ಡೆಂಗೀ ಜ್ವರ ಹೇಗೆ ಹರಡುತ್ತದೆ ಮತ್ತು ಇದಕ್ಕೆ ಲಭ್ಯವಿರುವ ಚಿಕಿತ್ಸೆಗಳು ಯಾವುವು?

SANTOSH KULKARNI
By -
0

 ಮೊದಲನೇದಾಗಿ ಡೆಂಗೀ ಜ್ವರ ಹೇಗೆ ಬರುತ್ತೆ ಅನ್ನೋದನ್ನ ನೋಡೋಣ!

ಡೆಂಗೀ ಜ್ವರ ವೈರಸ್ ನಿಂದ ಉಂಟಾಗುತ್ತದೆ. ಈ ವೈರಸ್‌ಗೂ ‘ಡೆಂಗೀ ವೈರಸ್’‌ ಅಂತನೇ ಹೆಸರು. ಡೆಂಗೀ ವೈರಸ್ ಒಂದು ಆರ್. ಎನ್.ಎ (RNA) ವೈರಸ್; ಅದರಲ್ಲಿ 5 ವಿಧಗಳಿವೆ.

ಈಗ, ಪ್ರಶ್ನೆಗಳಿಗೆ ಉತ್ತರ!

I. ಪ್ರಶ್ನೆಯ ಮೊದಲ ಭಾಗ:

  • ‘ಡೆಂಗೀ ಜ್ವರ ಹೇಗೆ ಹರಡುತ್ತದೆ?’

ಸಂಕ್ಷಿಪ್ತವಾಗಿ ಹೇಳುವುದಾದರೆ, ಸೊಳ್ಳೆ ಕಡಿತದಿಂದ ಡೆಂಗೀ ಜ್ವರ ಹರಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ‘ಈಡಿಸ್‌’ ಸೊಳ್ಳೆಗಳ ಕಡಿತದ ಮೂಲಕ ಹರಡುತ್ತದೆ.

ಈಗ ಈಡಿಸ್ ಸೊಳ್ಳೆಯ ಬಗ್ಗೆ…

1.ಹೇಗೆ ಕಾಣುತ್ತೆ?

ಅದರ ದೇಹದ ಮೇಲೆ ಬಿಳಿ ಮತ್ತು ಕಪ್ಪು ಬಣ್ಣಗಳು ಇರುವುದರಿಂದ ವಿಶಿಷ್ಟವಾಗಿದೆ

2. ಎಲ್ಲಿ ಇರುತ್ತೆ/ ಬೆಳೆಯುತ್ತೆ?

ತೆರೆದಿರುವ ಪಾತ್ರೆಗಳು, ಟೈರುಗಳು, ತೆಂಗಿನ ಚಿಪ್ಪುಗಳು, ಒಳಾಂಗಣ ಸಸ್ಯಗಳಂತಹ ಕೃತಕ ನೀರು ಸಂಗ್ರಹ ತಾಣಗಳಲ್ಲಿ

3. ಯಾವಾಗ ಕಚ್ಚುತ್ತೆ?

ಸಾಮಾನ್ಯವಾಗಿ ಹಗಲಿನ ವೇಳೆಯಲ್ಲಿಯೇ ಇವು ಕಚ್ಚುತ್ತವೆ. ಇದನ್ನು ಇಂಗ್ಲಿಷ್‌ನಲ್ಲಿ ‘Day Time biter’ ಎಂದು ಕರೆಯುತ್ತೇವೆ.

II. ಪ್ರಶ್ನೆಯ ಎರಡನೆ ಭಾಗ

  • ಇದಕ್ಕೆ (ಡೆಂಗೀ ಜ್ವರಕ್ಕೆ) ಲಭ್ಯವಿರುವ ಚಿಕಿತ್ಸೆಗಳು ಯಾವುವು?
    • ಇತರ ಅನೇಕ ವೈರಸ್ ರೋಗಗಳಂತೆ, ಡೆಂಗೀ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ
    • ಡೆಂಗೀ ರೋಗಿಗಳು ಸಾಕಷ್ಟು ದ್ರವವನ್ನು ಕಳೆದುಕೊಳ್ಳುವುದರಿಂದ (fluid loss), ಉತ್ತಮ ಪುನರ್ಜಲೀಕರಣವು (rehydration) ಚಿಕಿತ್ಸೆಯ ಪ್ರಮುಖ ಗುರಿ. ಮೌಖಿಕ ಮತ್ತು ಅಭಿದಮನಿಕ (Oral and intravenous) ದ್ರವ ಕೊಡುವುದ ಮೂಲಕ ಇದನ್ನು ಸಾಧಿಸಬಹುದು. ಇದನ್ನೇ ‘ಡ್ರಿಪ್ಸ್ ಹತ್ತಿಸಲು’ ಎಂದು ಕರೆಯುತ್ತಾರೆ!
    • ಲಭ್ಯವಿರುವ ಇತರ ರೋಗಲಕ್ಷಣಗಳಿಗೆ ತಕ್ಕ ಚಿಕಿತ್ಸೆಗಳು:
      • ಜ್ವರವನ್ನು ಕಡಿಮೆ ಮಾಡಲು ಪ್ಯಾರಸಿಟಮಾಲ್
    • ನೋವು ಕಡಿಮೆ ಮಾಡಲು - ಆಸ್ಪಿರಿನ್ ಹೊರತುಪಡಿಸಿ, ಇತರ ನೋವು ನಿವಾರಕಗಳು (NSAIDs)
    • ಪ್ಲೇಟ್‌ಲೆಟ್‌ಗಳನ್ನು ತುಂಬಲು ರಕ್ತ ವರ್ಗಾವಣೆ (ತೀವ್ರತರವಾದ ಪ್ರಕರಣಗಳಲ್ಲಿ ಮಾತ್ರ)
    • ಇತ್ತೀಚೆಗೆ ಡೆಂಗೀಗೆ ‘ಸಿವೈಡಿ-ಟಿಡಿವಿ’ (CYD-TDV) ಎಂಬ ಲಸಿಕೆ (vaccine) ಪರಿಚಯಿಸಲಾಯಿತು. ಇದು ಮೆಕ್ಸಿಕೊ, ಇಂದೋನೇಷಯ, ಪೆರು ಮುಂತಾದ 11 ದೇಶಗಳಲ್ಲಿ ಲಭ್ಯವಿದೆ; ಆದರೆ ಭಾರತಕ್ಕೆ ಇನ್ನೂ ಬಂದಿಲ್ಲಾ!

Post a Comment

0Comments

Post a Comment (0)