ವಾಹನಗಳ ಶಕ್ತಿಯನ್ನು ಅಶ್ವ ಶಕ್ತಿಯಲ್ಲಿ ಯಾಕೆ ಅಳೆಯುತ್ತಾರೆ?

SANTOSH KULKARNI
By -
0

 ಎಂಜಿನ್ ಗಳ ಅವಿಷ್ಕಾರವಾಗುವ ಕಾಲಘಟ್ಟದಲ್ಲಿ ಬಹುಪಾಲು ಸಾರಿಗೆ ಕುದುರೆಬಂಡಿಗಳು. ಎಂಜಿನ್ ಅನ್ನು ಅದೇ ಬಂಡಿಗಳಲ್ಲಿ ಕುದುರೆಗಳ ಬದಲಾಗಿ ಬಳಸಬೇಕಾದಾಗ ಅದರ ಕ್ಷಮತೆಯನ್ನು ಜನರಿಗೆ ಸುಲಭವಾಗಿ ಅರ್ಥ ಮಾಡಿಸಲು ಅದರ ಶಕ್ತಿಯನ್ನು ಕುದುರೆಗಳ ಶಕ್ತಿಯ ಜೊತೆ ಹೋಲಿಸಿ ಬಹಳ ಬುದ್ಧಿವಂತಿಕೆಯಿಂದ ಮಾರಾಟಕ್ಕೆ ಅನುಕೂಲ ಮಾಡಿಕೊಂಡಿದ್ದಾರೆ.

ಇದರಿಂದ ಹುಟ್ಟಿದ ಈ ಹೊಸ ಮಾನಕವು, ಎರಡು ಭಿನ್ನ ಶಕ್ತಿಗಳ (ಮಾನಕಗಳ) ಹೋಲಿಕೆಗೆ ಸಹಕಾರಿಯಾಯಿತು.

ಕುದುರೆಗಳು ಇಂತಿಷ್ಟು ಭಾರದ ಬಂಡಿಯನ್ನು ಇಂತಿಷ್ಟು ದೂರಕ್ಕೆ ಇಷ್ಟು ಸಮಯದಲ್ಲಿ ಎಳೆಯುವುದು ಹಾಗೂ ಅದೇ ಬಂಡಿಯ ಕೆಲಸವನ್ನು ಎಂಜಿನ್ ಮತ್ತಷ್ಟು ಸುಲಭವಾಗಿ ಮಾಡುವುದು ಎಂಬುದನ್ನು ಸಾಮಾನ್ಯ ಜನರಿಗೆ ಅರ್ಥವಾಗಿಸಿದ್ದು, ಎಂಜಿನ್ನಿನ ಜನಪ್ರಿಯತೆಯನ್ನು ಹೆಚ್ಚಿಸಿದ್ದಲ್ಲದೆ ಅದೇ ಮಾನಕವನ್ನು ನಾವು ಇಲ್ಲಿಯವರೆಗೆ ಬಳಸುತ್ತಿರುವುದು ಇದಕ್ಕೆ ಸಾಕ್ಷಿ.

ಇದೇ ಮಾನಕವನ್ನು ಎಲೆಕ್ಟ್ರಿಕ್ ಮೋಟರುಗಳ, ಹಾಗೂ ನೀರೆತ್ತುವ ಪಂಪ್ ಗಳ ಕ್ಷಮತೆಯನ್ನು ಸೂಚಿಸಲು ಸಹ ಬಳಸಲಾಗುತ್ತದೆ

(ಚಿತ್ರದಲ್ಲಿ ಗಮನಿಸುವುದಾದರೆ,

1ಅಶ್ವ ಶಕ್ತಿ ಎಂದರೆ ಒಂದು ಕುದುರೆಯು 1 ಸೆಕೆಂಡ್ ನಲ್ಲಿ ಸುಮಾರು 75ಕಿ.ಗ್ರಾಂ ನಷ್ಟು ಭಾರವನ್ನು 1 ಮೀಟರ್ ನಷ್ಟು ಮೇಲೆತ್ತಲು ಬೇಕಾಗುವಷ್ಟು ಶಕ್ತಿ ಎಂದರ್ಥ)

Post a Comment

0Comments

Post a Comment (0)