ಅನಿಲ್ ಕುಂಬ್ಳೆಯವರ ಸಾಧನೆ ಏನು?

SANTOSH KULKARNI
By -
0

 ಅನಿಲ್ ಕುಂಬ್ಳೆ ಭಾರತ ದೇಶದಲ್ಲಿ ಇಲ್ಲಿವರೆಗೆ ಇರುವ ಎಲ್ಲಾ ಸ್ಪಿನ್ನರ್ಸ್ ಗಿಂತ ಅತ್ಯುತ್ತಮ ಸ್ಪಿನ್ನರ್. ಕೇವಲ ಭಾರತ ದೇಶದಲ್ಲಿ ಮಾತ್ರ ಅಲ್ಲ ಇವರು ಪ್ರಪಂಚದಲ್ಲೇ ಅತ್ಯುತ್ತಮ ಸ್ಪಿನ್ನರ್ಸ್ ಗಳಲ್ಲಿ ಒಬ್ಬರು. ಇವರ ಬಗ್ಗೆ ಒಂದು ಆಸಕ್ತಿಯಾದ ವಿಷಯ ಇದೆ. ಅದೇನೆಂದರೆ :

  • ಇವರು ಚೆಂಡುನ್ನು ಜಾಸ್ತಿ ಸ್ಪಿನ್ ಮಾಡಲ್ಲ . ಇವರ ಬಾಲಿಂಗ್ ನಲ್ಲಿ ಜಾಸ್ತಿ ವೇರಿಯೇಶನ್ಸ್ ಇರೋಲ್ಲ ಆದರೆ ಕೂಡ ಇವರು ಒಬ್ಬ ದೊಡ್ಡ ಸ್ಪಿನ್ನರ್ ಆಗಿದ್ದಾರೆ . ಅದು ತುಂಬಾ ದೊಡ್ಡ, ಆಶ್ಚರ್ಯಕರ ವಿಷಯ.

ಇವರು ೧೯೯೯ ವರ್ಷದಲ್ಲಿ ಪಾಕಿಸ್ತಾನ್ ವಿರುದ್ಧ ಒಂದು ಮ್ಯಾಚ್ ನಲ್ಲಿ ೧೦ ವಿಕೆಟ್ಗಳು ತಗೊಂಡಿದ್ದಾರೆ . ಆ ದಿನ ಭಾರತ ಇತಿಹಾಸದಲ್ಲಿ ೧೦ ವಿಕೆಟ್ಗಳು ತಗೊಂಡ ಮೊದಲನೆಯ ಆಟಗಾರು ಆಗಿದ್ದಾರೆ ನಮ್ಮ ಕುಂಬ್ಳೆಯವರು . ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಈವರೆಗೆ ಕೇವಲ ಎರಡು ಆಟಗಾರರು ಮಾತ್ರ ೧೦ ವಿಕೆಟ್ಗಳು ತಗೊಂಡಿದ್ದಾರೆ . ಈ ದಾಖಲೆ ಜೀವನದ ಕಾಲದಲ್ಲಿ ಒಬ್ಬರೋ ಇಬ್ಬರೋ ಸಾಧಿಸುತ್ತಾರೆ ಅಷ್ಟೇ. ಅದು ನಮ್ಮ ಅನಿಲ್ ಕುಂಬ್ಳೆ ಅವರು ಸಾಧಿಸುವುದು ನಿಜವಾಗಲೂ ನಮಗೆ ಒಂದು ಗರ್ವ ವಿಷಯ.

ಇವರು ಇಂಗ್ಲೆಂಡ್ ವಿರುದ್ಧ ಒಂದು ಮ್ಯಾಚಲ್ಲಿ ಸೆಂಚರಿ ಮಾಡಿ ಎಲ್ಲರನ್ನೂ ಆಶ್ಚರ್ಯಪಡಿಸಿದರು. ಸಾಧಾರಣವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಒಬ್ಬ ಬೌಲರ್ ಗೆ ಸೆಂಚರಿ ಮಾಡುವುದು ತುಂಬಾ ಕಷ್ಟ ಆದರೆ ಈ ಮ್ಯಾಚಲ್ಲಿ ಇವರು ಅಸಾಧ್ಯವನ್ನು ಸಾಧ್ಯ ಮಾಡಿದರು.

ಆಸ್ಟ್ರೇಲಿಯ ವಿರುದ್ಧ ಒಂದು ಮ್ಯಾಚಲ್ಲಿ ನಮ್ಮ ಭಾರತ ದೇಶ ಕೊನೆಯ 8 ಓವರ್ ಗಳಲ್ಲಿ ೫೨ ರನ್ ಗಳು ಮಾಡಬೇಕು . ಎಲ್ಲರೂ ನಮ್ಮ ಭಾರತ ದೇಶ ಆಟವನ್ನು ಕಳೆದುಕೊಳ್ಳುತ್ತದೆ ಅಂತ ಅಂದುಕೊಂಡಿದ್ದರು ಆದರೆ ನಮ್ಮ ಕನ್ನಡಿಗರು ಜವಾಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಆ ದಿನ ಅದ್ಭುತವಾಗಿ ಆಡಿ ನಮ್ಮ ಭಾರತ ದೇಶಗೆ ಗೆಲುವುನ್ನು ನೀಡಿದರು. ಆ ಮ್ಯಾಚನ್ನು ಈಗ ಕೂಡ ಅನೇಕ ಜನರು ನೆನಪಿಟ್ಟುಕೊಳ್ಳುತ್ತಾರೆ , ಈಗ ಕೂಡ ಅದರ ಬಗ್ಗೆ ಮಾತನಾಡುತ್ತಾರೆ. ಅಷ್ಟು ಅದ್ಭುತ ಆಟ ಅದು.

೧೮೯ ರನ್ ಗಳು ಮಾಡಿ ಆಸ್ಟ್ರೇಲಿಯಾ ಚೆನ್ನಾಗೆ ಆಡುವಾಗ ಅನಿಲ್ ಕುಂಬ್ಳೆ ಅವರು ಬಂತು ಎಲ್ಲಾ ಆಟನು ಒಂದು ಸೆಷನ್ ನಲ್ಲಿ ಬದಲಾಯಿಸಿದರು. ಒಂದು ಅಸಾಧಾರಣ ಬೋಲಿಂಗ್ ಮಾಡಿದರು. ಈ ರೀತಿ ಬೌಲರ್ ಹೊಂದಿರುವುದೇ ನಮ್ಮ ಅದೃಷ್ಟ.

ಆಸ್ಟ್ರೇಲಿಯಾ ಸೀರಿಸ್ ಗೆ ಅನಿಲ್ ಕುಂಬ್ಳೆನ್ನು ಆಯ್ಕೆ ಮಾಡಬಾರದು ಅಂತ ಸೆಲೆಕ್ಟರ್ಸ್ ಹೇಳುವಾಗ ಸೌರವ್ ಗಂಗುಲಿ ಇವರನ್ನು ಖಂಡಿತವಾಗಿ ಆಯ್ಕೆ ಮಾಡಬೇಕು ಅಂತ ಹೇಳಿದರು ಆಗ ಸೆಲೆಕ್ಟರ್ಸ್ಗಗಳು ಅನಿಲ್ ಕುಂಬ್ಳೆ ಅವರು ಈ ಸಿರಿಸ್ ನಲ್ಲಿ ಚೆನ್ನಾಗಿ ಆಡಲಿಲ್ಲ ಅಂದರೆ ಸೌರವ್ ಗಂಗುಲಿ ಕ್ಯಾಪಿಟನ್ಸಿ ಬಿಡಬೇಕು ಅಂತ ಹೇಳಿದರು. ಆ ಸೀರೀಸ್ ನಲ್ಲಿ ಕುಂಬ್ಳೆ ಅವರೇ ಎಲ್ಲರಿಗಿಂತ ಹೆಚ್ಚು ವಿಕೆಟ್ ಗಳನ್ನು ತಗೊಂಡು ಒಂದು ಇನಿಂಗ್ಸಲ್ಲಿ ೮ ವಿಕೆಟ್ಗಳನ್ನು ತಗೊಂಡು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಇವರು ಮೇಲೆ ಅಷ್ಟು ನಂಬಿಕೆ ಇರುತ್ತದೆ ಜನರಿಗೆ.

ಐಪಿಎಲ್ ನಲ್ಲಿ ಒಂದು ಮ್ಯಾಚಿನಲ್ಲಿ ಇವರು ೫ ರನ್ ಗಳು ನಿಡಿ ೫ ವಿಕೆಟ್ಗಳು ತಗೊಂಡಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ. ಈಗಲೂ ಇವರಿಗಿಂತ ಚೆನ್ನಾಗಿ ಬೌಲಿಂಗ್ ಪ್ರದರ್ಶನ ಯಾರು ಮಾಡಲಿಲ್ಲ. ಈ ರೀತಿಯಲ್ಲಿ ಇವರು ಒಂದು ಅತ್ಯುತ್ತಮ ಅಸಾಧಾರಣವಾದ ಪ್ರದರ್ಶನಗಳನ್ನು ನೀಡಿದರು.

ಹೀಗೆ ನಮ್ಮ ಅನಿಲ್ ಕುಂಬ್ಳೆ ಅವರು ಎಷ್ಟೋ ಅದ್ಭುತವಾದ ಪ್ರದರ್ಶನಗಳನ್ನು ನೀಡಿ ನಮ್ಮ ಭಾರತ ದೇಶಗೆ ಅನೇಕ ಆಟಗಳನ್ನು ಗೆಲ್ಲಿಸಿದ್ದರು. ಈ ರೀತಿ ಅದ್ಭುತವಾದ ಬೌಲರ್ ನಮ್ಮ ಕನ್ನಡಿಗ ಆಗುವುದು ನಿಜವಾಗಲೂ ನಮಗೆ ಒಂದು ಗರ್ವ ವಿಷಯ. ಅನಿಲ್ ಕುಂಬ್ಳೆ ಭಾರತ ಇತಿಹಾಸದಲ್ಲೇ ಅತ್ಯುತ್ತಮ ಬೌಲರ್. ಇವರ ದಾಖಲೆಗಳನ್ನು ಬ್ರೇಕ್ ಮಾಡೋದು ಯಾರಿಗಾದರೂ ತುಂಬಾ ಕಷ್ಟ. ಅನಿಲ್ ಕುಂಬ್ಳೆನಂತ ಬೌಲರ್ ಭಾರತ ದೇಶಕ್ಕೆ ಮತ್ತೆ ಬರಲ್ಲ. ಇವರು ಈ ಕಾಲದಲ್ಲಿ ಸ್ಪಿನ್ ಪಿಚ್ಚಸ್ ನಲ್ಲಿ ಆಡಿದರೆ ಇನ್ನೂ ಎಷ್ಟು ವಿಕೆಟ್ಗಳು ತೆಗೆದುಕೊಳ್ಳುತ್ತಾರೆ ಅನ್ನೋದು ಊಹಿಸಲೇ ಆಶ್ಚರ್ಯವಾಗಿದೆ ಇರುತ್ತದೆ. ಖಂಡಿತವಾಗಿ ಭಾರತ ದೇಶಕ್ಕೆ ಆಡಿದ ಅತ್ಯುತ್ತಮ ಬೌಲರುಗಳಲ್ಲಿ ಅವರು ನಂಬರ್ ವನ್.

Post a Comment

0Comments

Post a Comment (0)