ಬೃಹತ್ ಗಾತ್ರದ ಗ್ರಹಗಳು , ನಕ್ಷತ್ರಗಳು ಗೋಳಾಕಾರದಲ್ಲಿ ಕಾಣುತ್ತದೆ. ಇದಕ್ಕೆ ಕಾರಣ.,
ಗುರುತ್ವಾಕರ್ಷಣೆ. (Gravity) :
ಗುರುತ್ವಾಕರ್ಷಣೆಯು ( Gravity ) ಗ್ರಹದ.ಎಲ್ಲಾ ಕಡೆಯಿಂದ ಸಮಾನವಾಗಿ ಎಳೆಯುತ್ತದೆ. ಗುರುತ್ವಾಕರ್ಷಣೆಯು ಬೈಸಿಕಲ್ ಚಕ್ರದ ಕಡ್ಡಿಗಳಂತೆ ಮಧ್ಯದಿಂದ ಅಂಚುಗಳಿಗೆ ಎಳೆಯುತ್ತದೆ. ಇದು ಗ್ರಹದ ಒಟ್ಟಾರೆ ಆಕಾರವನ್ನು ಗೋಳವನ್ನಾಗಿ ಮಾಡುತ್ತದೆ.
ನಕ್ಷತ್ರಗಳು :
ನಕ್ಷತ್ರಗಳ ಗೋಳಾಕಾರದ ಬಗ್ಗೆ ಹೇಳುವುದಾದರೆ , ನಕ್ಷತ್ರಗಳು ಪ್ಲಾಸ್ಮಾ ಎಂಬ ಬಿಸಿ ಅನಿಲದಿಂದ ಮಾಡಲ್ಪಟ್ಟಿರುತ್ತವೆ. ನಕ್ಷತ್ರಗಳ ಗುರುತ್ವಾಕರ್ಷಣೆಯಿಂದಾಗಿ ಅನಿಲವನ್ನು ನಕ್ಷತ್ರದ ಮಧ್ಯ ಭಾಗಕ್ಕೆ ಎಳೆಯಲಾಗುತ್ತದೆ. ಆದರೆ ಆ ಅನಿಲವು ನಕ್ಷತ್ರದ ಮಧ್ಯ ಭಾಗದಲ್ಲಿ ನೆಲಸುವುದಿಲ್ಲ , ಅಥವಾ ಬಾಹ್ಯಾಕಾಶಕ್ಕೂ ವಿಸ್ತರಿಸುವುದಿಲ್ಲಾ. ಗುರುತ್ವಾಕರ್ಷಣೆಯು ಎಲ್ಲಾ ದಿಕ್ಕುಗಳಲ್ಲಿಯೂ ಸಮಾನವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅನಿಲವು ಎಲ್ಲಾ ದಿಕ್ಕಿನಲ್ಲಿಯೂ ಸಮಾನವಾಗಿ ಹರಡಿ ಪರಿಪೂರ್ಣ ಗೋಳದ ಆಕಾರವನ್ನು ರೂಪಿಸುತ್ತದೆ.
ನೀವು ಕೇಳಬಹುದು , ಭೂಮಿ ಮತ್ತು ಇತರ ಗ್ರಹಗಳು ಪರಿಪೂರ್ಣವಾಗಿ ಗೋಳಾಕಾರವಾಗಿರುವುದಿಲ್ಲ , ಎರಡು (ಸಮಭಾಜಕ) ಕಡೆ ಸ್ವಲ್ಪ ಬಲ್ಜ್ ಆಗಿ ಅಂಡಾಕಾರದಲ್ಲಿ ತಮ್ಮ ಸುತ್ತಲೂ ತಿರುಗುತ್ತವೆ ಎಂದು.
ಇದಕ್ಕೆ ಎರಡು ಕಾರಣಗಳಿವೆ,
1). ತನ್ನ ಅಕ್ಷದ ಸುತ್ತಲೂ ತಿರುಗುವ ವೇಗ.
2). ಗ್ರಹಗಳ ಒಳಭಾಗ ಹೊರಭಾಗಕ್ಕಿಂತ ದಪ್ಪವಾಗಿರುವ ಕಾರಣ..
1) ಶನಿ ಮತ್ತು ಗುರು ಗ್ರಹಗಳು ಸುತ್ತುತ್ತಿರುವಂತೆ ಸಮಭಾಜಕ ( Equator ) ಉದ್ದಕ್ಕೂ ಉಬ್ಬುತ್ತವೆ. ಏಕೆಂದರೆ ಒಂದು ಗ್ರಹವು ತಿರುಗಬೇಕಾದರೆ ಹೊರ ಅಂಚಿನಲ್ಲಿರುವ ವಸ್ತುಗಳು ಒಳಗಿನ ವಸ್ತುಗಳಿಗಿಂತ ವೇಗವಾಗಿ ಪ್ರಯಾಣಿಸುತ್ತವೆ.
ಗ್ರಹಗಳು ಎಷ್ಟು ವೇಗವಾಗಿ ತಿರುಗುತ್ತವೆಯೋ ಅವುಗಳ ಸಮಭಾಜಕದ ಕಡೆ ಜಾಸ್ತಿ ಬಲ್ಜ್ ಆಗುತ್ತದೆ. ತಿರುಗುವಿಕೆಯಿಂದಾಗಿ ( Spinning) ವಸ್ತುಗಳು ಗ್ರಹದಿಂದ ಹಾರಲು ಬಯಸುವ ವಿಧಾನ ಮತ್ತು ಗುರುತ್ವಾಕರ್ಷಣೆಯು ಆ ಗ್ರಹದ ವಸ್ತುಗಳನ್ನು ಒಳಕ್ಕೆ ಎಳೆಯಲು ಬಯಸುವ ವಿಧಾನ ವೇ ಹಗ್ಗ ಜಗ್ಗಾಟ. ಈ ಹಗ್ಗ ಜಗ್ಗಾಟದ ಶಕ್ತಿಯು ಸಮಭಾಜಕದಲ್ಲಿ ತೀರ್ವವಾಗಿರುತ್ತದೆ.
ಹಾಗಾಗಿ ಜಾಸ್ತಿ ತಿರುಗುವ ( Spinning) ಗ್ರಹಗಳು ಜಾಸ್ತಿ ಬಲ್ಜ್ ಆಗಿರುತ್ತವೆ. ಶನಿ ಮತ್ತು ಗುರು ಗ್ರಹಗಳು ಬೇರೆಲ್ಲ ಗ್ರಹಗಳಿಗಿಂತ ವೇಗವಾಗಿ ತಿರುಗುವ ಕಾರಣ ಜಾಸ್ತಿ ಬಲ್ಜ್ ಆಗಿರುತ್ತವೆ.
ಭುಧ ಮತ್ತು ಶುಕ್ರ ಅತಿ ನಿಧಾನವಾಗಿ ತಿರುಗುವ ಕಾರಣ ಪರಿಪೂರ್ಣ ಗೋಳಗಳಾಗಿವೆ.
Spinning (ತಿರುಗುವಿಕೆ) speeds of the 8 planets.
ಗ್ರಹ / ತಿರುಗುವ ವೇಗ. / ತಗಲುವ ಸಮಯ
ಗುರು — 45,583 ಕಿ ಮೀ / ಗಂಟೆಗೆ - 9 ಗಂಟೆ, 55 ನಿ.
ಶನಿ — 36,840 ಕಿ ಮೀ/ ಗಂಟೆಗೆ - 10 ಗಂಟೆ, 33 ನಿ.
ಯುರೇನಸ್ — 14,784 ಕಿ ಮೀ/ಗಂಟೆಗೆ- 17ಗ, 14 ನಿ.
ನೆಪ್ಚೂನ್ — 9719 ಕಿ ಮೀ/ಗಂಟೆಗೆ - 18 ಗ, 26ನಿ.
ಭೂಮಿ — 1674 ಕಿ ಮೀ/ಗಂಟೆಗೆ - 23 ಗ, 56 ನಿ.
ಮಂಗಳ — 866 ಕಿ ಮೀ/ಗಂಟೆಗೆ - 24 ಗ, 36 ನಿ.
ಶುಕ್ರ. — 6.52 ಕಿ ಮೀ/ ಗಂಟೆಗೆ - 243 ದಿನ, 26 ಗ.
ಭುದ — 10.83 ಕಿ ಮೀ/ ಗಂಟೆಗೆ - 58 ದಿನ, 16 ಗ.
2) ನಮ್ಮ ಸೌರವ್ಯೂಹದ ಎಲ್ಲಾ ಗ್ರಹಗಳಿಗಿಂತ ಶನಿಯು ಜಾಸ್ತಿ ಬಲ್ಜ್ ( Bulge ) ಆಗುತ್ತದೆ. ನೀವು ಧ್ರುವದಿಂದ ಧ್ರುವಕ್ಕೆ ಹೋಲಿಸಿದಲ್ಲಿ ಅದು ಒಂದೇ ಆಗಿರುವುದಿಲ್ಲ. ಶನಿಯು ಮಧ್ಯದಲ್ಲಿ 10.7% ದಪ್ಪವಾಗಿರುತ್ತದೆ. ಗುರು ಗ್ರಹವು ಮಧ್ಯದಲ್ಲಿ 6.9% ದಪ್ಪವಾಗಿರುತ್ತದೆ. ಹಾಗಾಗಿ ಶನಿಯು ಗುರು ಗ್ರಹಕಿಂತ ಜಾಸ್ತಿ ಬಲ್ಜ್ ಆಗಿರುತ್ತದೆ.
ಯುರೇನಸ್ ಮಧ್ಯದಲ್ಲಿ 2.3% ದಪ್ಪವಾಗಿ , ನೆಪ್ಚೂನ್ 1.7% ದಪ್ಪವಾಗಿರುತ್ತದೆ.ಅವು ಸಹ ಪೂರ್ಣವಾಗಿ ದುಂಡಗಿರುವುದಿಲ್ಲ
ಮಂಗಳ ಮತ್ತು ಭೂಮಿ ಗ್ರಹಗಳು ಚಿಕ್ಕದಾಗಿವೆ ಮತ್ತು ಶನಿ ಮತ್ತು ಗುರು ಗ್ರಹಗಳಂತೆ ವೇಗವಾಗಿ ತಿರುಗುವುದಿಲ್ಲ , ಆದರೆ ಶನಿ ಮತ್ತು ಗುರು ಗ್ರಹಗಳಿಗಿಂತ ದುಂಡಗಿರುತ್ತವೆ. ಮಂಗಳವು ಮಧ್ಯದಲ್ಲಿ ೦.6% ಮತ್ತು ಭೂಮಿಯು ೦.3 % ದಪ್ಪಗಿರುತ್ತವೆ. ಇವುಗಳು ಸಹ ಪೂರ್ಣವಾಗಿ ದುಂಡಗಿರುವುದಿಲ್ಲ.
ಭುದ ಮತ್ತು ಶುಕ್ರ ಗ್ರಹಗಳು ಎಲ್ಲಕ್ಕಿಂತ ದುಂಡಾಗಿರುತ್ತವೆ. ಅವು ಗೋಲಿಗಳಂತೆ ಬಹುತೇಕ ಪರಿಪೂರ್ಣ ಗೋಳಗಳಾಗಿವೆ.