‘ವಿದ್ಯುತ್ ತಂತಿ’ ಎನ್ನುವುದು ಸಾಮಾನ್ಯ ಪದ.
ಮನೆ/ ಔದ್ಯೋಗಿಕ ಬಳಕೆ - ನಾವು ಮನೆಯಲ್ಲಿ, ಕಾರ್ಖಾನೆಗಳಲ್ಲಿ ಬಳಸುವ ವಿದ್ಯುತ್ ತಂತಿಗಳಿಗೆ ಇನ್ಸುಲೇಶನ್ ಕವಚ ಇದ್ದೇ ಇರುತ್ತದೆ. ಇದು ವಿದ್ಯುತ್ ತಂತಿಯನ್ನು ಮುಟ್ಟಿ ಜನರಿಗೆ / ಪ್ರಾಣಿಗಳಿಗೆ ಆಗಬಹುದಾದ ಅಪಾಯವನ್ನು ತಡೆಗಟ್ಟುತ್ತದೆ.
ಸಾಗಾಣಿಕೆ - ವಿದ್ಯುತ್ತನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ತಂತಿಗಳಿಗೆ ಇನ್ಸುಲೇಶನ್ ಕವಚ ಹಾಕಿರುವುದಿಲ್ಲ. ಇವುಗಳನ್ನು ಸಾಮಾನ್ಯವಾಗಿ ಮನುಷ್ಯ / ಪ್ರಾಣಿಗಳು ತಲುಪದಷ್ಟು ಎತ್ತರದಲ್ಲಿ ಹಾಕಿರುತ್ತಾರೆ. ಹೀಗಾಗಿ ಇಲ್ಲಿ ಇನ್ಸುಲೇಶನ್ ಅಗತ್ಯವಿರುವುದಿಲ್ಲ. ಕೆಲವೊಮ್ಮೆ ಪಕ್ಷಿಗಳು ತಂತಿಯ ಮೇಲೆ ಕುಳಿತುಕೊಳ್ಳುವುದುಂಟು. ಆದರೆ ಈ ತಂತಿಗಳ ನಡುವಣ ಅಂತರವನ್ನು ಹೆಚ್ಚಾಗಿ ಇಟ್ಟು, ಒಂದೇ ಪಕ್ಷಿಯು ಎರಡು ತಂತಿಗಳ ಮೇಲೆ ಒಮ್ಮೆಲೇ ಕುಳಿತುಕೊಳ್ಳಲಾರದಂತೆ ಮಾಡಿರುತ್ತಾರೆ. ಇಲ್ಲಿ ಶಾರ್ಟ ಸರ್ಕೀಟ ಆಗುವ ಸಂಭವ ಇರುವುದಿಲ್ಲ.
ರೇಲ್ವೇ / ಟ್ರಾಮ್ ತಂತಿಗಳು - ಇಲೆಕ್ಟ್ರಿಕ್ ರೇಲ್ವೆ ಹಾಗೂ ಟ್ರಾಮ್ ಗಳು ಮೇಲಿನ ವಿದ್ಯುತ್ ತಂತಿಗಳಿಂದ ನೇರವಾಗಿ ವಿದ್ಯುತ್ ಪಡೆಯುವದರಿಂದ ಇವುಗಳಿಗೆ ಇನ್ಸುಲೇಶನ್ ಹಾಕಿರುವುದಿಲ್ಲ. ಆದರೆ ಸುರಕ್ಷತೆಯ ದೃಷ್ಟಿಯಿಂದ ಇವನ್ನು ಜನರ ಹಾಗೂ ಪ್ರಾಣಿಗಳ ಸಂಪರ್ಕದಲ್ಲಿ ಬರದಂತೆ ಮೇಲೆ ಹಾಕಿರುತ್ತಾರೆ. ಇಲ್ಲಿ ಒಂದೇ ಲೈನ ಇರುವುದರಿಂದ ಶಾರ್ಟ ಸರ್ಕೀಟ ಪ್ರಶ್ನೆಯೇ ಬರುವುದಿಲ್ಲ.