು ತೇದು ಅಥವಾ ಜಜ್ಜಿ ಅದನ್ನ ನೀರಿನಲ್ಲಿ ಸೇರಿಸಿ ಕುಡಿಯಬೇಕು.
- ಹಸಿ ಅರಿಸಿನದ ಕೊಂಬು ಉತ್ತಮ.
- ಅರಿಸಿನದ ಕೊಂಬು ಇಲ್ಲದಿದ್ದರೆ ಅರಿಸಿನ ಪುಡಿಯಾದರೂ ಆದೀತು. ಅರಿಸಿನ ಪುಡಿಯನ್ನು ನೀರಿನಲ್ಲಿ ಕಲೆಸಿ ಹಚ್ಚಬೇಕು.
- ಒಂದೆರಡು ಚಮಚ ಅರಿಸಿನ ಪುಡಿಯನ್ನು ಅರ್ಧ ಲೋಟ ನೀರಿನಲ್ಲಿ ಕಲೆಸಿ ಕುಡಿಯಬೇಕು.
- ಈ ಔಷಧದಿಂದ ನಂಜು ಮತ್ತು ನೋವು ಒಂದು ದಿನದಲ್ಲಿ ಶಮನವಾಗುತ್ತದೆ.
- ಇದನ್ನ ಎರಡು ಸಾರಿ ಮಾಡಿದರೆ ಸಾಕು.
ನಾಲ್ಕೈದು ಹುಳು ಕಚ್ಚಿದ್ದರೆ ಮಾತ್ರ ಈ ಔಷಧ ಸಾಕಾಗುತ್ತದೆ. ಇನ್ನೂ ಹೆಚ್ಚಿನ ಹುಳು ಕಚ್ಚಿದ್ದರೆ ಅಥವಾ ಹೆಜ್ಜೇನು ಕಚ್ಚಿದ್ದರೆ ಈ ಔಷಧ ಸಾಕಾಗುವುದಿಲ್ಲ. ವೈದ್ಯರ ಸಲಹೆ ಕಡ್ಡಾಯ.
ಇದನ್ನ ತಕ್ಷಣದ ಔಷಧವಾಗಿ ಉಪಯೋಗಿಸಬಹುದು ಅಷ್ಟೆ.
ಜೇನು ಹುಳುವಿನ ನಂಜು ಅತ್ಯಂತ ಅಪಾಯಕಾರಿ. ಅದು ಹೆಚ್ಚಾದರೆ ಪ್ರಾಣಕ್ಕೆ ಆಪತ್ತು ತರಬಹುದು. ತಕ್ಷಣ ವೈದ್ಯರ ಸಲಹೆ ಪಡೆಯಬೇಕು.