ಅದು ಮೊದಲನೇ ವಿಶ್ವ ಯುದ್ಧದ ಮಧ್ಯ ಕಾಲ. ಅನೇಕ ಫ್ರೆಂಚ್ ಸೈನಿಕರು ಸಾವನ್ನಪ್ಪುತ್ತಿದ್ದಾರೆ. ಅವರ ಸಾವಿಗೆ ಎರಡು ಮುಖ್ಯ ಕಾರಣಗಳಿತ್ತು ಮೊದಲನೆಯದು ಜರ್ಮನರು ಮತ್ತು ಎರಡನೆಯದು ಕಣ್ಣಿಗೆ ಕಾಣದ ಬ್ಯಾಕ್ಟಿರಿಯ. ಫ್ರೆಂಡ್ ಸೈನಿಕರ ದೇಹವನ್ನು ಅವರ ಗಾಯಗೊಂಡ ದೇಹದ ಮೂಲಕ, ಆಹಾರದ ಮೂಲಕ ಮತ್ತು ನೀರಿನ ಮೂಲಕ ಆಕ್ರಮಣ ಮಾಡುತ್ತಿತ್ತು.
ಈಗಿನ ವೈದ್ಯರು ಅಂತಹ ಬ್ಯಾಕ್ಟೀರಿಯಾಗಳಿಗೆ ಸುಲಭವಾಗಿ ಆಂಟಿಬಯೋಟಿಕ್ ಮೂಲಕ ಚಿಕಿತ್ಸೆ ನೀಡಬಹುದು. ಆದರೆ ೧೯೩೦ರವರೆಗೆ ಆಂಟಿಬಯೋಟಿಕ್ ಅನ್ನು ಕಂಡು ಹಿಡಿದಿರಲಿಲ್ಲ. ಮೊದಲನೇ ವಿಶ್ವಯುದ್ಧದ ಕಾಲದಲ್ಲಿ ವೈದ್ಯರು ಯುದ್ಧದ ಗಾಯಗಳನ್ನು ಶುಚಿಗೊಳಿಸಿ ಚಿಕಿತ್ಸೆ ನೀಡುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಕೈಕಾಲುಗಳನ್ನು ಕತ್ತರಿಸಬೇಕಾದ ಪರಿಸ್ಥಿತಿ ಬರುತ್ತಿತ್ತು. ಅದು ಕೊನೆಗೆ ಸಾವಿನಲ್ಲಿ ಅಂತ್ಯ ವಾಗುತ್ತಿತ್ತು.
ಈ ಸಾವು-ನೋವುಗಳ ಮಧ್ಯೆ ೧೯೧೭ ರಲ್ಲಿ ಕೆನಡಾ ಸಂಜಾತ ವೈದ್ಯ ಫೆಲಿಕ್ಸ್ ಡ್ ಹೇರೆಲ್ಲ್ (felix d'herelle) ಒಂದು ಯಶಸ್ವಿ ಚಿಕಿತ್ಸಾ ವಿಧಾನವನ್ನು ಕಂಡುಹಿಡಿಯುತ್ತಾರೆ. ಅದು ಆಂಟಿಬಯೋಟಿಕ್ ಆಗಿರಲಿಲ್ಲ ವೈದ್ಯಲೋಕವೇ ಊಹಿಸಲಾಗದಂತಹ ಅನ್ವೇಷಣೆ ಅದಾಗಿತ್ತು. ಹೆರೆಲ್ಲ್ ಒಂದು ವೈರಸ್ ಕಂಡುಹಿಡಿದಿದ್ದ ಅದು ಮನುಷ್ಯರ ಮೇಲೆ ಆಕ್ರಮಣ ಮಾಡುತ್ತಿರಲಿಲ್ಲ ಪ್ರಾಣಿಗಳ ಮೇಲೆ ಮಾಡುತ್ತಿರಲಿಲ್ಲ ಗಿಡಗಳ ಮೇಲೆ ಮಾಡುತ್ತಿರಲಿಲ್ಲ ಅದರ ಗುರಿ ಬ್ಯಾಕ್ಟೀರಿಯಾಗಳು.
ಹೇರೆಲ್ಲ್ ಈ ಅನ್ವೇಷಣೆಯನ್ನು ಶಿಗೆಲ್ಲ (shigella) ಎಂಬ ಬ್ಯಾಕ್ಟೀರಿಯಾ ಇಂದ ತುತ್ತಾಗಿ ಬೇಧಿಯಿಂದ ಬಳಲುತ್ತಿದ್ದ ಫ್ರೆಂಚ್ ಸೈನಿಕರ ಬಗ್ಗೆ ನಡೆಸುತ್ತಿದ್ದ ಸಂಶೋದನೆ ಸಮಯದಲ್ಲಿ ಮಾಡುತ್ತಾನೆ. ಸಂಶೋಧನೆಯ ಭಾಗವಾಗಿ ಸೈನಿಕನೊಬ್ಬನ ಮಲ ಮಾದರಿಯನ್ನು ಬ್ಯಾಕ್ಟೀರಿಯಾ ದಾಟಲಾಗದ ಚಿಕ್ಕ ಚಿಕ್ಕ ತೂತುಗಳಿರುವ ಫಿಲ್ಟರ್ ನಿಂದ ಫಿಲ್ಟರ್ ಮಾಡಿ . ಹೀಗೆ ಸಿಕ್ಕಿದ ನಿರ್ಮಲ ದ್ರವವನ್ನು ಶಿಗೆಲ್ಲಾ ಮಾದರಿಯ ಜೊತೆ ಸೇರಿಸುತ್ತಾನೆ. ಶಿಗೇಲ್ಲ ಎಂದಿನಂತೆ ಬೆಳೆಯುತ್ತಾ ಹೋಗುತ್ತದೆ ಆದರೆ ಕೆಲವು ಕಡೆ ಸ್ಪಷ್ಟ ಚುಕ್ಕೆಗಳನ್ನು ಆತ ನೋಡುತ್ತಾನೆ. ಆ ಚುಕ್ಕೆಗಳನ್ನು ತೆಗೆದು ಬೇರೆಯ ಶೀಗೆಲ್ಲ ಮಾದರಿಯ ಜೊತೆ ಸೇರಿಸುತ್ತಾನೆ. ಹೀಗೆ ಮಾಡಿದ ನಂತರ ಆ ಸ್ಪಷ್ಟ ಚುಕ್ಕೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಈ ಪ್ರಯೋಗದ ನಂತರ ಆತ ವೈರಸ್ಗಳು ಬ್ಯಾಕ್ಟೀರಿಯಾಗಳನ್ನು ಸಾಯಿಸಿ ಸ್ಪಷ್ಟ ಚುಕ್ಕಿಗಳನ್ನು ಬಿಡುತ್ತೇವೆ ಎಂದು ತೀರ್ಮಾನಿಸುತ್ತಾನೆ ಹಾಗೂ ವೈರಸ್ ಜಾತಿಗೆ ಬ್ಯಾಕ್ಟೀರಿಯಾ ಫೇಜ್ಸ್ (bacteriophages) (ಬ್ಯಾಕ್ಟೀರಿಯಾಗಳನ್ನು ತಿನ್ನುವವು) ಎಂದು ಹೆಸರು ನೀಡುತ್ತಾನೆ.
೧೯೧೯ ರ ನೋಬೆಲ್ ಪುರಸ್ಕೃತ ವಿಜ್ಞಾನಿ ಜೂಲ್ಸ್ ಬಾರ್ದೆಟ್ (jules bordet) ಸಹಿತ ಅನೇಕ ವಿಜ್ಞಾನಿಗಳು ವೈದ್ಯರು ಹಾಗೂ ಇನ್ನಿತರರು ಹೇರೆಲ್ಲ್ ನ ಈ ಸಂಶೋಧನೆಯನ್ನು ಅಲ್ಲಗಳೆಯುತ್ತಾರೆ. ಕೊನೆಗೆ ೧೯೪೦ ರಲ್ಲಿ ಇಂಜಿನಿಯರ್ಗಳು ತಯಾರಿಸಿದ್ದ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ನಿಂದ ಬ್ಯಾಕ್ಟೀರಿಯಾಗಳನ್ನು ತಿನ್ನುವ ವೈರಸ್ಸನ್ನು ಕಣ್ಣಾರೆ ನೋಡುವಂತಾಯಿತು. ಹೇರೆಲ್ಲ್ ಅಲ್ಲಿಯವರೆಗೂ ಕಾಯದೆ ತನ್ನ ಬಳಿ ಬರುತ್ತಿದ್ದ ರೋಗಿಗಳಿಗೆ ಫೆಜ್ಸ್ ನೀಡಿ ಅವರನ್ನು ಗುಣಪಡಿಸುತ್ತಿದ್ದರು. ತನ್ನ ರೋಗಿಗಳಿಗೆ ಜೀವಂತ ವೈರಸ್ ನೀಡುವ ಮೊದಲು ತಾನೇ ಅದನ್ನು ಸೇವಿಸಿ ಅದು ಸುರಕ್ಷಿತ ಎಂದು ಸಾಬೀತಾದ ಮೇಲೆ ರೋಗಿಗಳಿಗೆ ನೀಡಲಾರಂಭಿಸಿದ. ಕಾಲರಾ ರೋಗಿಗಳಿಗೂ ಸಹ ಇದೇ ಮಾದರಿಯ ಚಿಕಿತ್ಸೆ ನೀಡುತ್ತಿದ್ದ. ಪ್ಲೇಗ ಕಾಯಿಲೆಗೂ ಕೂಡ ಇದೇ ಮಾದರಿಯ ಚಿಕಿತ್ಸೆ ನೀಡಿ ಅವರನ್ನು ಗುಣಪಡಿಸಿದ.
೧೯೨೫ ಈತನ ಕಥೆಯನ್ನು ಆಧರಿಸಿ ಏರೋಸ್ಮಿತ್ ಎಂಬ ಕಾದಂಬರಿಯು ಹಾಗೂ ೧೯೩೧ ಚಲನಚಿತ್ರವು ರೂಪಗೊಂಡಿತು. ಲೋರಿಯಲ್ ಎಂಬ ಕಂಪನಿಯ ಮೂಲಕ ಜೀವಂತ ವೈರಸ್ ಒಳಗೊಂಡಿದ್ದ ತನ್ನ ಔಷಧಿಗಳನ್ನು ಮಾರಾಟ ಮಾಡಲು ಶುರು ಮಾಡಿದ ಗಾಯ ಹಾಗೂ ಕರುಳಿನ ಸೋಂಕು ಗುಣಪಡಿಸಲು ಇದೇ ಜೀವಂತ ವೈರಸ್ ಸಹಕಾರಿಯಾಗಿತ್ತು.
ಆದರೆ ೧೯೪೦ರ ಹೊತ್ತಿಗೆ ಫೇಜ್ಸ್ಸ್ ವ್ಯಾಮೋಹ ಕಡಿಮೆಯಾಗಿತ್ತು. ಅದಾಗಲೇ ಆಂಟಿಬಯೋಟಿಕ್ ಕಂಡು ಹಿಡಿದಿದ್ದರಿಂದ ಜೀವಂತ ವೈರಸ್ ಔಷಧಿಯ ಮೂಲಕ ತೆಗೆದುಕೊಳ್ಳುವುದರ ಬದಲು ಆಂಟಿಬಯೋಟಿಕ್ಸ್ ತೆಗೆದುಕೊಳ್ಳುವುದು ಉತ್ತಮ ಎಂದು ವೈದ್ಯರು ಹಾಗೂ ರೋಗಿಗಳು ನಿರ್ಧರಿಸಿದ್ದರು. ಅಲ್ಲಿಗೆ ಬ್ಯಾಕ್ಟೀರಿಯಾಗಳನ್ನು ತಿನ್ನುವ ಈ ವೈರಸ್ಗಳ ಬಗೆಗಿನ ಸಂಶೋಧನೆ ನಿಂತು ಹೋಯಿತಾದರೂ ಸೋವಿಯತ್ ಯೂನಿಯನ್ ಇದರ ಬಗೆಗಿನ ಸಂಶೋಧನೆಯನ್ನು ಮುಂದುವರಿಸಿತು ಆದರೆ ಸೋವಿಯತ್ ಯೂನಿಯನ್ ಪತನದ ನಂತರ ಅದೂ ನಿಂತು ಹೋಯಿತು.
ಬ್ಯಾಕ್ಟೀರಿಯಗಳು ಇನ್ನಷ್ಟು ಶಕ್ತಿಶಾಲಿ ಆಗುತ್ತಿರುವ ಸಂದರ್ಭದಲ್ಲಿ ಬಹುಶಃ ಜೀವಂತ ವೈರಸ್ಗಳನ್ನು ಔಷಧಿ ಎಂದು ಸೇವಿಸಬೇಕಾದ ಕಾಲ ದೂರ ಇಲ್ಲ.