ಮಲಬದ್ಧತೆ ನಿವಾರಣೆಗೆ ಅನುಸರಿಸುವ ಕ್ರಮಗಳು ಏನು?

SANTOSH KULKARNI
By -
0

 ಉತ್ತರ ತುಂಬಾ ಸರಳ. ಜೀವನ ವಿಧಾನ ಮತ್ತು ಆಹಾರ ವಿಧಾನದಲ್ಲಿ ಸ್ವಲ್ಪಮಟ್ಟಿನ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ನಿಯಂತ್ರಣಕ್ಕೆ ತರಬಹುದು. ಆದರೆ ಈ ಬದಲಾವಣೆಯನ್ನು ನಿಧಾನಗತಿಯಲ್ಲಿ ಪ್ರಾರಂಭಿಸಿ ದೇಹವನ್ನು ಹೊಂದಿಸಿಕೊಂಡು ನಂತರ ಮುಂದುವರಿಯಬೇಕು.

ಮೊದಲಿಗೆ ಮಲಬದ್ಧತೆ ನಿವಾರಣೆಗೆ ನೆನಪಿಡಬೇಕಾದ ಮೂರು ಅಂಶಗಳೆಂದರೆ ನೀರು, ನಾರು, ಬೇರು. ಹಿಂದಿನಿಂದಲೂ ನಿಮ್ಮ ಪೂರ್ವಿಕರು ಬಳಸಿಕೊಂಡು ಬಂದಿರುವ ನಿಮ್ಮ ಪರಿಸರದ ಪ್ರಾದೇಶಿಕ ಆಹಾರ ಪದ್ಧತಿಯನ್ನು ಅನುಸರಿಸಿ.ಆಹಾರ ಕ್ರಮದಲ್ಲಿ ನೀರು, ನಾರು , ಬೇರು ಮೂಲವಾಗಿ ಉಳ್ಳ ತರಕಾರಿ ಗಳನ್ನು ಹೆಚ್ಚಾಗಿರುವ ಆಹಾರ ಸೇವಿಸಿ. ಮುದ್ದೆ/ಅನ್ನ /ರೊಟ್ಟಿಯ ಜೊತೆಗೆ ಸಾಂಬಾರಿನಲ್ಲಿ ತರಕಾರಿಗಳು (ಕ್ಯಾರೆಟ್ /ಬೀಟ್ರೂಟ್ /ಮೂಲಂಗಿ ಇತ್ಯಾದಿ ಬೇರು ಮೂಲದ ತರಕಾರಿಗಳು ಕೂಡ ಇರುವ ಹಾಗೆ). ಪ್ರತಿದಿನ ಯಾವುದೇ ನಿಮಗೆ ಇಷ್ಟವಾದ ಸೊಪ್ಪನ್ನು ಸಾರು /ಬಸ್ಸಾರು ಇಲ್ಲವೇ ಪಲ್ಯದ ರೂಪದಲ್ಲಿ ಸೇವಿಸುವುದು .ಸೌತೆಕಾಯಿ ಇಲ್ಲವೇ ಅದರ ಕೋಸಂಬರಿ ಅನ್ನು ಪ್ರತಿನಿತ್ಯ ಸೇವಿಸುವ ಆಹಾರಕ್ಕೆ ಸೇರ್ಪಡೆ ಮಾಡಿಕೊಳ್ಳುವುದು. ಊಟದ ನಂತರ ಬಾಳೆಹಣ್ಣನ್ನು ಸೇವಿಸುವುದು.

ಮೂರು ನಿಧಾನ ವಿಷಗಳೆಂದೇ ಪರಿಗಣಿಸಲ್ಪಟ್ಟಿರುವ ಮೈದಾ, ಸಕ್ಕರೆ, ಉಪ್ಪಿನ ಬಳಕೆಯನ್ನು ಅದರಲ್ಲೂ ಮೈದಾದಿಂದ ತಯಾರಿಸಿದ ತಿಂಡಿಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ .

ದೀರ್ಘಕಾಲ ಒಂದೇ ಭಂಗಿಯಲ್ಲಿ ಕೂರುವುದನ್ನು ಕಡಿಮೆ ಮಾಡಿ.

ಸಮಯ, ಅವಕಾಶ ಸಿಕ್ಕಾಗ ಓಡಾಡಿ. ಯೋಗ ಪ್ರಾಣಾಯಾಮ ಧ್ಯಾನವನ್ನು ರೂಡಿಸಿಕೊಳ್ಳಿ. ಮಲಬದ್ಧತೆ ನಿವಾರಣೆಗೆಂದು ಕೆಲವು ಆಸನಗಳಿವೆ. ಸೂರ್ಯ ನಮಸ್ಕಾರ , ಪವನಮುಕ್ತಾಸನ, ಕಪಾಲಭಾತಿ ,ಧನುರಾಸನ, ಪ್ರಾಣಾಯಾಮ, ಉಜ್ಜಾ ಯಿ ಪ್ರಾಣಯಾಮ, ಭ್ರಮರಿ ಪ್ರಾಣಾಯಾಮ( ಸಾಧ್ಯವಾದರೆ ವಜ್ರಾಸನ ದಲ್ಲಿ ಮಾಡಲು ಯತ್ನಿಸಿ) . ಮುದ್ರೆಗಳಲ್ಲಿ ಶಂಖ ಮುದ್ರೆ ಮತ್ತು ಬಂಧಗಳಲ್ಲಿ ಮೂಲ ಬಂಧ ಮತ್ತು ಉಡ್ಯಾನ ಬಂಧಗಳನ್ನು ಅನುಸರಿಸುವುದರಿಂದ ಮಲಬದ್ಧತೆ ಹತೋಟಿಗೆ ತರಬಹುದು. (ಅಭ್ಯಾಸಗಳಿಗೆ ಯೋಗ ಗುರುಗಳ ಸಹಾಯ ಪಡೆಯಿರಿ).

Post a Comment

0Comments

Post a Comment (0)